ಭೀಮಾ ಕೋರೇಗಾಂವ್ ಗಲಭೆಯ ಪ್ರತ್ಯಕ್ಷದರ್ಶಿ ಯುವತಿಯ ಶವ ಬಾವಿಯಲ್ಲಿ ಪತ್ತೆ: ಮತ್ತೆ ದಲಿತ- ಸವರ್ಣೀಯ ಸಂಘರ್ಷದ ಭೀತಿ 

0
1234

: ಸಲೀಮ್ ಬೋಳಂಗಡಿ
ಮಹಾರಾಷ್ಟ್ರದ ಬೀಮಾ ಕೋರಗಾಂವ್ ಗಲಭೆಯ ಪ್ರತ್ಯಕ್ಷದರ್ಶಿಯಾದ ಹತ್ತೊಂಬತ್ತರ ಹರೆಯದ ಯುವತಿ ಪೂಜಾ ಸಾಕೇತ್‍ರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಶುಕ್ರವಾರದಿಂದ ಈಕೆ ನಾಪತ್ತೆಯಾಗಿದ್ದಳು. ಭಾನುವಾರ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಜನವರಿಯಲ್ಲಿ ದಲಿತರ ವಿರುದ್ಧ ನಡೆದ ಗಲಭೆಯಲ್ಲಿ ಪೂಜಾಳ ಮನೆಯೂ ಅಗ್ನಗಾಹುತಿಯಾಗಿತ್ತು. ಆ ಬೆಂಕಿಯ ಪ್ರತ್ಯಕ್ಷದರ್ಶಿಯಾಗಿದ್ದ ಈಕೆಯ ವಿರುದ್ದ ಗಲಭೆಕೋರರಿಂದ ತೀವ್ರ ಒತ್ತಡವಿತ್ತು. ಈಕೆಯ ಸಾವು ಆತ್ಮಹತ್ಯೆಯ ಮೂಲಕ ನಡೆದಿದೆಯೆಂದು ಪೋಲೀಸರು ಪ್ರಾಥಮಿಕ ವರದಿ ನೀಡಿದ್ದಾರೆ. ಈಗಾಗಲೇ ಇದರ ವಿರುದ್ದ ಈರ್ವರನ್ನು ಬಂಧಿಸಲಾಗಿದೆ.

ಗಲಭೆಯ ಪ್ರತ್ಯಕ್ಷದರ್ಶಿಯಾದ ಹತ್ತೊಂಬತ್ತರ ಹರೆಯದ ಯುವತಿ ಪೂಜಾ ಸಾಕೇತ್‍

ಗಲಭೆಯ ಸಂತ್ರಸ್ತರ ಪುನರ್ವಸತಿ ಕೇಂದ್ರದ ಬಳಿಯ ಬಾವಿಯೊಂದರಲ್ಲಿ ಅವಳ ಶವ ಪತ್ತೆಯಾಗಿದೆ. ಗಲಭೆಕೋರರಿಂದ ಆಕೆ ತೀವ್ರ ಒತ್ತಡ ಎದುರಿಸುತ್ತಿದ್ದಳು ಎಂಬುದನ್ನು ಆಕೆಯ ಮನೆಯವರು ಹೇಳಿದ್ದಾರೆ.ಆದರೆ, ಈ ಕುರಿತಂತೆ ಯಾರೂ ಪೋಲೀಸ್ ದೂರು ಕೊಟ್ಟಿರಲಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ. ಗಲಭೆಕೋರರಿಂದ ಆಹುತಿಯಾದ ಮನೆಯ ಪುನರ್ನಿರ್ಮಾಣಕ್ಕಾಗಿ ಆಕೆಯ ಕುಟುಂಬವು ಸರಕಾರದ ಪರಿಹಾರದ ನಿರೀಕ್ಷೆಯಲ್ಲಿತ್ತು. ಈ ಹಣ ಸಿಗಲು ತಡವಾದುದು ಆತ್ಮಹತ್ಯೆಗೆ ಕಾರಣವಾಯಿತೋ ಎಂಬ ಕುರಿತು ಕೂಡಾ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

1818ರ ಬ್ರಿಟೀಷರ ಈಸ್ಟ್ ಇಂಡಿಯಾ ಕಂಪೆನಿ ಹಾಗೂ ಮರಾಠರ ನಡುವೆ ಕೋರೆಗಾಂವ್ ನಲ್ಲಿ ಯುದ್ದ ನಡೆದಿತ್ತು. ಈಸ್ಟ್ ಇಂಡಿಯಾ ಕಂಪೆನಿಯ ಸೇನೆಯಲ್ಲಿ ದಲಿತರಿದ್ದರು. ಮೇಲ್ಜಾತಿಯವರು ಮರಾಠಾ ಸೇನೆಯಲ್ಲಿದ್ದರು. ಮೇಲ್ಜಾತಿಯವರು ಸೇರಿದ್ದ ಮರಾಠರ ಭಾರೀ ಸೇನೆಯು ಸೊಲುಂಡು ಈಸ್ಟ್ ಇಂಡಿಯಾ ಕಂಪೆನಿ ಗೆಲುವಿನ ದಡ ಸೇರಿತ್ತು. ಈ ಯುದ್ದದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ  ಇನ್ನೂರು ಮಂದಿ ಹತರಾದರೆ ಪೇಶ್ವೆಯರ ತಂಡದಿಂದ ಐನೂರು ಮಂದಿ ಬಲಿಯಾಗಿದ್ದರು. ತಮ್ಮನ್ನು ಶೋಷಿಸಿ ದಮನಿಸುತ್ತಿರುವ ಮೇಲ್ಜಾತಿಯವರ ವಿರುದ್ದ ಹೋರಾಡುವುದಕ್ಕಾಗಿ ಬ್ರಿಟೀಷರ ಪರ  ಮಹರ್ ಜಾತಿಯವರು ನಿಂತಿದ್ದರು. ಬ್ರಾಹ್ಮಣಶಾಹಿತ್ವದ ವಿರುದ್ದದ ಈ ಗೆಲುವಿನ್ನು ಪ್ರತೀ ವರ್ಷ ದಲಿತರು ಆಚರಿಸುತ್ತಿದ್ದರು. ಇದರ ಇನ್ನೂರನೇ ವರ್ಷಾಚರಣೆಯ ಪ್ರಯುಕ್ತ ನಡೆದ ಉತ್ಸವದಲ್ಲಿ ಹತ್ತು ಲಕ್ಷ ದಲಿತರು ಸೇರಿದ್ದರು. ಭೀಮ ಸೇನೆಯ ವಿನಯ್ ರತನ್ ಸಿಂಗ್, ಪ್ರಕಾಶ್ ಅಂಬೇಡ್ಕರ್, ಜಿಗ್ನೇಶ್ ಮೆವಾನಿ  ಮುಂತಾದವರು ಈ ಉತ್ಸವದಲ್ಲಿ ಭಾಗಿಯಾಗಿದ್ದರು. ದಲಿತರ ಈ ಹೊಸ ಕ್ರಾಂತಿ ಕೆಲ ಸವರ್ಣೀಯರನ್ನು ಕಂಗೆಡಿಸಿತ್ತು. ಈ ಸವರ್ಣೀಯರು ಮತ್ತು ಹಿಂದುತ್ವ ಶಕ್ತಿಗಳು ಈ ಉತ್ಸವದ ವಿರುದ್ದ ತೀವ್ರ ದಾಂಧಲೆಯೆಬ್ಬಿಸಿ ಈರ್ವರ ಹತ್ಯೆಗೆ ಕಾರಣವಾಗಿದ್ದರು. ಹಲವು ಮನೆಗಳು ಅಗ್ನಿಗಾಹುತಿಯಾಗಿತ್ತು.