ರೋಡ್ ಶೋದ ಹಿಂದೆ-ಮುಂದೆ

0
999

ಪರಸ್ಪರ ಅಪ್ಪಿ ಹಿಡಿದು ರಸ್ತೆಯಲ್ಲಿ ನಡೆದು ಶೋ ಮಾಡಿ ಏನು ಪ್ರಯೋಜನವಿದೆ. ಭಾರತ ಮತ್ತು ಇಸ್ರೇಲಿನ ಪ್ರಧಾನಿಗಳು ಆರು ದಿವಸಗಳ ತನಕ ಹೀಗೆ ಮಾಡಿ ಎರಡು ದೇಶಗಳೊಳಗೆ ನಿಸ್ವಾರ್ಥವಾದ ಸಹಕಾರ ಇರುವಂಥ ಕಾಲ ಇದೆನ್ನುವ ಸಂದೇಶವನ್ನು ನೀಡಿದ್ದಾರೆ. ಅವರಿಬ್ಬರೂ ಪರಸ್ಪರ ಅನೋನ್ಯತೆಯನ್ನು ಹೆಚ್ಚಿಸಿ ಕೊಂಡರು, ಪ್ರೊಟೊಕಾಲ್ ಉಲ್ಲಂಘಿಸಿದರು. ಅವರಿಷ್ಟದ ಉಡು ಗೊರೆಗಳನ್ನು ವಿನಿಮಯ ಮಾಡಿಕೊಂಡರು. ಹೀಗೆ ಬೆಂಜಮಿನ್ ನೆತನ್ಯಾಹು ಮತ್ತು ನರೇಂದ್ರ ಮೋದಿ ಬಹಳ ಹಳೆಯ ಭಾರತದ ರಾಜತಾಂತ್ರಿಕ ಮಿತಿಗಳನ್ನು ಮೀರಿದ್ದಷ್ಟೇ ಅಲ್ಲ ಉಭಯ ರಾಷ್ಟ್ರಗಳ ಸಂಬಂಧಗಳ ಬೇರುಗಳನ್ನೇ ನಾಶಪಡಿಸಿದರು.

ಇವುಗಳಲ್ಲಿ ಮೊದಲನೆಯದು ಭಾರತ-ಇಸ್ರೇಲ್ ಪರಸ್ಪರ ಒಪ್ಪಂದಗಳು. ಭಾರತ ಇಸ್ರೇಲ್ ಈ ಚರ್ಚೆಯಿಂದ ದೂರವುಳಿಯಿತು ಎನ್ನುವುದು ಸರಿಯಾದ ವಿಷಯವೇ. ಸೈನಿಕ ಸಹಕಾರ, ಸೈಬರ್ ಸುರಕ್ಷೆ, ತೈಲ, ಅನಿಲ, ಸಿನೆಮಾಗಳು ಮುಂತಾದ ಅನೇಕ ಕ್ಷೇತ್ರದಲ್ಲಿ ಒಟ್ಟಿಗೆ ಕೆಲಸ ಮಾಡಲು ಎರಡೂ ದೇಶಗಳು ಒಪ್ಪಿಕೊಂಡಿರುವುದು ಪರಸ್ಪರ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸಿದ 25ನೇ ವರ್ಷಾಚರಣೆ ಕೂಡಾ ಈ ನಿಕಟತೆಯನ್ನು ವ್ಯಾಖ್ಯಾನಿಸಿದೆ.
ಯುದ್ಧ ದಾಹ, ಜನಾಂಗೀಯತೆಯನ್ನು ಆದರ್ಶವನ್ನಾಗಿಸಿದವರು, ಗಾಂಧಿ ಮೇಲೆ ಪ್ರಭಾವ ಬೀರಲು ಶ್ರಮಿಸಿದ್ದರೂ ಪ್ರಯೋಜನ ಆಗಿರಲಿಲ್ಲ. ಆದರೆ ಇಸ್ರೇಲ್ ಪ್ರಧಾನಿ ಮತ್ತು ಭಾರತದ ಈಗಿನ ಪ್ರಧಾನಿ ಬಹಳ ಹತ್ತಿರದ ಗೆಳೆಯರಾಗಿ ಬಿಟ್ಟರು. ಇಲ್ಲಿ ನೆನಪಿಡಬೇಕಾದ್ದೇನೆಂದರೆ, ಬೆಂಜಮಿನ್ ನೆತನ್ಯಾಹು ವಿರುದ್ಧ ಮಾನವಹಕ್ಕುಗಳ ಹೋರಾಟಗಾರರು, ರಾಜಕೀಯ ಸಂಘಟನೆಗಳು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಇಸ್ರೇಲ್ ಪ್ರೇಮ ಅಥವಾ ಪ್ರತಿಭಟನೆ ಮಾಡಿದವರ ತತ್ವಾಧಾರಿತ ವಾದಗಳನ್ನು ವಿಶ್ಲೇಷಣೆಗೆ ತುತ್ತಾಗಿಸದೆ ಭಾರತದ ಯಥಾರ್ಥ ನಿಲುವನ್ನು ವ್ಯಾಖ್ಯಾನಿಸಲು ಆಗುವುದಿಲ್ಲ.
ಭಾರತದ ನಿಲುವು ಯಾವುದನ್ನು ಆಧಾರವಾಗಿಟ್ಟುಕೊಳ್ಳ ಬೇಕಿದೆ. ಇದು ಮೌಲಿಕವಾದ ವಿಷಯ. ನೆತನ್ಯಾಹು ತನ್ನ ಮಾತಿನಲ್ಲಿ ಇಸ್ರೇಲಿ ಶಕ್ತಿ ಎಂದರೆ ಸೈನಿಕ ಶಕ್ತಿಯಾಗಿದೆ ಎಂದು ಸೂಚಿಸುತ್ತಾರೆ. ಇನ್ನು ಆರ್ಥಿಕ, ರಾಜಕೀಯ, ಪ್ರಜಾಪ್ರಭುತ್ವ ಶಕ್ತಿಗಳು. ಅಹಿಂಸೆಯನ್ನು ದೇಶದ ಆದ ಬೆಂಬಲ ಘೋಷಿಸಲು ಇದೇ ಆದರ್ಶ ಮಹಾತ್ಮಗಾಂಧಿಗೆ ಮಾನ ದಂಡವಾಯಿತು. ಆದರೆ ಇಂದು ನರೇಂದ್ರ ಮೋದಿ ಸರಕಾರದ ವಿದೇಶಿ ನೀತಿಯಲ್ಲಿ ಅವಕಾಶವಾದಿತನ ಕಾಣಿಸುತ್ತಿದೆ.
ಗಾಂಧೀಜಿ ದೃಷ್ಟಿಯ ಸ್ವಾತಂತ್ರ್ಯ ಸಮರ ಸೇನಾನಿಗಳನ್ನೇ ನೆತನ್ಯಾಹು ಭಯೋತ್ಪಾದಕರೆನ್ನುತ್ತಿದ್ದಾರೆ ಎಂಬಂಶ ವನ್ನು ನಾವು ಮರೆಯಬಾರದು. ಇದು ಮೋದಿಗೂ ಗೊತ್ತಿದೆ. ತೀವ್ರ ರಾಷ್ಟ್ರೀಯ ತೆಯ ಉನ್ಮಾದವು ಇಬ್ಬರನ್ನೂ ಒಂದೆ ಗೆಲ್ಲಲ್ಲಿರಿಸಿದೆ ಎನ್ನುವುದೇ ಸರಿ. ಕೆಲವು ಸಂದರ್ಭಗಳಲ್ಲಿ ಇಬ್ಬರ ಮಾತುಗಳಿಂದ ಇದು ವ್ಯಕ್ತವಾಗಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತವು ಜೆರು ಸಲೇಮ್‍ನ ಅಮೆರಿಕ ಘೋಷಣೆ ವಿರುದ್ಧ ಮತ್ತು ಫೆಲಸ್ತೀನ್ ಪರ ನಿಲುವು ತಾಳಿದ್ದರೂ ಅದರಿಂದ ಹಿಂದೆ ಸರಿದ ಗುರುತುಗಳು ಮೋದಿ ನೆತನ್ಯಾಹು ಗಳಸ್ಯ ಕಂಠಸ್ಯದಲ್ಲಿ ಈಗ ಕಾಣಿಸುತ್ತಿದೆ. ನಿಲುವು ಗಳಿಂದ ನಿಲುವುರಾಹಿತ್ಯದೆಡೆಗೂ ಅಲ್ಲಿಂದ ವಿರುದ್ಧ ನಿಲುವಿಗೂ ಭಾರತದ ಆದರ್ಶ ಪತನವಾಗಿದೆ. ಫೆಲಸ್ತೀನ್ ವಿಷಯದಲ್ಲಿ ಚರ್ಚೆಗಳನ್ನು ಮುಂದುವರಿ ಸಬೇಕೆಂಬ ಮಾಮೂಲಿ ಮಾತುಗಳು, ಫೆಲಸ್ತೀನಿಯರಿಗೆ ಸ್ವಂತ ದೇಶ ಎನ್ನುವ ಸೂಚನೆ ಜಂಟಿ ಹೇಳಿಕೆಯಲ್ಲಿ ಇರಲೇ ಇಲ್ಲ. ಇದರ ಕುರಿತು ಭಾರತ ಇಸ್ರೇಲ್ ಸಂಬಂಧವು ಒಂದೇ ವಿಷಯಾಧಾರಿತ ವಲ್ಲ ಎಂದು ವಿದೇಶ ವಕ್ತಾರ ವಿಜಯ್ ಗೋಖಲೆ ಸಮರ್ಥಿಸಿದರು.
ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿ ಸಾಧಿ ಸಲು ಹೊರಡುವಾಗ ಇತರ ನಿಷೇಧಾ ತ್ಮಕ ವಿಷಯಗಳನ್ನು ಹೇಳಿ ಅಡ್ಡಿಪಡಿಸ ಬಾರದೆಂದು ಇಬ್ಬರೂ ನಾಯಕರು ಉಪದೇಶಿಸಿದ್ದಾರೆ. ಇದು ಎಷ್ಟರ ವರೆಗೆ ಸರಿ? ಈಗ ನಮ್ಮ ಆರ್ಥಿಕ ಹಿತ ಪರಿಷ್ಕರಣೆಗೊಳಗಾಗುತ್ತಿಲ್ಲ. ಬದಲಾಗಿ ನಮ್ಮ ವಿದೇಶ ನೀತಿ ಬದಲಾಗುತ್ತಿದೆ. ಇಸ್ರೇಲಿನ ಆಯುಧ ನಿರ್ಮಿಸುವ ಕಂಪೆನಿ ರಫೇಲ್‍ನೊಂದಿಗೆ ಮಾಡಿಕೊಂಡ ಒಪ್ಪಂದ ಇದಕ್ಕೆ ಒಂದು ಉದಾಹರಣೆ. ಮೇಕ್ ಇನ್ ಇಂಡಿಯ ಯೋಜನೆಯ ಭಾಗವಾಗಿ ಭಾರತವೇ ಮಿಸೈಲು ನಿರ್ಮಿ ಸಬೇಕು ಎನ್ನುವ ಉದ್ದೇಶದಿಂದ ಈ ಕರಾರರನ್ನು ದೂರ ಇಡಲಾಗಿತ್ತು. ನಮ್ಮಲ್ಲೇ ನಾವು ಮಿಸೈಲು ಮಾಡಿದರೆ ನಮಗೆ ಲಾಭವಿದೆ. ಇಸ್ರೇಲ್ ಇತ್ಯಾದಿ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿ ಕೊಂಡು ಅಲ್ಲಿಂದ ಆಯುಧ ತರಿಸಲು ನಿಂತರೆ ನಾವು ಆಯುಧಗಳಿಗಾಗಿ ಬೇರೆಯವರನ್ನು ಆಶ್ರಯಿಸುವ ಕೆಟ್ಟ ಸ್ಥಿತಿ ಉಂಟಾಗುತ್ತದೆ. ಇಸ್ರೇಲಿನ ಆಯುಧ ವ್ಯಾಪಾರ ಕುಸಿತ ಕಾಣುತ್ತಿರುವಾಗ ನಾವು ಅದರ ಚೇತರಿಕೆಯಲ್ಲಿ ಸಹಭಾಗಿಯಾಗು ವಂತಹ ಒಪ್ಪಂದ ಮಾಡಿಕೊಂಡು ಯಾರಿಗೆ ಲಾಭ ಮಾಡಿಕೊಡುತ್ತಿದ್ದೇವೆ ಎನ್ನುವುದು ಮೋದಿ, ನೆತನ್ಯಾಹು ಶೋ ನೋಡಿದವರಿಗೆ ಗೊತ್ತೇ ಇರುವುದಿಲ್ಲ. ನಾವಿಂದು ಯಾವುದನ್ನು ಯೋಚಿಸುತ್ತಿ ದ್ದೇವೆ. ಪೆಟ್ರೋಲ್, ಡಿಸೇಲ್, ಆಹಾರ
ವಸ್ತು ಹೀಗೆ ಯಾವುದಕ್ಕೆಲ್ಲ ಬೆಲೆ ಏರಿಲ್ಲ? ಆದರೂ ನಾವು ಮೋದಿ ನೆತನ್ಯಾಹುರಂತ ಹವರ ಶೋಗೆ ಮರಳಾಗುತ್ತಿಲ್ಲವೇ? ಹೀಗಾದರೆ ಎಲ್ಲಿ ಯಾರಭ್ಯುದಯವೋ?