ಮೋಸದಾಟ ಸಭ್ಯತೆಗೆ ಕಳಂಕ ತಂದಿತೇ?

0
2022

: ಸಲೀಮ್ ಬೋಳಂಗಡಿ
ಚೆಂಡಿನ ಒಂದು ಭಾಗವನ್ನು ಕೊರೆದು ಸವೆಯುವಂತೆ ಮಾಡುವುದನ್ನು “ಬೌಲ್ ಡಾಂಬರಿಂಗ್” ಎಂದು ಕರೆಯುತ್ತಾರೆ, ಇದು ಫೇಸ್ ಬೌಲರ್‍ಗಳಿಗೆ ರಿವರ್ಸ್ ಸ್ವಿಂಗ್ ಮಾಡಲು ಸಹಾಯಕವಾಗುತ್ತದೆ.  ಮಾತ್ರವಲ್ಲ ವಿಕೆಟ್ ಪತನದ ಜೊತೆಗೆ ರನ್ ಹರಿಯುವುದನ್ನು ಇದು ತಡೆಯುತ್ತದೆ. ಎದುರಾಳಿ ತಂಡದ ವಿಕೆಟ್‍ಗಳು ಉರುಳದಿದ್ದಾಗ ಆಟದ ಗತಿ ಬದಲಿಸಲು ಇಂತಹ ಕಾನೂನು ವಿರೋಧಿ ಹೇಯ ಆಟಕ್ಕೆ ಅದು ಮುಂದಾಗುತ್ತದೆ.

ಇಂತಹದ್ದೊಂದು ಮೋಸದಾಟ ಆಡಿದ ಅಸ್ಟ್ರೇಲಿಯಾ ಕ್ರಿಕೇಟ್ ತಂಡ ತನ್ನ ಮುಖಕ್ಕೆ ಮಸಿ ಬಳಿದಿದೆ. ತಕ್ಷಣ ಎಚ್ಚೆತ್ತ ಆಸ್ಟ್ರೇಲಿಯಾ ತಂಡದ ಆಡಳಿತ ಮಂಡಳಿ ಆಟಗಾರರ ವಿರುದ್ದ ಕ್ರಮ ಕೈಗೊಂಡಿದೆ. ಸಭ್ಯರ ಆಟ ಎಂದು ಹೇಳಲಾಗುವ ಕ್ರಿಕೇಟ್‍ನಲ್ಲಿ ಕಳ್ಳಾಟ ನುಸುಳಿದ್ದು ಇಂದು ನಿನ್ನೆಯ ವಿಚಾರವಲ್ಲ. ಅದು ಬಹಳ ಹಿಂದಿನಂದಲೇ ಫಿಕ್ಸಿಂಗ್ ಭೂತದ ಮೂಲಕ ನುಸುಳಿದೆ, ಬೆಟ್ಟಿಂಗ್ ವ್ಯವಹಾರಗಳು, ಚಿಯರ್ ಗರ್ಲ್‍ಗಳ ಅರೆ ಬೆತ್ತಲೆ ಕುಣಿತ ಅದರ ಹೆಸರಿಗೆ ಕಳಂಕ ತಂದಿದೆ. ನಿಜಕ್ಕೂ ಅಸಭ್ಯತೆ ಇತ್ತೀಚೆಗೆ ಹೆಚ್ಚಾಗಿದೆ. ಸಾಮಾನ್ಯವಾಗಿ ಅಂತರ್ರಾಷ್ಟ್ರೀಯ ಪಂದ್ಯಗಳು ನಡೆಯುವಾಗ ಅದನ್ನು ಈಗಲೂ ಜನ ಸಂಶಯದ ದೃಷ್ಟಿಯಿಂದ ಜನರು ನೋಡುತ್ತಿರುವುದು ಕಾಣಬಹುದು. ಕ್ರೀಡಾ ಮನೋಭಾವವೆಂಬುದು ಈಗ ಬಹಳ ಅಪರೂಪವಾಗುತ್ತಿದೆ. ಕ್ರಿಕೇಟ್ ರಂಗದಲ್ಲಿರುವ ಸಭ್ಯ ಆಟಗಾರರಿಗೂ ಇರಿಸು ಮುರುಸುಂಟು ಮಾಡುವಂತಹದ್ದು ನಡೆಯುತ್ತಲೇ ಇದೆ. ಆಸ್ಟ್ರೇಲಿಯಾ ಹೊರತಾದ ಬೇರೆ ರಾಷ್ಟ್ರಗಳು ಏನಾದರೂ ಇಂತಹ ಸುಳಿಯಲ್ಲಿ ಸಿಲುಕಿದ್ದಿದ್ದರೆ ಆ ರಾಷ್ಟ್ರದ ತಂಡವನ್ನು ವಜಾ ಮಾಡುತ್ತಿತ್ತೇನೋ? ಅಂದರೆ ಅದರಲ್ಲೂ ತಾರತಮ್ಯ ಬಹಳಷ್ಟು ನಡೆದಿದೆ. ಕ್ರಿಕೇಟ್ ಎಂಬುದು ಹಣ ಗಳಿಸುವ ಬ್ರಹತ್ ಉದ್ದಿಮೆಯಾಗಿ ಬೆಳೆದಿರುವಾಗ ಲಾಭಗಳಿಸಲು ಕೆಲವರು ಮೋಸದಾಟದ ಮೊರೆಹೋಗುತ್ತಾರೆ.

ಪ್ರಜೆಗಳ ಹಕ್ಕು ಚಲಾಯಿಸುವ ಮತದಾನದ ಹಕ್ಕನ್ನು ಕೂಡಾ ಇಲ್ಲಿ ಮತಯಂತ್ರಗಳನ್ನು ತಿರುಚುವ ಮೂಲಕ ನಡೆಸಲಾಗುತ್ತಿದೆಯೆಂಬ ಆರೋಪವು ದಟ್ಟವಾಗಿದೆ. ಪರಾಜಯದ ವಾಸನೆ ಮೂಗಿಗೆ ಬಡಿದಾಗ ಮೋಸದಲ್ಲಿ ಜಯ ಗಳಿಸಲು ಯತ್ನಿಸುತ್ತಾರೆ. ಹೀಗೆ ಮೋಸ ವಂಚನೆಗಳ ಮೂಲಕ ಗಳಿಸಲಾಗುತ್ತಿರುವ ಗೆಲುವು ಶಾಶ್ವತವಲ್ಲ. ಎಂಬ ವಾಸ್ತವ ಅರಿಯಬೇಕು ಎಲ್ಲವನ್ನೂ ಸ್ಪರ್ಧಾತ್ಮಕವಾಗಿಯೇ ಸ್ವೀಕರಿಸಬೇಕು. ಸೋಲು ಗೆಲುವು ಶಾಶ್ವತವಲ್ಲ. ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಸ್ವಾರ್ಥದ ಅಮಲು ತಲೆಗೇರಿದಾಗ ಇಂತಹದ್ದೆಲ್ಲಾ ನಡೆಯುತ್ತದೆ. ಇದುವರೇಗೆ ತಲೆಯೆತ್ತಿನಡೆದ ಆಟಗಾರರು ನೋಡಿ ತಲೆತಗ್ಗಿಸಿ ನಡೆವ ಸ್ಥಿತಿ ಬಂತು ಅಲ್ಲವೇ?