ಭ್ರಷ್ಟಾಚಾರದ ಕುರಿತು ಮಾತನಾಡುವಾಗ ಅಮಿತ್‍ಶಾ ತಬ್ಬಿಬ್ಬಾಗುವುದೇಕೆ?

0
1072

: ಸಲೀಮ್ ಬೋಳಂಗಡಿ
ರಾಜ್ಯದಲ್ಲಿ ಚುನಾವಣೆಯ ದಿನಾಂಕ ನಿಗದಿಯಾಗಿದೆ. ಮೋದಿಯವರನ್ನು 2019ರ ಮಹಾಚುನಾವಣೆಯಲ್ಲಿ ಎದುರಿಸಲು ರಾಹುಲ್ ಗಾಂಧಿಗೆ ಈ ಚುನಾವಣೆ ಮುಖ್ಯ ಭೂಮಿಕೆಯಾಗಲಿದೆ ü ಆದ್ದರಿಂದ ಎರಡೂ ಪಕ್ಷಗಳಿಗೂ ಈ ವಿಧಾನಸಬಾ ಚುನಾವಣೆಯು ಮಹತ್ತರವಾಗಿದೆ. ಧರ್ಮ, ಆಡಳಿತ ಕುರಿತ ವಿಚಾರಗಳು ಇಲ್ಲಿ ಕಳೆದ ಕೆಲವು ದಿನಗಳಿಂದ ತಾಂಡವವಾಡುತ್ತಿದೆ. ಪರಸ್ಪರ ಟೀಕೆ ವಿಮರ್ಶೆಗಳು ವ್ಯಾಪಕವಾಗುತ್ತಿದೆ. ಯಡಿಯೂರಪ್ಪರ ಆಡಳಿತದಲ್ಲಿನ ಭ್ರಷ್ಟಾಚಾರಗಳು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಆದ್ದರಿಂದ ಸ್ವಚ್ಛ ಆಡಳಿತದ ಬಗ್ಗೆ ಮಾತನಾಡುವಾಗ ಬಾಯಿ ತಪ್ಪಿ ಏನೇನೋ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಒಡೆದು ಆಳುತ್ತಿದ್ದಾರೆಂದು ಆರೋಪ ಮಾಡುತ್ತಿರುವ ಅಮಿತ್‍ಶಾರಿಗೆ ತಾನೇನು ಮಾತನಾಡುತ್ತಿದ್ದೇನೆಂಬ ಪ್ರಜ್ಞೆ ನಿಜಕ್ಕೂ ಇಲ್ಲವೇ? ಎಂಬ ಅನುಮಾನ ದಟ್ಟವಾಗುತ್ತಿದೆ. ಹೌದು ರಾಜ್ಯದ ಮಠಗಳಿಗೆ ಬೇಟಿ ನೀಡುತ್ತಿರುವ ಅಮಿತ್‍ಶಾ ಮಠಾಧೀಶರ ಕಿವಿಗೆ ಊದುವ ಕೆಲಸ ಮಾಡುತ್ತಿದ್ದಾರೆ, ಮಾತ್ರವಲ್ಲ ಮಠಾಧೀಶರಿಗೆ ಟಿಕೇಟ್ ನೀಡುವ ಆಶ್ವಾಸನೆ ನೀಡುತ್ತಿದ್ದಾರೆ. ಸಂಕಟ ಬಂದಾಗ ವೆಂಕಟರಮಣ ಎಂಬ ಗಾದೆ ಮಾತುಗಳನ್ನು ಈ ರಾಜಕಾರಣಿಗಳು ನೆನಪಿಸುತ್ತಿದ್ದಾರೆ. ಸಿದ್ದರಾಮಯ್ಯರು ಮದಕರಿ ನಾಯಕನನ್ನು ಸ್ಮರಿಸದೆ ಟಿಪ್ಪುವನ್ನು ನೆನಪಿಸುತ್ತಿದ್ದಾರೆ. ಯಡಿಯೂರಪ್ಪ ಮುಖ್ಯ ಮಂತ್ರಿಯಾಗುವುದನ್ನು ತಪ್ಪಿಸಲು ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಪ್ರಕ್ರಿಯೆಯಾಗಿದೆ ಹೀಗೆ ಸಾಗುತ್ತಿವೆ ಅವರ ಮಾತಿನ ದಾಟಿ. ಆದಿವಾಸಿಗಳ ಸೌಲಭ್ಯ ಕಿತ್ತು ಅಲ್ಪ ಸಂಖ್ಯಾತರಿಗೆ ಕೊಡುತ್ತಿದ್ದಾರೆಂದು ಸಿದ್ದರಾಮಯ್ಯ ಸರಕಾರದ ವಿರುದ್ದ ಅವರನ್ನೂ ಎತ್ತಿಕಟ್ಟುವ ಶ್ರಮದಲ್ಲಿ ನಿರತರಾಗಿದ್ದಾರೆ. ಸಮಾಜವನ್ನು ನಿಜವಾಗಿ ಒಡೆಯುವವರು ಯಾರು ಎಂಬುದು ಈ ರಾಜ್ಯದ ಜನತೆಗೆ ತಿಳಿಯದ ವಿಚಾರವೇನಲ್ಲ. ಅದಕ್ಕೆ ಉತ್ತರ ಅವರು ಸುದ್ಧಿಗೋಷ್ಟಿಯಲ್ಲಿ ಆಡುವ ಮಾತುಗಳೇ ಪುರಾವೆಯಾಗಿದೆ.

ಯಾಕೆಂದರೆ ಬಿಜೆಪಿಗೆ ಹೇಳಲು ಕೇಂದ್ರ ಸರಕಾರ ಜನರಿಗೆ ಹಿತಕಾರಿಯಾದ ಯಾವ ಯೋಜನೆ ಮಾಡಿದೆ ಹೇಳಿ? ಸಿದ್ದರಾಮಯ್ಯರನ್ನು ಟೀಕಿಸಿ ಬೇಳೆ ಬೇಯಿಸಿಕೊಳ್ಳಬೇಕಷ್ಟೇ? ಕೋಮುಭಾವನೆಗಳನ್ನು ಪ್ರಚೋಧಿಸಿ ಕೆರಳಿಸಿ ಧರ್ಮಗಳನ್ನು ವಿಭಜಿಸಿ ಮತ ಪಡೆಯುವ ಕೆಲಸದಲ್ಲಷ್ಟೇ ಪಳಗಿದ್ದಾರೆ. ಪ್ರಜೆಗಳ ಅಹವಾಲುಗಳನ್ನು ಪೂರೈಸುವ ಅವರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಕ್ಕಿಂತ ಜೈಲಲ್ಲಿರುವ ಗಲಭೆಗ್ರಸ್ತ ಗೂಂಡಾಗಳ ಕೇಸು ರದ್ದುಪಡಿಸುವಂತಹ ಆಶ್ವಾಸನೆಗಳನ್ನು ನೀಡುತ್ತಾರೆ. ಇದರಿಂದ ಸಮಾಜ ಸುಧಾರಿಸಿತೇ?