ಮಾಸಿಹ್ ನನ್ನ ಜೈಲಿಗೆ ತಳ್ಳಿ ಸತ್ಯ ಅಡಗಿಸಿಟ್ಟ ಸುಶ್ಮಾ ಸ್ವರಾಜ್ ರಾಜೀನಾಮೆ ನೀಡಲಿ

0
1441

ಇರಾಕ್‍ನಲ್ಲಿ ಐಎಸ್ ಉಗ್ರರಿಂದ ಬಂಧಿತರಾದ 39 ಭಾರತೀಯರನ್ನು ಕೊಂದ ವಿಚಾರವನ್ನು ಅಡಗಿಸಿಟ್ಟು ಕೇಂದ್ರ ಸರಕಾರವು ದೇಶವನ್ನು ವಂಚಿಸಿದೆಯೆಂದು ಐಎನ್‍ಎಲ್(ಇಂಡಿಯನ್ ನ್ಯಾಶನಲ್ ಲೀಗ್) ರಾಷ್ಟ್ರೀಯ ಅದ್ಯಕ್ಷರಾದ ಫ್ರೊ/ಮುಹಮ್ಮದ್ ಸುಲೈಮಾನ್ ಹೇಳಿದ್ದಾರೆ. ಸರಕಾರದ ರಾಜತಾಂತ್ರಿಕ ಸಂಬಂಧ ತೀವ್ರ ವಿಫಲವಾಗಿದೆಯೆಂಬದನ್ನು ಇದು ಸೂಚಿಸುತ್ತದೆಯೆಂದು ಅವರು ಹೇಳಿದ್ದಾರೆ. ಮೊಸೂಲ್‍ನಲ್ಲಿ ನಮ್ಮನ್ನು ಬಂಧಿಸಿದ ಕೂಡಲೇ ನಮ್ಮೊಂದಿಗಿದ್ದವರನ್ನೆಲ್ಲಾ ಗುಂಡು ಹೊಡೆದು ಸಾಯಿಸಲಾಯಿತು ಎಂದು ಹೇಳಿದ ಪ್ರತ್ಯಕ್ಷದರ್ಶಿ ಹರ್ಜಿತ್ ಮಾಸಿಹ್‍ನನ್ನು ಮಾನವ ಕಳ್ಳಸಾಗಣೆಯ ಆರೋಪ ಹೊರಿಸಿ ಜೈಲಿಗೆ ಹಾಕಲಾಗಿದೆ. ಮಾಸಿಹ್ ಹೇಳಿದ್ದು ಸರಿ ಎಂದು ಈಗ ಕೇಂದ್ರ ಹೇಳುತ್ತಿದೆ. ಈ ತನಕ ಅದನ್ನು ಅಡಗಿಸಿಟ್ಟದ್ದರ ಜವಾಬ್ದಾರಿಕೆ ಹೊತ್ತು ಕೊಂಡು ವಿದೇಶಾಂಗ ಸಚಿವರು ರಾಜಿನಾಮೆನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶ ಮತ್ತು ಬಿಹಾರದ ಚುನಾವಣೆಯ ಪಲಿತಾಂಶಗಳು ಬಿಜೆಪಿ ಮತ್ತು ಸಂಘ ಪರಿವಾರಗಳ ದ್ವೇಷದ ರಾಜಕೀಯದ ಕುರಿತು ಜನರಿಗೆ ಜಿಗುಪ್ಸೆ ಹುಟ್ಟಿದೆ ಎಂಬುದನ್ನು ಸೂಚಿಸುತ್ತದೆ. ಜನವಿರೋಧಿ ನೀತಿಗಳನ್ನು ಅಳವಡಿಸಿದವರು ದೇಶಪ್ರೇಮಿಗಳಾಗುವುದು ಹೇಗೆ ಎಂದು ಪ್ರಶ್ನಿಸಿದ ಅವರು “ಇದನ್ನು ತಡವಾಗಿಯಾದರೂ ಜನರು ಅರಿಯತೊಡಗಿದ್ದಾರೆ” ಎಂದರು. ಉತ್ತರ ಭಾರತದಲ್ಲಿ ದಲಿತ, ಮುಸ್ಲಿಮ್ ಮತ್ತು ಜಾತ್ಯಾತೀತ ವಿಭಾಗಗಳ ಐಕ್ಯತೆಯ ಪ್ರಯತ್ನಗಳು ನಡೆಯುತ್ತಿದೆ.
ಅಖಿಲೇಶ್ ಮತ್ತ ಮಾಯಾವತಿ ಒಂದಾಗಿ ಮುಂದುವರಿಯಲಿದ್ದಾರೆ. ಆಸನ್ನವಾಗಿರುವ ರಾಜಸ್ಥಾನದ ಚುನಾವಣೆಯಲ್ಲಿಯೂ ಜಾತ್ಯಾತೀತ ಪಕ್ಷಗಳ ಒಕ್ಕೂಟದ ಅಗತ್ಯವಿದೆ ಎಂದು ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‍ನ ಸದಸ್ಯರೂ ಆಗಿರುವ ಅವರು ಅಭಿಪ್ರಾಯಪಟ್ಟಿದ್ದಾರೆ.