ಯಡಿಯೂರಪ್ಪ ಬೆನ್ನು ನೋಡಿಕೊಳ್ಳಲಿ : ಸಿದ್ದರಾಮಯ್ಯ

0
1359

ನಾವು ಇನ್ನೊಬ್ಬರನ್ನು ಟೀಕೆ ಮಾಡುವಾಗ ನಮ್ಮ ಹೇಗಿದೆ, ಸಾರ್ವಜನಿಕ ಜೀವನದಲ್ಲಿ, ರಾಜಕೀಯದಲ್ಲಿ ಹೇಗಿದ್ದೇನೆ ಎಂಬುದನ್ನು ನೋಡಿಕೊಂಡು ಮಾತನಾಡಬೇಕು.

ಶ್ರೀನಿವಾಸ ಪ್ರಸಾದ್ ಸೋಲಿನ ಹತಾಶೆಯಿಂದ ನನ್ನ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುತ್ತಾರೆ. ಅವರ ಮಟ್ಟಕ್ಕೆ ಹೋಗಿ ನಾನು ಮಾತನಾಡಲಾರೆ. ನನ್ನ ಸಂಪುಟದಲ್ಲಿ ಅವರು ಮಂತ್ರಿ ಆಗಿರಲಿಲ್ಲವೇ. ಆಗ ಏಕೆ ಮಾತನಾಡಲಿಲ್ಲ.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದಿರುವ ಪ್ರಕಾಶ್ ಜಾವಡೇಕರ್ ಅವರಿಗೆ ಜ್ಯೋತಿಷ್ಯ ಏನಾದರೂ ಗೊತ್ತೇ ? ಕರ್ನಾಟಕದ ಬಗ್ಗೆ ಅವರಿಗೇನು ಗೊತ್ತು ? ಯಡಿಯೂರಪ್ಪ ಅವರಿಗೇ ಕರ್ನಾಟಕ ಗೊತ್ತಿಲ್ಲ.

ನರೇಂದ್ರ ಮೋದಿ, ಅಮಿತ್ ಶಾ, ಪ್ರಕಾಶ್ ಜಾವಡೇಕರ್ ಮಾತ್ರವಲ್ಲ. ಯಾರು ಎಷ್ಟು ಬಾರಿ ಬೇಕಾದರೂ ಇಲ್ಲಿಗೆ ಬಂದು ಸುಳ್ಳು ಹೇಳಿಕೊಂಡು ಹೋದರೂ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಮುಖ್ಯಮಂತ್ರಿಯವರು ಹೇಳಿದರು.

ಕೇಂದ್ರದಿಂದ ಬಂದಿರುವ ಅನುದಾನ ಎಷ್ಟು, ಅದರಲ್ಲಿ ಎಷ್ಟು ವೆಚ್ಚವಾಗಿದೆ ಎಂಬುದನ್ನು ಬಿಜೆಪಿಯವರು ವಿಧಾನ ಮಂಡಲ ಅಧಿವೇಶನದಲ್ಲಿ ಕೇಳಲಿ. ಅದು ಬಿಟ್ಟು ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆಯಲ್ಲಿ ಸುಳ್ಳು ಹೇಳಿ ಹೋಗುವುದಲ್ಲ.‌

ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೇಂದ್ರದ ಪಾಲು ಎಷ್ಟು ಇರುವುದೋ ರಾಜ್ಯದ ಪಾಲು ಸಹ ಅಷ್ಟೇ ಇರುತ್ತದೆ.‌ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದವರು. ಅವರಿಗೂ ಜವಾಬ್ದಾರಿ ಇರುತ್ತದೆ. ಈ ರೀತಿ ಮಾತನಾಡುವ ಅವರಿಗೆ ನಾಚಿಕೆ ಆಗಬೇಕು.

ರಾಜಕಾರಣ ಅಂದರೆ ವೋಟಿಗಾಗಿ ಯಾವ ಹಂತಕ್ಕಾದರೂ ಹೋಗಿ ಮಾತನಾಡುವುದಲ್ಲ.‌ ರಾಜಕಾರಣವನ್ನು ಗಂಭೀರವಾಗಿ ಮಾಡಬೇಕು. ಮೊದಲು ಅದನ್ನು ಕಲಿಯಬೇಕು ಎಂದರು.