ವಿವಾಹವೆಂಬುದು ಡೇಟಿಂಗ್ ಅಲ್ಲ

0
1026
@ ಉಸ್ತಾದ್ ನುಅïಮಾನ್ ಅಲಿ ಖಾನ್
ವಿವಾಹದ ಕುರಿತು ಅವಿವಾಹಿತರಾದ ಯುವಕ ಯುವತಿಯರಿಗೆ ಹಲವು ಕನಸುಗಳಿರು ತ್ತವೆ. ಸಿನಿಮಾದಲ್ಲಿ ನೋಡಿದಂತೆ ಅಥವಾ ¸ಸಮಾಜಿಕ ಜಾಲತಾಣಗಳಲ್ಲಿ ಪ್ರೀತಿಯ ಮಳೆ ಯನ್ನು ಹರಿಸುವ ಪ್ರಣಯ ಗೀತೆಗಳಂತೆ “ಹಾ” ನನ್ನ ವಿವಾಹವೊಂದು ಮುಗಿಯಲಿ, ನಾವು  ಇತರರಿಗಿಂತ ಭಿನ್ನವಾಗಿರುವೆವು. ಒಂದಾಗಿ ಪ್ರಾರ್ಥಿಸುವೆವು, ಪ್ರೀತಿಸುವೆವು, ಪ್ರಯಾಣಿಸುವೆವು… ಎಂದೆಲ್ಲ ಅಂದು ಕೊಂಡಿರುತ್ತಾರೆ. ಎಷ್ಟು  ಮನೋಹರವಾದ ವಿಚಾರವಿದು. ಕೆಲವರು ಮದುವೆಯೆಂಬುದು ಡೇಟಿಂಗ್ ಎಂದು ಭಾವಿಸಿ ದ್ದಾರೆ. ಅವರು ಸಂತೋಷ ಸಂತಸದ  ವಿಚಾರಗಳ ಕುರಿತು ಮಾತ್ರ ಚಿಂತಿಸುತ್ತಾರೆ. ಏನಾದರೂ ಸಂಕಷ್ಟ ಕಷ್ಟ ಕೋಟಲೆಗಳು ಕೂಡಿ ಬಂದಾಗ ಅವರ ದಾಂಪತ್ಯ ಜೀವನ ಅಲ್ಲಿಗೇ  ಕೊನೆ ಗೊಳ್ಳುತ್ತದೆ. ನಿಜವಾಗಿ ವಿವಾಹವೆಂಬುದು ಅದ ಕ್ಕಿಂತ ಅತೀತವಾದುದಾಗಿದೆ. ಎರಡು ವ್ಯತ್ಯಸ್ತ ಮನೋಭಾವದವರು ಒಂದು ಛತ್ರಿಯ  ಕೆಳಗಿರು ತ್ತಾರೆ. ಅಲ್ಲಿ ಪ್ರಣಯದ ಜೊತೆಗೆ ಅನೇಕ ಘಟ್ಟಗಳು ಹಾದು ಹೋಗುತ್ತವೆ. ಆರ್ಥಿಕ ಅಡಚಣೆಗಳುಂಟಾಗಬಹುದು. ರೋಗ ಬಾದಿಸ ಬಹುದು. ವ್ಯತ್ಯಸ್ತ ಮನೋಭಾವವಿರುವ ಇನ್ನೋ ರ್ವರ ಜೊತೆ ವಾಸಿಸಬೇಕಾದ ಅನಿವಾರ್ಯತೆ ಅಲ್ಲಿ ಉದ್ಭವವಾಗುವುದು. ಅವಳು  ಒಂದು ರೀತಿಯಲ್ಲಿ ಚಿಂತಿಸಿದರೆ ಆತ ಇನ್ನೊಂದು ರೀತಿಯಲ್ಲಿ ಚಿಂತಿಸುತ್ತಾನೆ. ಉದಾಹರಣೆಗೆ ಅವಳು ಚದ್ದರ ಹೊದಿಕೆಯನ್ನು ಬಯಸಿದರೆ  ಆತ ಫ್ಯಾನ್ ಹಾಕಲು ಬಯಸುತ್ತಾನೆ. ಕೆಲವೊಮ್ಮೆ ಟೂತ್ ಬ್ರಷ್ ಟವೆಲ್ ಕಾಣಲು ಸಿಗುವುದಿಲ್ಲ. ಚಹಾದಲ್ಲಿ ಸಿಹಿ ಹೆಚ್ಚಾದರೆ, ನನ್ನ  ಪ್ರಣಯವು ಸಕ್ಕರೆಗಿಂತಲೂ ಸಿಹಿಯಾಗಿದೆ ಎಂದು ದಾಂಪತ್ಯದ ಆರಂಭ ಕಾಲದಲ್ಲಿ ಸುಮ್ಮನಿರುವವನು ಹತ್ತು ವರ್ಷ ಕಳೆದಾಗ “ಸಿಹಿ  ಕಮ್ಮಿಯಾಗಬೇಕೆಂದು ನಿನಗಿನ್ನೂ ತಿಳಿದಿಲ್ಲವೇ?” ಎಂದು ಅಬ್ಬರಿಸುತ್ತಾನೆ.
ಇದು ಡೇಟಿಂಗ್‍ನಲ್ಲಿ ಕಾಣಸಿಗದು. ವಿವಾಹ ವೆಂಬುದು ಬಹಳ ಗೌರವಯುತವಾದ ಸಮರ್ಪಣೆ ಯಾಗಿದೆ. ಮದುವೆಯಲ್ಲಿ ನಾವು ನೀಡುವವರಾಗ ಬೇಕು. ನನಗೇನು ಸಾಧಿಸಬಹುದು ಎಂಬುದಕ್ಕಿಂತ ನನ್ನಿಂದೇನು ನೀಡಬಹುದು ಎಂಬುದರ ಕುರಿತು ಚಿಂತಿಸಬೇಕು. ಇದು  ಹೇಳಲು ಬಹಳ ಸುಲಭ. ಪ್ರಾಯೋಗಿಕವಾಗಿ ಜಾರಿಗೆ ತರಲು ತುಂಬಾ ಕಷ್ಟ. ಒಂದು ಅನುಭವವನ್ನು ವಿವರಿಸುತ್ತೇನೆ.
“ಒಮ್ಮೆ ನಾನು ಸ್ತ್ರೀ-ಪುರುಷರ ಹಕ್ಕುಗಳ ಕುರಿತು ವಿವಾಹ ಸಮಾರಂಭದಲ್ಲಿ ತರಗತಿ ನಡೆಸುತ್ತಿದ್ದೆ. ಈ ಕ್ಲಾಸ್‍ನಲ್ಲಿ ಪತಿಗೆ ಪತ್ನಿಯ ಮೇಲಿ ರುವ ಹಕ್ಕುಗಳು, ಪತ್ನಿಗೆ ಪತಿಯ ಮೇಲಿರುವ ಹಕ್ಕುಗಳ ಕುರಿತು ಬರೆದ ಪತ್ರಗಳನ್ನು ಅಲ್ಲಿ ಪ್ರದರ್ಶಿಸಿದ್ದೆ. ಪತಿಯ ಹಕ್ಕುಗಳ ಪತ್ರ ಪತ್ನಿಗೂ,  ಪತ್ನಿಯ ಹಕ್ಕುಗಳ ಪತ್ರ ಪತಿಗೂ ನೀಡಿದ್ದೆ. ಬಳಿಕ ಆ ಉಪನ್ಯಾಸದಲ್ಲಿ ಈ ಹಕ್ಕುಗಳ ಕುರಿತು ಮತ್ತೆ ಮತ್ತೆ ಎಚ್ಚರಿಸಿದ್ದೆ. ನಿಮಗಿರುವ  ಹಕ್ಕುಗಳ ಕುರಿತು ಓದಬೇಕಾಗಿಲ್ಲ. ನಿಮಗೆ ಸಿಕ್ಕಿದವುಗಳ ಬಗ್ಗೆ ಮಾತ್ರ ಓದಿರಿ. ಬಳಿಕ ಏನಾದರೂ ಮಾಡಲಿಕ್ಕಿದ್ದರೆ ಮಾಡಿರಿ ಎಂದು  ಪ್ರಾರಂಭದಲ್ಲಿ ಸೂಚಿಸಿದ್ದೆ. ನನ್ನ ಉಪನ್ಯಾಸ ಮುಗಿದಾಗ ಸುಮಾರು ಇಪ್ಪತ್ತರಷ್ಟು ಸಹೋದರರು ನನ್ನನ್ನು ಸಮೀಪಿಸಿ ಪತಿಯ ಹಕ್ಕುಗಳ  ಬರಹದ ಪ್ರತಿಯೊಂದನ್ನು ನೀಡುವಿರಾ ಎಂದು ಕೇಳಿದರು. `ಏನಿಲ್ಲ ಸುಮ್ಮನೆ’ ಎಂದು ತಲೆ ಕರೆಯುತ್ತಾ ನಿಂತರು. ಯಾಕೆಂದರೆ ಅದು  ಸಿಕ್ಕಿದರೆ ಬಳಿಕ ಪತ್ನಿಯೊಂದಿಗೆ ‘ನೋಡು, ಈ ನಂಬರ್ ನಾಲ್ಕನೆಯದ್ದು. ಕಳೆದ ಆರು ತಿಂಗಳಿಂದ ನೀನು ನನ್ನಲ್ಲಿ ಈ ರೀತಿ ವರ್ತಿಸುತ್ತಿದ್ದಿ ಎಂದು ಹೇಳಿ, ಮುಖ ಸಿಂಡರಿಸಿ ಗದರಿಸ ಬಹುದಲ್ಲವೇ? ಅದು ಮನುಷ್ಯ ಸಹಜವಾದ ಗುಣ. ತನಗೆ ಫಲಪ್ರದವಾಗುವವುಗಳನ್ನು ಎತ್ತಿ  ತೋರಿಸುವ ಗುಣವದು. ಮುಸ್ಲಿಮ್ ತಂದೆ-ತಾಯಂದಿರನ್ನು ಒಮ್ಮೆ ನೋಡಿರಿ. “ವಬಿಲ್ ವಾಲಿದೈನಿ ಇಹ್ಸಾನಾ” ಎಂಬ ಕುರ್‍ಆನ್ ಸೂಕ್ತ  (ನಿಮ್ಮ ಮಾತಾಪಿತರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿರಿ) ಅವರಿಗೆ ಕಂಠಪಾಠವಿದ್ದರೆ ಎಷ್ಟು ಚೆನ್ನ? ಅದನ್ನು ಸ್ಮರಿಸಿದರೆ ಅವರಿಗೆ ಹೆಚ್ಚು  ಪ್ರಯೋಜನ ಕಾರಿಯಲ್ಲವೇ? ಮಕ್ಕಳನ್ನು ಆಗಾಗ ಎಚ್ಚರಿಸುತ್ತಿರ ಬಹುದಲ್ಲವೇ?
ಜನರು ದಾಂಪತ್ಯ ಜೀವನದ ಕುರಿತು ಒಂದೆರಡು ಪುಸ್ತಕಗಳನ್ನು ಓದಿರಬಹುದು ಅಥವಾ ಪ್ರವಚನಗಳನ್ನು ಕೇಳಿರಬಹುದು. ಅದರಲ್ಲಿ ತಮ್ಮ  ಹಕ್ಕುಗಳ ಕುರಿತು ಇರುವ ಪ್ರಸ್ತಾವನೆಗಳನ್ನು ನೆನಪಿನಲ್ಲಿಡುತ್ತಾರೆ. ಸಹಜವಾಗಿ ಆಗ ಸಮಸ್ಯೆ ಉದ್ಭವವಾಗುತ್ತದೆ. ನಾನು ಮನೆಗೆ ಬಂದಾಗ  ಆಕೆ ಮುಗುಳ್ನಕ್ಕು ಸ್ವಾಗತಿಸಿಲ್ಲ ಬದಲು ಮುಖ ಸಿಂಡರಿಸಿದ್ದಾಳೆ. ನನ್ನ ಮಾನಸಿಕ, ದೈಹಿಕವಾದ ಅಗತ್ಯಗಳನ್ನು ಅವಳು ಈಡೇರಿಸುತ್ತಿಲ್ಲ. ನನ್ನ  ಕುಂದು ಕೊರತೆಗಳನ್ನು ಕಂಡು ಹಿಡಿದು ವಿಮರ್ಶಿಸುವಲ್ಲಿ ಆಕೆ ಮುಂದು ಹೀಗೆ ಪಟ್ಟಿಯು ಉದ್ದಕ್ಕೆ ಬೆಳೆಯುವುದು. ಸಮಸ್ಯೆಗಳು  ಹೆಚ್ಚಾಗುತ್ತಲೇ ಇರುವುದು. ಆದರೆ ಆತನಿಗೂ ಅದಕ್ಕೆ ವ್ಯತ್ಯಸ್ತವಾಗಿ ಚಿಂತಿಸಬಹುದಲ್ಲವೇ? ಅವಳಿಗಾಗಿ ನಾನು ಏನು ಮಾಡಿದ್ದೇನೆ. ಅವಳಿಗೆ  ಏನಾದರೂ ತಂದುಕೊಡದೆ ಹಲವು ದಿನಗಳು ಕಳೆದವು ಅಲ್ಲವೇ? ಪರವಾಗಿಲ್ಲ. ಅವಳಿಗೇನೂ ಪ್ರಮಾದವಾಗಿದೆ. ಸ್ವಲ್ಪ ಸಹನೆ ವಹಿಸೋಣ.  ಎಷ್ಟಾದರೂ ನನ್ನ ಬಾಳ ಸಂಗಾತಿ ಯಲ್ಲವೇ? ಅವಳಿಗೂ ಸ್ವಲ್ಪ ನೆಮ್ಮದಿ ಸಿಗಲಿ. ಉಪ್ಪು ಜಾಸ್ತಿಯಾದರೇನಾಯಿತು? ಅವಳು ನಾನು ಕೆರಳಿಸುವಂತೆ ಮಾತಿನಿಂದ ಪ್ರಚೋದಿಸುತ್ತಾಳೆ. ಆದರೂ ಸ್ವಲ್ಪ ಸುಮ್ಮನಿರೋಣ. ಆಗಲಾದರೂ ಸಮಸ್ಯೆ ಸ್ವಲ್ಪ ಬೇಗ ಪರಿಹಾರವಾಗುತ್ತದಲ್ಲಾ  ಹೀಗೇ… ಸಹನೆ, ತಾಳ್ಮೆ, ದಯೆಯೆಂಬುದು ಇದರಲ್ಲಿ ಧಾರಾಳ ಕಂಡು ಬರಬೇಕು. ಹಾಗಾದರೆ ಬುದ್ಧಿಮತ್ತೆಯುಳ್ಳ ಪತ್ನಿಗೆ ಸಮಸ್ಯೆಯ  ಗಂಭೀರತೆ ತಕ್ಷಣ ಅರ್ಥವಾಗುತ್ತದೆ. ಅವಳು ಕೂಡಾ ಸ್ವಲ್ಪ ತಗ್ಗಿ ಬಗ್ಗಿ ನಡೆಯಲಾರಂಭಿಸುತ್ತಾಳೆ. ಇದು ಪತಿ ಪತ್ನಿ ಈರ್ವರೂ ಮಾಡಬೇಕಾದ ಕಾರ್ಯವಾಗಿದೆ.
ಹೆಚ್ಚಿನದ್ದೇನೂ ನಿರೀಕ್ಷಿಸದೆ ನಾವು ಕಾರ್ಯ ವೆಸಗುವಾಗ ಸ್ವಲ್ಪಮಟ್ಟಿಗೆ ಸಿಗುವ ಪ್ರತಿಫಲಗಳೂ ಭಾರೀ ಸಂತೋಷಕ್ಕೆ ಕಾರಣವಾಗುವುದು.  ಅದಕ್ಕೆ ಮೊದಲನೆಯದಾಗಿ ನಿರೀಕ್ಷೆಯನ್ನು ನಾವು ತೊರೆಯಬೇಕು.
ಮಹಿಳೆಯರ ವಿಚಾರವೂ ರಸವತ್ತಾದುದು. ಕಚೇರಿಯ ಕೆಲಸ ಮುಗಿಸಿ ದಣಿದು ಪತಿ ಬರುವಾಗ ಅವಳೇನಾದರೂ ಬಾಗಿಲಲ್ಲಿ ಮುಗು ಳ್ನಕ್ಕು  ಸ್ವಾಗತಿಸಿದರೆ ಅವನಿಂದ ಪ್ರಶ್ನೆಯೊಂದು ಕೇಳಿ ಬರುತ್ತದೆ. ಇವತ್ತು ನಿನಗೇನಾಗಿದೆ? ಏನಿದು ಆಶ್ಚರ್ಯ ನಿನ್ನ ತಾಯಿ ಬಂದಿದ್ದಾರೆಯೇ?  ಏನಾದರೂ ಸಮಸ್ಯೆಯಿದೆಯೇ? ಎಂಬ ಪ್ರಶ್ನೆ. ಯಾಕೆಂದರೆ, ಅಂತಹದ್ದನ್ನು ಆತ ಮೊದಲ ಬಾರಿ ನೋಡುತ್ತಿದ್ದಾನೆ. ಏನೋ ಒಂದು ಬೆನ್ನ  ಹಿಂದೆ ಬರುವ ಸೂಚನೆಯೆಂಬಂತೆ ಅನುಮಾನ ದೊಂದಿಗೆ ಆತ ನೋಡುತ್ತಾನೆ. ಹೌದು, ಪತಿಯೊಂದಿಗೆ ಮನಬಿಚ್ಚಿ ನಗಲು ಯಾವಾಗಲೂ  ಆಕೆ ವಿಮುಖತೆ ತೋರುತ್ತಾಳೆ. ಇದು ಮಹಿಳೆಯರ ಸಾಮಾನ್ಯ ಗುಣ. ಯಾಕೆಂದರೆ ಅವಳಲ್ಲಿ ಆತ ಮಾಡದಿರುವ ಕೆಲಸಗಳ ಪಟ್ಟಿಯೇ  ಇದೆ. ಇನ್ನು ಆಕೆ ಹೇಗೆ ತಾನೇ ನಕ್ಕಾಳು. ಪುರುಷರಲ್ಲಿ ಆತನ ಕಚೇರಿಯ ಪಿ.ಎ. ಬಸ್ಸಲ್ಲಿ, ರೈಲಿನಲ್ಲಿ ಮಾತ್ರವಲ್ಲ, ಟ್ರಾಫಿಕ್ ಬ್ಲಾಕ್ ಆದಾಗ  ಹತ್ತಿರದ ವಾಹನದ ಹುಡುಗಿಯೂ ನಗುತ್ತಾಳೆ. ಅಷ್ಟು ಅಲ್ಲ ಜಾಹೀ ರಾತುಗಳಲ್ಲಿನ ಲಲನೆಯರೂ ಆತನನ್ನು ನೋಡಿ ನಗುತ್ತಲೇ ಇರುತ್ತಾರೆ.  ಸಣ್ಣ ವಸ್ತ್ರವೇ ಹೆಚ್ಚಿನ ಗೌರವವೆಂಬ ಭಾವನೆ ಸಮಾಜದಲ್ಲಿ ನೆಲೆ ನಿಂತಿರುವಾಗ ಹೊರಗೆ ಕಾಲಿಡಲಾಗದ ರೀತಿಯ ಪ್ರಚೋದನೆಗಳ ಲೋಕದಲ್ಲಿ ಆತ ಕಾಲ ಕಳೆಯುತ್ತಿರುತ್ತಾನೆ. ಇದು ವಾಸ್ತವವಾಗಿದೆ. ಇದನ್ನು ಕಂಡೂ ಕಾಣದಂತಿದ್ದೂ ಪ್ರಯೋಜನವಿಲ್ಲ. ಈ ಎಲ್ಲದರಿಂದ  ದೃಷ್ಟಿ ತಗ್ಗಿಸಿ ನಮ್ಮ ಖಾಸಗಿ ಸ್ಥಳವಾದ ಮನೆಗೆ ಪ್ರವೇಶಿಸುವಾಗ ಆಕೆ ನಗದೆ ಸಿಂಡರಿಸಿದ ಮುಖದಿಂದ ಕೊಳೆ ತುಂಬಿದ ಬಟ್ಟೆಧರಿಸಿ ¨ ಬಾಗಿಲು ತೆರೆಯುತ್ತಾಳೆ. ತಡವಾಯಿತು ಸಾಸಿವೆ ಮರೆತು ಹೋಯಿತು ಮುಂತಾದ ವಿಚಾರಗಳ ಕುರಿತು ನಂತರ ಚಿಂತಿಸಬಹುದಲ್ಲವೇ?
ವೈವಾಹಿಕ ಸಂಬಂಧದಲ್ಲಿ ಪ್ರಣಯ ನೆಲೆ ನಿಲ್ಲಬೇಕೆಂಬುದು ಅತ್ಯಗತ್ಯವಾಗಿದೆ. ಕೌಟುಂಬಿಕ ಸಂಬಂಧಗಳು ಹಳಸುತ್ತಿರುವ ಕಾಲದಲ್ಲಿ ನಾವು  ಕಳೆಯುತ್ತಿದ್ದೇವೆ. ನನ್ನನ್ನು ವಿವಾಹವಾದದ್ದರಿಂದ ಆತ ಅಥವಾ ನನ್ನನ್ನು ಆಕೆ ವಿವಾಹವಾಗಿದ್ದರಿಂದ ಸಂಗಾತಿಯಾಗಿರಲೇಬೇಕು. ಆಕರ್ಷಣೆ  ಮತ್ತು ಪ್ರಣಯವು ವಿವಾಹದಲ್ಲಿ ನೆಲೆ ನಿಂತಿರಬೇಕು. ಅದರಲ್ಲಿ ಸಂಕೋಚವಿರಬಾರದು. ಅದಕ್ಕೆ ವ್ಯತಿರಿಕ್ತ ವಾದರೆ ಮಾತ್ರ  ಲಜ್ಜಾರ್ಹವಾಗುವುದು. ಆಪ್ತ ಸಂಬಂಧಿಕರ ಮದುವೆಗೆ ಮಹಿಳೆಯರು ಎಷ್ಟು ಚೆನ್ನಾಗಿ ಅಂದವಾಗಿ ಹೊರಡುತ್ತಾರೆ. ಅದೇ ಪ್ರೀತಿಯನ್ನು  ತನ್ನ ಪತಿಗೆ ಧಾರೆಯೆರೆಯಲು ಜಿಪುಣತೆ ತೋರುವುದೇಕೆ? ನಿಮಗೆ ಮಕ್ಕಳು ನಾಲ್ಕು ಇರಲಿ, ಎಂಟೇ ಇರಲಿ ಇದರಲ್ಲಿ ಕೊರತೆ ತೋರಿಸಲೇ  ಬಾರದು. ಅದು ಭವಿಷ್ಯದಲ್ಲಿ ಮಕ್ಕಳಿಗೂ ಉತ್ತಮ ಮಾದರಿಯಾಗುವುದು. ಅವರಿಗೆ ಮುಂದಿನ ಜೀವನದಲ್ಲಿ ಕೌಟುಂಬಿಕ ಸಂಬಂಧಗಳು  ಹೇಗಿರಬೇಕೆಂಬ ಬಗ್ಗೆ ಕಲಿಸಬೇಕಾ ಗಿಲ್ಲ. ಕೌಟುಂಬಿಕ ಸಂಬಂಧಗಳು ಶಿಥಿಲವಾಗುತ್ತಿರು ವಾಗ ಮಕ್ಕಳೊಂದಿಗೆ ಇಷ್ಟಾದರೂ ಮಾಡಬಹು  ದಲ್ಲವೇ? ಪ್ರೀತಿಸುವ ತಂದೆ-ತಾಯಂದಿರ ಮಕ್ಕಳು ಒಂದೇ ಛತ್ರಿಯಡಿಯಲ್ಲಿ ಜೀವಿಸುವ ತಂದೆ ತಾಯಂದಿರ ಮಕ್ಕಳಿಗಿಂತ ಮಾನಸಿಕವಾಗಿ  ಸುದೃಢ ವಾಗಿದ್ದಾರೆಂಬುದು ಅಧ್ಯಯನಗಳಿಂದ ಬಹಿರಂಗ ವಾದ ವಿಚಾರವಾಗಿದೆ.
ಬಾಗಿಲು ತೆರೆದು ಬರುವ ಸಂಗಾತಿ ತನಗೆ ಕಣ್ಣಿಗೆ ತಂಪು ನೀಡುತ್ತಾಳೆಂದಾದರೆ ಅದನ್ನು ಮಾತಿನಿಂದ ವರ್ಣಿಸಲು ಪತಿಯು ಬಾಧ್ಯಸ್ಥನಾಗಿ  ದ್ದಾನೆ. ನಮ್ಮ ಊರ
ಗಂಡಸರಿಗೆ ಒಂದು ಸಮಸ್ಯೆಯಿದೆ. ಹೆಂಡತಿಯನ್ನು ಹೊಗಳುವುದೆಂದರೆ ಅವರಿಗೆ ದೇಹದಿಂದ ಏನೋ ಕತ್ತರಿಸಿದಂತಾಗುವುದು. ಕೆಲವರಿಗೆ  ಅವಳ ಕುರಿತು ಉತ್ತಮ ಮಾತುಗಳನ್ನಾಡಿದರೆ ಉಳುಕಿದ ಅನುಭವವಾಗುತ್ತದೆ. ಅದಕ್ಕಾಗಿ ಕೂಡಲೇ ಆಕೆಯ ಯಾವುದಾದರೊಂದು ಲೋಪವನ್ನು ಎತ್ತಿ ತೋರಿಸಿ ಅದನ್ನು ಸಮನಾಗಿಸಲು ನೋಡುತ್ತಾರೆ. ಉತ್ತಮವಾದ ಆಹಾರ ದೊರೆತರೆ “ಹಾ… ಉತ್ತಮ ರುಚಿ  ಇದೆಯಲ್ಲವೇ. ಆದರೆ ನಿನ್ನ ತಂದೆ ಇದ್ದಾರಲ್ಲಾ ಅವರು ಸರಿಯಿಲ್ಲ” ಎಂಬಂತಹ ಮಾತುಗಳನ್ನಾಡುತ್ತಾರೆ. ಇಂತಹದ್ದನ್ನು ನಿಲ್ಲಿಸಬೇಕು.  ಕೌಟುಂಬಿಕ ಸಂಬಂಧವೆಂದರೆ ಇಂದು ನಮ್ಮನ್ನು ಮಾತ್ರ ಕಾಡುವ ವಿಚಾರವಲ್ಲ. ನಾಳೆ ನಮ್ಮ ತಲೆಮಾರುಗಳ ಕುಟುಂಬಗಳು ದುರ್ಬಲ ಗೊಳ್ಳಬಾರದು. ಬೆದರಿಕೆಗೆ ರಕ್ತಹರಿಸುವಿಕೆಯ ಈ ಲೋಕದಲ್ಲಿ ಹೇಗೆ ಜೀವಿಸಬೇಕೆಂದು ನಿರ್ಧರಿಸುವ ತಾಣವಿದು. ಪರಸ್ಪರ ಗೌರವಿಸುವ  ಅಂಗೀಕರಿಸುವ ಸಂಗಾತಿಗಳಿಂದ ಕುಟುಂಬವು ಸರಿಯಾದ ದಿಶೆಯಲ್ಲಿ ಮುಂದುವರಿಯಲು ಸಾಧ್ಯವಾಗುವುದು. ಒಂದಾಗಿ ಬೆರೆತಿರುವ ತಂದೆ  ತಾಯಂದಿರ ಮಕ್ಕಳು ಸ್ನೇಹ ಮತ್ತು ಪ್ರೀತಿಯ ಹಾದಿಯಿಂದ ವ್ಯತಿಚಲಿಸುವ ಸಾಧ್ಯತೆ ತೀರಾ ವಿರಳ. ಮನಸ್ಸು ಮಾಡಿದರೆ ಕುಟುಂಬವನ್ನು  ಸುದೃಢಗೊಳಿಸಬಹುದು. ಚಿಂತಿಸಿ ನೋಡಿ. ನಿಮ್ಮ ಮನೆಯೊಳಗೆ ನಿಮ್ಮನ್ನು ಸಂಪೂರ್ಣವಾಗಿ ಪ್ರೀತಿಸುವ ಅರ್ಥಮಾಡಿಕೊಳ್ಳುವ ಓರ್ವರು  ಎಷ್ಟು ಕಾಲ ಕೆಳದರೂ ಸಂತಸಗಳಿಗೆ ನಿಮ್ಮೊಂದಿಗೆ ಕೈ ಜೋಡಿಸುತ್ತಾ ಪರಿಶ್ರಮಿಸುವವರಿದ್ದರೆ ನಿಮಗೆ ಸಿಗುವ ಆತ್ಮ ಸಂತೃಪ್ತಿ ಎಷ್ಟಿರಬಹುದು?
(ಲೇಖಕರು ಅಮೇರಿಕಾದ ಯುವ ವಿದ್ವಾಂಸ,
ಬಯ್ಯಿನ ವಿದ್ಯಾ ಸಂಸ್ಥೆಯ ಸ್ಥಾಪಕರಾಗಿದ್ದಾರೆ.)
ಅನು: ಅಬೂ ಸಲ್‍ವಾನ್