ಮಂಗನಾಟ ಶುರು ಪಕ್ಷ ಯಾವುದೇ ಇರಲಿ, ಟಿಕೆಟ್ ಬೇಕು ಅಷ್ಟೇ

0
1080

@ ಸಲೀಮ್ ಬೋಳಂಗಡಿ
ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆಯೇ ರಾಜಕೀಯದ ಅಖಾಡದಲ್ಲಿ ತೀವ್ರತೆರನಾದ ಕಸರತ್ತು ಪ್ರಾರಂಭಗೊಂಡಿದೆ. ಟಿಕೆಟ್  ವಂಚಿತರ ಪಕ್ಷದಿಂದ ಪಕ್ಷಕ್ಕೆ ಕೆಲವರು ತಿಪ್ಪರಲಾಗ ಹಾಕಿದರೆ ಇನ್ನು ಕೆಲವರು ಗಳಗಳನೆ ಅಳುತ್ತಾ ತಮ್ಮ ಅಸಹನೆಯನ್ನು ಪ್ರದರ್ಶಿಸಿ ವರಿಷ್ಠರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಅಧಿಕಾರದ ವ್ಯಾಮೋಹವು ಬಟಾಬಯಲಾಗುತ್ತಿದೆ. ಸಿದ್ಧಾಂತಕ್ಕಿಂತ ಸ್ವಾರ್ಥಕ್ಕೆ ಹೆಚ್ಚು ಪ್ರಾಶಸ್ತ್ಯ  ಕೊಡಲಾಗುತ್ತಿದೆ. ರೈತರು ಸಾಲದ ಉರುಳಿಗೆ ಸಿಲುಕಿ ಆತ್ಮಹತ್ಯೆಯ ಹಾದಿ ತುಳಿಯುವಾಗ ಇವರ ಕಣ್ಣಿನಿಂದ ಒಂದು ಹನಿ ನೀರು  ತೊಟ್ಟಿಕ್ಕದಿದ್ದರೂ ತಮಗೆ ಸ್ಪರ್ಧಿಸಲು ಟಿಕೆಟ್ ದೊರೆಯದೇ ಇದ್ದಾಗ ಗಳಗಳನೆ ಅತ್ತು ಬಿಟ್ಟರು. ಇಂತಹವರಿಂದ ಕರ್ನಾಟಕಕ್ಕೆ ಏನಾದರೂ  ಹಿತವಾದೀತೇ? ಹೇಗೆ ಟಿಕೆಟ್ ಆಕಾಂಕ್ಷಿತರು ತಮಗೆ ಟಿಕೆಟ್ ಸಿಗಲು ಹರಸಾಹಸ ಪಡುತ್ತಿದ್ದಾರೋ ಅದೇ ರೀತಿ ಕೆಲ ರಾಜಕೀಯ ಪಕ್ಷಗಳ  ನಾಯಕರು ಕೂಡಾ ಜನಸೇವೆಗಿಂತ ಹಣ ಬಲವನ್ನು ಮಾನದಂಡವನ್ನಾಗಿಸಿ ಟಿಕೆಟ್‍ಗಳನ್ನು ಹಂಚಿದ ಪ್ರಮೇಯವೂ ನಡೆದಿದೆ. ¨ ಭ್ರಷ್ಟರೆಂದು ಬಹಿರಂಗವಾಗಿದ್ದರೂ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ನಾಮಕರಣ ಮಾಡಲಾಗುತ್ತಿದೆ. ಹಲವು ಹಗರಣಗಳಲ್ಲಿ ಹೆ¸ಸರು ಕೇಳಿ ಬಂದವರಿಗೂ ಇಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗು   ತ್ತದೆ. ಅವು ಮಾತ್ರವಲ್ಲ, ಎರಡು ಪ್ರಮುಖ ಪಕ್ಷಗಳಲ್ಲಿ ಟಿಕೆಟ್ ಸಿಗದೆ  ಕಂಗಾಲಾದವರನ್ನು ಕಂಡು ಮಾತನಾಡಿಸಿ ಮೂರನೆಯ ಪಕ್ಷವೊಂದು ಸೆಳೆದು ಅವರಿಗೆ ಟಿಕೆಟ್ ನೀಡುವ ಪ್ರಮೇಯವೂ ನಡೆಯುತ್ತಿದೆ.  ದಿನ ಬೆಳಗಾಗು ವುದರೊಳಗೆ ಪಕ್ಷ ಸೇರಿ ಟಿಕೆಟ್ ಪಡೆದವರೂ ಇದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಇಲ್ಲಿ ಜನಹಿತ, ಪ್ರಜಾಹಿತಕ್ಕಿಂತ ¸ಸ್ವಾರ್ಥ ಹಿತಾಸಕ್ತಿ ಗಳೇ ಮೇಳೈಸುತ್ತಿವೆ.
ಧರ್ಮಧರ್ಮಗಳ ಮಧ್ಯೆ ಕಂದರ ಸೃಷ್ಟಿಸಿ ಧ್ರುವೀಕರಣಗೊಳಿಸಿ ಮತ ಕೀಳುವ ಹೀನ ರಾಜಕಾರಣವನ್ನು ಮಾಡಲಾಗುತ್ತಿದೆ. ತಮ್ಮ  ಜನೋಪಯೋಗಿ ಕೆಲಸವನ್ನು ಜನರ ಮುಂದಿ ಡುವ ಶ್ರಮದಲ್ಲಿ ತೊಡಗುವ ಬದಲು ಜಾತೀಯ ಬೀಜವನ್ನು ಕೆರಳಿಸಿ ಅದನ್ನು  ಮತವನ್ನಾಗಿ ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟ ರಂಗದಲ್ಲಿ ಸಕ್ರಿಯವಾಗಿರುವ ಪ್ರಕಾಶ್ ರೈಯವರ ಮಾತುಗಳು ಸಮಯೋಚಿತವಾದುದು. ನಾನು  ಯಾವ ಪಕ್ಷಕ್ಕೆ ಮತ ನೀಡಬೇಕೆಂದು ಹೇಳುತ್ತಿಲ್ಲ. ಎಂತಹವರಿಗೆ ಮತ ನೀಡಬೇಡಿ ಎಂದಷ್ಟೇ ಹೇಳುತ್ತೇನೆ. ಕೋಮುವಾದಿ ರಾಜಕಾರಣದ  ವಿರುದ್ಧ ನಾಡಿನಾದ್ಯಂತ ಸಂಚರಿಸುತ್ತೇನೆ. ಯಾಕೆಂದರೆ, ಹುಟ್ಟಿ ಬೆಳೆದ ಈ ಮಣ್ಣು ಬಹಳ ಗಂಭೀರವಾದ ಚುನಾವಣೆ ಯೊಂದನ್ನು  ಎದುರಿಸುತ್ತಿರುವಾಗ ಅದನ್ನು ಕೋಮು ಧ್ರುವೀಕರಣ ವನ್ನಾಗಿ ಮಾಡುವುದನ್ನು ನೋಡಿ ಸುಮ್ಮನಿರಲಾರೆ. ನಿಜವಾಗಿ, ಈ ಮಾತುಗಳು  ಪ್ರಾಮಾಣಿಕವಾಗಿ ಕನ್ನಡಿಗರಲ್ಲಿ ಹೊರಹೊಮ್ಮಬೇಕಾಗಿದೆ. ನಮ್ಮನ್ನು ವಿಭಜಿಸು ವವರಿಗಿಂತ ನಮ್ಮೊಳಗಿನ ಬಾಂಧವ್ಯವನ್ನು ಬೆಸೆಯುವವರನ್ನು  ಚುನಾಯಿಸಬೇಕಾಗಿದೆ. ಕೋಮುವಾದದ ಅಮಲು ಅದೆಷ್ಟು ತಲೆಗೇರಿದೆ ಯೆಂದರೆ ಎಂಟರ ಹರೆಯದ ಹೆಣ್ಮಗಳ ಮೇಲಿನ ಅತ್ಯಾಚಾರವನ್ನು  ಜಾತಿಯ ಆಧಾರದಲ್ಲಿ ನೋಡಲಾಗುತ್ತದೆ ಮತ್ತು ಸಮರ್ಥಿಸಲಾಗುತ್ತಿರುವ ಅತೀ ಪೈಶಾಚಿಕವಾದ ಹಂತಕ್ಕೆ ಅದು ತಲುಪಿದೆ.

ಕೃಪೆ ವಿಜಯ ಕರ್ನಾಟಕ

ಕೋಮುವಾದದ ರಾಜಕಾರಣವನ್ನು ತಳ್ಳಿ ಹಾಕಿ ಅಭಿವೃದ್ಧಿಪರ ರಾಜಕಾರಣ ಮಾಡಬೇಕಾ ಗಿದೆ. ಸಾಮಾಜಿಕ ಜಾಲತಾಣಗಳ ಅಸಂಬದ್ಧ  ಬರಹಗಳ ಕುರಿತು ಜನಸಾಮಾನ್ಯರು ತಲೆ ಕೆಡಿಸಿಕೊಳ್ಳಬಾರದು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರ ಪ್ರಚಾರವನ್ನು  ಅಮೆರಿಕದ ಸಂಸ್ಥೆಯೊಂದು ಮುನ್ನಡೆಸುತ್ತಿದೆ ಯೆಂಬ ವರದಿಗಳಿವೆ. ಅಮೇರಿಕದ ನರೇಂದ್ರ ಮೋದಿಯವರ ಬೆಂಬಲಿಗರೆನ್ನಲಾದ ‘ನಮೋ  ವಾರಿಯರ್ಸ್’ ಎಂಬ ಸಂಸ್ಥೆ ಇದರ ಮುಂದಾಳುತ್ವ ವಹಿಸಿದೆ. ಟ್ವಿಟರ್, ಫೇಸ್‍ಬುಕ್, ವಾಟ್ಸ್‍ಆಪ್ ಮುಂತಾದ ಸಾಮಾಜಿಕ ಜಾಲತಾಣಗಳ  ಮೂಲಕ ಹೊಸ ಟ್ರೆಂಡ್ ಮೂಡುವಂತಹ ಪ್ರಯತ್ನದಲ್ಲಿ ಅದು ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿವೆ. ಆ ಮೂಲಕ ಸಾಮಾಜಿಕ  ಜಾಲತಾಣಗಳನ್ನು ಬಿಜೆಪಿಮಯಗೊಳಿಸುವ ತಂತ್ರವಾಗಿದೆ. ಇದನ್ನು ಅಮೇರಿಕದ ‘ದ ಓವರ್‍ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ (ಒ.ಎಫ್.  ಬಿಜೆಪಿ.) ಮುನ್ನಡೆಸುತ್ತಿದೆ. ಅದು ಹೆಚ್ಚಿನ ಜನರಿಗೆ ತಲುಪುವ ಶ್ರಮದಲ್ಲಿ ತೊಡಗಿದೆ. ಉದಾಹರಣೆಗೆ, ##SIDHU TOPS IN CRIMEಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪರವಾಗಿರುವ #SAFFRONSURGE
ಮುಂತಾದವುಗಳಾಗಿವೆ.

ಇದರ ವಿರುದ್ಧ ಈಗಾಗಲೇ ಕಾಂಗ್ರೆಸ್ ರಂಗಕ್ಕಿಳಿದಿದೆ. ಆದ್ದರಿಂದಲೇ, ಸುಳ್ಳು ಸುದ್ದಿ ಹರಡಲು ಬಿಜೆಪಿಗೆ ನರೇಂದ್ರ ಮೋದಿಯವರಿರುವಾಗ  ಸಾಮಾಜಿಕ ಜಾಲತಾಣಗಳೇಕೆ ಎಂದು ವ್ಯಂಗ್ಯವಾಗಿ ಚಿತ್ರನಟಿ ರಮ್ಯ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಸುಳ್ಳು ಸುದ್ದಿಗಳನ್ನು ಹರಡುವ  ಮುಖಾಂತರ ಗೆಲುವಿಗೆ ಅಡ್ಡದಾರಿ ಹಿಡಿದಿರುವುದು ಕೂಡಾ ಒಳ್ಳೆಯ ಸೂಚನೆಯಲ್ಲ. ಜನರ ಮಧ್ಯೆ ಸುಳ್ಳು ಸುದ್ದಿಯನ್ನು ಪಸರಿಸಿ ಗಲಭೆಗೆ  ಪ್ರಚೋದಿಸುವಂತಹ ಹೀನ ಚಟುವಟಿಕೆಯಲ್ಲಿ ಲೀನವಾಗು ವುದು ಕೂಡಾ ಇತ್ತೀಚೆಗೆ ಬಹಿರಂಗ ವಾದ ವಿಚಾರ. ಕಳೆದ ಮಾರ್ಚ್  29ರಂದ ಪೋಸ್ಟ್ ಕಾರ್ಡ್ ಆನ್‍ಲೈನ್ ಮಾಧ್ಯಮದ ಮಹೇಶ್ ವಿಕ್ರಮ್ ಹೆಗಡೆ ಎಂಬವರನ್ನು ಪೊಲೀಸರು ಬಂಧಿಸಿದ್ದನ್ನು ಇಲ್ಲಿ  ಉದಾಹರಿಸ ಬಹುದು. ಓರ್ವ ಜೈನಮುನಿಗೆ ಮುಸ್ಲಿಮ್ ಯುವಕ ದಾಳಿ ಮಾಡಿದ್ದಾನೆಂಬ ಸುಳ್ಳು ಸುದ್ದಿ ಗೀಚಿ ಸಿದ್ದರಾಮಯ್ಯ ಸರಕಾರದಲ್ಲಿ  ಯಾರಿಗೂ ರಕ್ಷಣೆಯಿಲ್ಲ ಎಂಬಂತಹ ವರದಿಯನ್ನು ಆತ ಪ್ರಕಟಿಸಿ ಮಾಧ್ಯಮ ರಂಗಕ್ಕೆ ಕಳಂಕ ತಂದಿತ್ತ ಘಟನೆ ಕೂಡಾ ಇಂತಹ ವ್ಯವಸ್ಥಿತ  ತಂತ್ರಗಳಲೋಂದು. ಈತನ ಪರ ಕೆಲ ಬಿಜೆಪಿ ನಾಯಕರು ಧ್ವನಿಯೆತ್ತಿದ್ದು ಕೂಡಾ ಇದಕ್ಕೆ ಸ್ಪಷ್ಟ ಉದಾಹರಣೆ.
ಇತ್ತೀಚೆಗೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆಯ ಕಾರು ಅಪಘಾತ ವನ್ನು ಕೂಡಾ ಮುಖ್ಯಮಂತ್ರಿಗಳ ಹೆಸರಿನ ಜೊತೆ ಥಳಕು  ಹಾಕಲು ಶ್ರಮಿಸಲಾಯಿತು. ಆದರೆ ಅದು ಕೂಡಾ ವಿಫಲವಾಯಿತು. ಈಗ ಮತ್ತೆ ಅನಂತಕುಮಾರ್ ಹೆಗಡೆಗೆ ವಿದೇಶ ದಿಂದ ಬೆದರಿಕೆ ಕರೆ  ಬರುತ್ತಿದೆಯಂತೆ. ಈ ರೀತಿಯ ರಾಜಕಾರಣ ಹತಾಶೆ ಯಿಂದ ಮಾತ್ರ ಸಾಧ್ಯ. ಸ್ಪಷ್ಟವಾದ ಗೊತ್ತು ಗುರಿಯಿಲ್ಲದ ಜನಸೇವೆ ಮಾಡದ  ರಾಜಕಾರಣ ಮಾಡಿದ ಕಾರಣ ಚುನಾವಣೆ ಬಂದಾಗ ಹತಾಶ ರಾಗುವ ಅವಕಾಶ ಬರುತ್ತದೆ. ಜನರ ಮನಸ್ಸನ್ನು ಒಡೆಯುವುದರಲ್ಲಿ ಲೀನ  ವಾದರೇ ಹೊರತು ಈ ನಾಡಿನ, ಈ ದೇಶದ ಬಡ ಜನರ ಏಳಿಗೆಗೆ ಕೇಂದ್ರ ಸರಕಾರ ಏನನ್ನಾದರೂ ಮಾಡಿದೆಯೇ? ಹಾಗೇನಾದರೂ  ಮಾಡಿದ್ದಿದ್ದರೆ ರಾಜ್ಯ ಬಿಜೆಪಿಗೆ ಚುನಾವಣೆಯನ್ನು ಎದುರಿ ಸಲು ಇಷ್ಟೊಂದು ಹರಸಾಹಸ ಪಡ ಬೇಕಾದ ಅಗತ್ಯವಿರಲಿಲ್ಲ.