ಭಾರತೀಯ ಮುಸ್ಲಿಮರನ್ನು ಕೊಂಡಾಡಿದ ರಾಜನಾಥ ಸಿಂಗ್

0
1228

ಭಾರತೀಯ ಮುಸ್ಲಿಮರು ವಿಶ್ವದಲ್ಲಿಯೇ ಅತ್ಯುತ್ತಮರು ಎಂದಿರುವ ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಅವರು, ಮುಸ್ಲಿಮರು ಭಾರತಕ್ಕೆ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಇಸ್ಲಾಮಿನ ಎಲ್ಲ ಪಂಥಗಳೂ ಜೊತೆಯಾಗಿ ಬದುಕುವ ದೇಶ ಇದು. ವಿಶ್ವದ ಇನ್ನಾವ ರಾಷ್ಟ್ರದಲ್ಲೂ ಇಂಥದ್ದೊಂದು ವಾತಾವರಣವಿಲ್ಲ. ಭಾರತವು ಮುಸ್ಲಿಮರ ಆಯ್ಕೆಯ ದೇಶವಾಗಿದೆ. ದೇಶವು ಇಬ್ಬಾಗವಾಗುವಾಗ ಅವರು ಈ ದೇಶವನ್ನೇ ಆಯ್ಕೆಮಾಡಿಕೊಂಡರು. ಅವರು ಬಯಸಿರುತ್ತಿದ್ದರೆ ಇಲ್ಲಿಂದ ಹೋಗಬಹುದಿತ್ತು. ಆದರೆ, ಅವರು ಈ ದೇಶವನ್ನೇ ಆಯ್ಕೆಮಾಡಿಕೊಂಡರು ಎಂದು ದೆಹಲಿಯಲ್ಲಿ ನಡೆದ ಈದ್ ಮಿಲನ್ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರೊಂದಿಗೆ ಭಾಗವಹಿಸಿ ಮಾತಾಡುತ್ತಾ ಮುಸ್ಲಿಮರ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.