ಮಕ್ಕಳನ್ನು ಪ್ರೀತಿಸಿ

0
1337

@ ಟಿ. ಆರಿಫ್ ಅಲಿ

ಸಮಾಜದಲ್ಲಿ ನಾವು ವಿವಿಧ ಸ್ಥಾನಮಾನಗಳನ್ನು ಗಳಿಸಿರುತ್ತೇವೆ. ಪ್ರತೀ ಕುಟುಂಬದಲ್ಲಿ ಪ್ರತಿಯೋರ್ವರಿಗೂ ತಮ್ಮದೇ ಆದ ಗೌರವದ ಸ್ಥಾನವಿದೆ. ಮನೆಯಲ್ಲಿ ಓರ್ವ ಮಹಿಳೆ ತಾಯಿ, ಪತ್ನಿ, ಮಗಳು, ಸೊಸೆ, ಸಹೋದರಿ ಹೀಗೆ ವಿವಿಧ ರೀತಿಯಲ್ಲಿ ಗುರುತಿಸಿ ಕೊಂಡಿರಬಹುದು. ಆದರೆ ಸಾರ್ವ ಜನಿಕವಾಗಿ ಆಕೆ ವೈದ್ಯೆ, ಇಂಜಿನಿಯರ್, ಶಿಕ್ಷಕಿ ಅಥವಾ ಆಡಳಿತಾಧಿಕಾರಿಣಿ ಯಾಗಿ ಗುರುತಿಸಲ್ಪಡುತ್ತಾಳೆ. ಇದೇ ರೀತಿ ಸ್ತ್ರೀ -ಪುರುಷರು ವ್ಯತ್ಯಸ್ತ ಕೇಂದ್ರ ಗಳಲ್ಲಿ ವಿವಿಧ ರೀತಿಯ ಹೊಣೆಗಾರಿಕೆ ಯನ್ನು ನಿಭಾಯಿಸುತ್ತಿರುತ್ತಾರೆ. ಆದರೆ, ಇವೆಲ್ಲವುಗಳಿಗಿಂತಲೂ ಮಿಗಿ ಲಾದ ಅತ್ಯಂತ ಮಹತ್ವಪೂರ್ಣವಾದ ಸ್ಥಾನ ವೊಂದಿದೆ. ಅದು `ಮಾತೆ’ ಎಂಬ ಹೊಣೆಗಾರಿಕೆಯಾಗಿದೆ. ಅದಕ್ಕಿಂತ ಮಿಗಿ ಲಾದ ಸ್ಥಾನಮಾನ, ಹೊಣೆಗಾರಿಕೆ ಈ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ. ಇನ್ನು ಪುರುಷರ ಬಗ್ಗೆ ಹೇಳುವು ದಾದರೆ ತಂದೆಯ ಸ್ಥಾನ ಮಾನ ಶ್ರೇಷ್ಠವಾದುದು. ಇಡೀ ಜಗತ್ತಿನಲ್ಲಿ `ತಂದೆ’ಯ ಪದವಿಯೇ ಪುರುಷನಿಗೆ ಉನ್ನತವಾದ ಪದವಿಯಾಗಿದೆ. ಜಗತ್ತಿ ನಲ್ಲಿ ನಾವು ಇತರೆಲ್ಲ ವಿಷಯಗಳಲ್ಲಿ ಅಭಿವೃದ್ಧಿ ಕಾಣುತ್ತೇವೆ. ಲೇಖನ, ಕತೆ, ಕವನ, ಚಿತ್ರ ರಚನೆ, ಚಲನ ಚಿತ್ರ ಇತ್ಯಾದಿ. ಆದರೆ ಹೆತ್ತವರಿಗೆ ಇವೆಲ್ಲವುಗಳಿಗಿಂತಲೂ ಶ್ರೇಷ್ಠವಾದುದು ಜನ್ಮ ನೀಡಿದ ಸಂತಾನಗಳಾಗಿವೆ