ಮಾನವ ಗುರಾಣಿ ಧರ್ ಗೆ ತನ್ನ ಊರೇ ಶತ್ರು …

0
1506

 ನ್ಯೂಸ್ ಡೆಸ್ಕ್ 

ಶ್ರೀನಗರ:  ಭಾರತೀಯ ಸೇನಾ ಪಡೆಯ ಯೋಧರು ಕಾಶ್ಮೀರಿಗಳ ಕಲ್ಲು ತೂರಾಟದಿಂದ ಪಾರಾಗಲು ಸ್ಥಳಿಯನಾದ ಫಾರೂಕ್ ಅಹ್ಮದ್ ಧರ್ ಎಂಬವರನ್ನು ಎಳೆದು ತಂದು ಜೀಪಿನ ಮುಂಭಾಗಕ್ಕೆ ಕಟ್ಟಿ ಮಾನವ ಗುರಾಣಿಯನ್ನಾಗಿ ಬಳಸಿಕೊಂಡಿದ್ದರು. ಆ ಸಮಯದಲ್ಲಿ ಬಾರಾಮುಲ್ಲಾದಲ್ಲಿ ಉಪಚುನಾವಣೆಗೆ ಮತದಾನ ನಡೆಯುತ್ತಿತ್ತು. ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಆದರೆ ಈತ ಬಹಿಷ್ಕಾರಕ್ಕೆ ಕಿವಿಕೊಡದೆ ಮತ ಚಲಾಯಿಸಿದ್ದ. ಆದರೆ, ಸೇನೆಯು  ಆತನನನ್ನು ಸೆರೆಹಿಡಿದು ಜೀಪಿನ ಮುಂಭಾಗಕ್ಕೆ ಕಟ್ಟಿಹಾಕಿ ಗ್ರಾಮಸ್ಥರ ಕಲ್ಲೇಟಿನಿಂದ ಪಾರಾಗಲು ಶ್ರಮಿಸಿತ್ತು. ಮಾತ್ರವಲ್ಲ, ಇದನ್ನು ಸೇನೆಯೂ ಸಮರ್ಥಿಸಿತ್ತು. ಇದು ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಚರ್ಚಾ ವಿಷಯವಾಗಿತ್ತು.  ಈಗ ಈ ಫಾರೂಕ್ ಅಹ್ಮದ್‍ನನ್ನು ಊರಿನಿಂದಲೇ ಬಹಿಷ್ಕಾರ ಹಾಕಲಾಗಿದೆಯಂತೆ.  ತನ್ನನ್ನು ಎಲ್ಲರೂ ಸರಕಾರೀ ಏಜೆಂಟ್ ಎಂಬಂತೆ ನೋಡುತ್ತಿದ್ದಾರೆ. ನನಗೆ ಯಾರೂ ಕೆಲಸ ನೀಡುತ್ತಿಲ್ಲ. ನನ್ನ ಜೀವನ ನಿರ್ವಹಣೆಯೇ ಕಷ್ಟವಾಗುತ್ತಿದೆ. ಎನ್ನುತ್ತಿದ್ದಾನೆ. ಈ ಕೊರಗಿನಿಂದ ನಾನು ಅನಾರೋಗ್ಯಕ್ಕೆ ತುತ್ತಾಗಿದ್ದೇನೆ. ಔಷಧಿ ತರಲು ಕಷ್ಟವಾಗುತ್ತಿದೆ.

ಭಾರತೀಯ ಸೇನಾ ಪಡೆಯ ಯೋಧರು ಕಾಶ್ಮೀರಿಗಳ ಕಲ್ಲು ತೂರಾಟದಿಂದ ಪಾರಾಗಲು ಸ್ಥಳಿಯನಾದ ಫಾರೂಕ್ ಅಹ್ಮದ್ ಧರ್
ಬುರ್‍ಹಾನ್ ಮುಝಫ್ಪರ್ ವಾನಿ

ಕಾಶ್ಮೀರದಲ್ಲಿ 2016ರ ಜುಲೈ 18ರಂದು ಬುರ್‍ಹಾನ್ ಮುಝಫ್ಪರ್ ವಾನಿ ಎಂಬ 22ರ ಯುವಕನನ್ನು ಸೇನೆಯು ಗುಂಡಿಟ್ಟು ಕೊಂದಿತ್ತು. ಆತನಲ್ಲಿ ಫೇಸ್‍ಬುಕ್ ವ್ಯಾಟ್ಸ್ ಆಪ್ ಮುಖಾಂತರ ಜನರನ್ನು ಸೆಳೆಯುವಂತಹ ವಿಶೇಷ ಕೌಶಲ್ಯವಿತ್ತು. ಓರ್ವ ಮುಖ್ಯೋಪಾಧ್ಯಾಯರ ಪುತ್ರನಾದ ಈತನ ತಲೆಗೆ ಸರಕಾರ ಹತ್ತು ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿತ್ತು. ಈತನ ಹತ್ಯೆಯ ವಿರುದ್ದ ಕಾಶ್ಮೀರಿ ಜನತೆಯು ರೊಚ್ಚಿಗೆದ್ದಿತು. ಕಫ್ಯೂ ಘೋಷಿತವಾಗಿ ಇಡೀ ವಾತಾವರಣವೇ ಸಂಘರ್ಷಮಯವಾಯಿತು.

ಸುಮಾರು ತೊಂಬತ್ತಕ್ಕಿಂತಲೂ ಹೆಚ್ಚು ಕಾಶ್ಮೀರಿಗಳು ಹತರಾದರು. ಪೆಲೇಟ್ ದಾಳಿಯೂ ತೀವ್ರವಾಯಿತು. ಅದು ವಿಶ್ವದಾದ್ಯ೦ತ ಸುದ್ದಿಯಾಯಿತು. ಆದರೆ ಇಷ್ಟೊಂದು ತೀವ್ರ ಸಂಘರ್ಷಮಯ ವಾತಾವರಣವಿದ್ದೂ ಈ ಬಗ್ಗೆ ಪ್ರದಾನಿಗಳು 34 ದಿನಗಳ ಬಳಿಕ ಪ್ರತಿಕ್ರಿಯೆ ನೀಡಿದರು. ಮಾನವೀಯತೆ ಮತ್ತು ಪ್ರಜಾಸತ್ತೆಯ ಮುಖಾಂತರ ಕಾಶ್ಮೀರಿಗಳ ಮನಗೆಲ್ಲುವ ಸಂದೇಶವನ್ನು ಆ ಸುಂದರವಾದ ಭಾಷಣದಲ್ಲಿ ನೀಡಿದರು. ಈ ಭಾಷಣ ಕೂಡಾ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರ ಒತ್ತಡದಿಂದ ಎಂಬ ಸಂಶಯವೂ ಬಲವಾಗಿದೆ. ಆದರೆ ಈ ನಂತರ ಅಂತಹ ಯಾವ ಪ್ರಯತ್ನ ನಡೆದಿದೆಯೆಂದರೆ ಉತ್ತರ ಶೂನ್ಯ.
ಸೇನೆಯು ತಮ್ಮ ಪ್ರಾಣ ರಕ್ಷಿಸಲು ಮಾನವ ಗುರಾಣಿಯಾಗಿ ಬಳಸಿಕೊಂಡು ಆತನನ್ನು ಜೀವಂತ ಶವದಂತೆ ಮಾಡಿದೆಯೆಂದರೆ ತಪ್ಪಾಗಲಾರದು. ಈಗ ಗ್ರಾಮಸ್ಥರಿಂದಲೇ ಬಹಿಷ್ಕಾರಕ್ಕೊಳಗಾದ ಫಾರೂಕ್ ಅತ್ತ ಸರಕಾರವೂ ಇತ್ತ ಊರವರೂ ಕೈಬಿಟ್ಟ ಸ್ಥಿಯಲ್ಲಿದ್ದಾನೆ.