ಮುಸ್ಲಿಮರು ಗೋವನ್ನು ಸ್ಪರ್ಶಿಸಲೂ ಬಾರದು ಎಂದ ಕಟಿಯಾರ್: ವಿವಾದಿತ ಹೇಳಿಕೆಗಳು ಬಿಜೆಪಿಯ ರಾಜಕೀಯ ತಂತ್ರದ ಭಾಗವೇ ಎಂದು ಶಂಕೆ

0
1056

ರಾಜಸ್ತಾನದ ಅಲ್ವಾರ್ ನಲ್ಲಿ ರಾಕ್ಬರ್ ಎಂಬ ವ್ಯಕ್ತಿಯನ್ನು ಗೋರಕ್ಷಕರ ಗುಂಪು ಥಳಿಸಿ ಕೊಂದು ಹಾಕಿದ ಬಳಿಕ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳು ಒಂದರ ಹಿಂದೆ ಒಂದರಂತೆ ವಿವಾದಿತವಾಗುತ್ತಿದ್ದು, ಇದೀಗ ಬಿಜೆಪಿ ಪ್ರಮುಖ ನಾಯಕ ವಿನಯ್ ಕಟಿಯಾರ್ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಅಲ್ವಾರ್ ಥಳಿತಕ್ಕೆ ಮುಸ್ಲಿಮರೇ ಕಾರಣ ಎಂಬ ರೀತಿಯಲ್ಲಿ ಅವರು ನೀಡಿರುವ ಹೇಳಿಕೆಯು ವ್ಯಾಪಕ ಟೀಕೆಗೆ ಕಾರಣವಾಗಿದೆ. ಮಾತ್ರವಲ್ಲ, ಬಿಜೆಪಿ ಉದ್ದೇಶಪೂರ್ವಕವಾಗಿ ಇಂಥ ಹೇಳಿಕೆಗಳನ್ನು ನೀಡುತ್ತಿದೆಯೇ ಎಂಬ ಅನುಮಾನವೂ ಉಂಟಾಗಿದೆ.

“ಅಲ್ವಾರ್ ಥಳಿತ ಖಂಡನಾರ್ಹ. ಆದರೆ, ಮುಸ್ಲಿಮರು ಗೋವನ್ನು ಸ್ಪರ್ಶಿಸುವುದನ್ನು ಮತ್ತು ಆ ಮೂಲಕ ಹಿಂದುಗಳನ್ನು ಪ್ರಚೋದಿಸುವುದನ್ನು ತ್ಯಜಿಸಬೇಕು. ಮುಸ್ಲಿಮರಲ್ಲಿ ಅನೇಕ ಮಂದಿ ಗೋವುಗಳನ್ನು ಸಾಕುತ್ತಿದ್ದಾರೆ ನಿಜ. ಆದರೆ, ಅವರು ಗೋವನ್ನು ಕೊಲ್ಲುತ್ತಿರುವುದೂ ನಿಜ. ಅವರು ಗೋಮಾಂಸವನ್ನು ಸೇವಿಸುತ್ತಾರೆಂಬುದೂ ನಿಜ ಎಂದವರು ಹೇಳುವ ಮೂಲಕ ಅಲ್ವಾರ್ ಹತ್ಯೆಯನ್ನು ಪರೋಕ್ಷವಾಗಿ ಸಮರ್ಥಿಸಿದ್ದಾರೆ.

ಅಲ್ಲದೆ, ಲಿಂಚಿಂಗ್ ಅನ್ನು ತಡೆಗಟ್ಟುವುದಕ್ಕೆ ಪ್ರತ್ಯೇಕ ಕಾಯ್ದೆಯ ಅಗತ್ಯವಿಲ್ಲವೆಂದೂ ಅವರು ಹೇಳಿದ್ದಾರೆ.