ವಿಜಯ ಲಕ್ಷ್ಮಿ ಪಂಡಿತ್‍ರ ಜೈಲು ದಿನಗಳನ್ನು ಓದುತ್ತಾ

0
1542

: ಹುಮ್ರಾ ಖುರೈಶಿ
ಸೆರೆಮನೆಗೆ ಹೋದ ರಾಜಕಾರಣಿಗಳು ತಮ್ಮ ಜೈಲಿನ ಅನುಭವಗಳ ಕುರಿತು ಬರೆಯುವುದಿಲ್ಲ ಏಕೆ? ಒಂದು ವೇಳೆ ಬರೆದಿದ್ದರೆ ನರಕ ಸದೃಶವಾದ ಆ ಸುರಂಗ ಜೀವನದ ಕುರಿತು ನಮಗೆ ತಿಳಿಯಬಹುದಿತ್ತು. ಅಲ್ಲಿನ ದಿನಚರಿಗಳ ಕುರಿತು ಅಥವಾ ಅಲ್ಲಾದ ಮಾನಸಿಕ ಯಾತನೆಗಳ ಕುರಿತು ಹೊರಜಗತ್ತು ಅರಿಯದಿರಲು ಯಾರಾದರೂ ಅವರನ್ನು ನಿರುತ್ಸಾಹ ಪಡಿಸಿರಬಹುದೇನೋ? ಅಥವಾ ಸುಮ್ಮನೆ ಪೆನ್ನು ಹಿಡಿಯಬೇಡ ಎಂದು ಮನಸ್ಸು ಹೇಳಿರಬಹುದು. ಕಂಪ್ಯೂಟರ್, ಲ್ಯಾಪ್‍ಟಾಪ್ ಇಲ್ಲದ್ದರಿಂದಲೋ? ಸ್ವತಂತ್ರವಾದ, ನಿರ್ಭೀತಿಯಿಂದ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಲು ಜೈಲುವಾಸದ ಸಂದರ್ಭದಲ್ಲಿ ಅಥವಾ ಬಳಿಕವೋ ಅಸಾದ್ಯವಾಗುತ್ತಿದೆಯೋ?
ಹೀಗೆ ಹಲವಾರು ಪ್ರಶ್ನೆಗಳು ಉದ್ಭವವಾಗಲು ಮುಖ್ಯ ಕಾರಣ ಇತ್ತೀಚೆಗೆ ಬಿಡುಗಡೆಯಾದ ವಿಜಯ ಲಕ್ಷ್ಮಿ ಪಂಡಿತ್‍ರವರ “ಜೈಲು ದಿನಗಳು” ಎಂಬ ಕೃತಿಯಾಗಿದೆ. ಈ ಕೃತಿಗೆ ಅವರ ಪುತ್ರಿ ನಯನ ತಾರಾ ಸೆಹಗಾಲ್ ಮುನ್ನುಡಿ ಬರೆದಿದ್ದಾರೆ. 1940ರಲ್ಲಿ ರಚಿತವಾದ ಈ ಕೃತಿ ನೂರಾರು ಪ್ರಮುಖರು ಸೆರೆಮನೆಯಲ್ಲಿ ಕಳೆದ ಗತ ಇತಹಾಸದ ಅನುಭವಗಳಿಂದ ತುಂಬಿತ್ತು. ಜವಹರಲಾಲ ನೆಹರೂ ಕುಟುಂಬ ಅನುಭವಿಸಿದ ಜೈಲನುಭವಗಳೂ ಆ ಪುಸ್ತಕದಲ್ಲಿತ್ತು.

ಪತಿ ರಂಜಿತ್ ಸೀತಾರಾಮ್ ಪ೦ಡಿತ್, ಸಹೋದರ ಜವಹರಲಾಲ್ ನೆಹರೂ ಜೊತೆ ಸಂತೃಪ್ತ ಜೀವನ ನಡೆಸುತ್ತಿರುವ ನಿಶ್ಶಸ್ತ್ರರಾಗಿರುವ ಓರ್ವ ಮಹಿಳೆಯನ್ನು ಬಂಧಿಸಲು ಮಧ್ಯರಾತ್ರಿ ಎರಡು ಗಂಟೆಯ ಹೊತ್ತಿಗೆ ಲಾರಿ ತುಂಬಾ ಸಶಸ್ತ್ರಧಾರೀ ಪೋಲೀಸರು ಬರುತ್ತಾರೆ. ಗಾಂಧಿಜಿಯವರ ನೇತೃತ್ವದಲ್ಲಿ ಅಹಿಂಸಾವಾದಿಗಳು ಬ್ರಿಟೀಷರ ಆಳ್ವಿಕೆಯಿಂದ ಮುಕ್ತಿ ಪಡೆಯಲು ಸಮರ ಸಾರುತ್ತಿರುವಾಗ ಅದರ ಜೊತೆ ಕೈಜೋಡಿಸಲು ಸಿದ್ಧರಾದದ್ದು ಅವರು ಮಾಡಿದ ಅಪರಾಧವಾಗಿತ್ತು. ತಂದೆ ಮೊದಲೇ ಅಲಹಾಬಾದ್ ನೈನಿ ಸೆಂಟ್ರಲ್ ಜೈಲು ಸೇರಿದ್ದರು. ನನ್ನನ್ನೂ ಅಲ್ಲಿಗೆ ಮೊದಲು ಕಳುಹಿಸಲಾಗಿತ್ತು. ಬಳಿಕ ತಂದೆಯನ್ನು ಬರೇಲ್ವಿ ಜೈಲಿಗೆ ಬದಲಾಯಿಸಿದರು. ಅಲ್ಲಿ ರೋಗಪೀಡತರಾದಾಗ ಅವರನ್ನು ಬಿಡುಗಡೆಗೊಳಿಸಿದರೂ ಸ್ವಲ್ಪ ಸಮಯದಲ್ಲಿಯೇ ಇಹಲೋಕ ತ್ಯಜಿಸಿದರು. ಮಾವ ಕೂಡಾ ದೇಶದ ಯಾವುದೋ ಒಂದು ಜೈಲಲ್ಲಿದ್ದರು. ಬಹುದಿನಗಳ ನ೦ತರ ಅವರನ್ನು ಅಹಮದ್ ನಗರ ಕೋಟೆಯ ಸೆರೆಮನೆಯಲ್ಲಿ ಕೆಲ ಕಾಂಗ್ರೇಸ್ ನಾಯಕರ ಜೊತೆ ಬಂಧನದಲ್ಲಿಡಲಾಗಿತ್ತೆಂಬ ವಿವರ ಬಹಿರಂಗ ಪಡಿಸಿದರು. ಹಿರಿಯ ಸಹೋದರಿ 18ರ ಹರೆಯದ ಚಂದ್ರಲೇಖ, 25ರ ಹರೆಯದ ಸಂಬಂಧಿಕರಾದ ಇಂಧಿರಾಗಾಂದಿ ಮುಂತಾದವರನ್ನೂ ಜೈಲಿಗೆ ಹಾಕಲಾಯಿತು.

ಈ ಕೃತಿಯಲ್ಲಿ ಎಲ್ಲಿಯೂ ವಿಜಯ ಲಕ್ಷ್ಮಿ ಪಂಡಿತ್ ತನಗೆ ದೈಹಿಕ ಹಿಂಸೆ ನೀಡಿದ ಬಗ್ಗೆ ಹೇಳಿಲ್ಲ. ಆದರೆ ಮುನ್ನುಡಿಯಲ್ಲಿ ಒಂದು ವಿಚಾರ ಹೇಳುತ್ತಾರೆ ” ನನ್ನ ಸೆರೆಮನೆಯ ಕಾಲದ ಎಲ್ಲಾ ಅನುಭವಗಳನ್ನು ಇಲ್ಲಿ ಹೇಳಿಲ್ಲ. ನನ್ನೊಂದಿಗಿದ್ದ ಕೆಲ ಸಹ ಕೈದಿಗಳೊಂದಿಗೆ ನ್ಯಾಯವಾಗಿ ವರ್ತಿಸಲಾಗಿತ್ತು. ಆದರೆ ಅದು ಎಲ್ಲರೊಂದಿಗೆ ಅದೇ ರೀತಿ ಎಂದು ತಪ್ಪಾಗಿಯೂ ಭಾವಿಸಬಾರದು. ಬಹಳ ಸಂಘರ್ಷಭರಿತವಾದ ಆ ಕಾಲದಲ್ಲಿ ಸತ್ಯ ಸಂಪೂರ್ಣವಾಗಿ ಹೊರಬಂದರೆ ಹಲವು ಭಯದ ಘಟನೆಗಳೂ ಕೇಳಬೇಕಾಗಬಹುದು. ಅದು ಸದ್ಯಕ್ಕಂತೂ ಹೊರಬರದು. ಈ ಕಿರು ಕೃತಿಯನ್ನು ಓದಿದ ಬಳಿಕ ನೆಹರೂ ಕುರಿತ ಒಂದು ಅದ್ಯಾಯವನ್ನು ಸಂಪೂರ್ಣವಾಗಿ ತೆಗೆದು ಹಾಕುವ ರಾಜಸ್ತಾನ ಸರ್ಕಾರದ ನಿರ್ಧಾರ ಕೇಳಿ ಬೆಚ್ಚಿ ಬಿದ್ದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡಲು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿದ ನೆಹರೂ ಕುಟುಂಬದ ಪಾತ್ರವನ್ನು ನಿರ್ಲಕ್ಷಿಸುವ ಅಥವಾ ದೂರವಿಡುವ ಶ್ರಮಗಳು ನಮ್ಮನ್ನು ಆಶ್ಚರ್ಯಕ್ಕೊಳಪಡಿಸಿವೆ. ಉಗ್ರ ಬಲಪಂಥೀಯ ಆಡಳಿತಗಾರರು ಇತಿಹಾಸದಲ್ಲಿ ನುಸುಳಿ ಸ್ವಾತಂತ್ರ್ಯ ಸಿಗುವ ತನಕ ಹೋರಾಡಿದ ಮಹನೀಯರನ್ನು ಸಂಪೂರ್ಣವಾಗಿ ಮರೆ ಮಾಚುವ ಹುನ್ನಾರವೇ? ದೇಶದ ಇತಿಹಾಸವನ್ನು ಇತಿಹಾಸದ ಘಟನೆಗಳನ್ನೂ ಕೋಮುವಾದಿ ಶಕ್ತಿಗಳು ಸಂಪೂರ್ಣ ಬದಲಿಸುವುದೇ?