ಶಂಭುಲಾಲ್‍ನ ಮೆದುಳಿಗೆ ವಿಷ ತುಂಬಿದವರ ಬಂಧನ ಯಾವಾಗ?

0
2002

ಲವ್‍ಜಿಹಾದ್‍ನಿಂದ ಹಿಂದೂ ಹೆಣ್ಣು ಮಕ್ಕಳನ್ನು ರಕ್ಷಿಸುವುದಕ್ಕಾಗಿ ರಾಜಸ್ಥಾನದಲ್ಲಿ ಕೂಲಿ ಕಾರ್ಮಿಕ ಮುಸ್ಲಿಂ ಮಧ್ಯ ವಯಸ್ಕನನ್ನು ಕೊಡಲಿಯಿಂದ ಕಡಿದು ಹಾಕಿ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟು ಕೊಂದು ಅದನ್ನು ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಪಡಿಸಿದ ಅತೀ ನೀಚ ಪ್ರವೃತ್ತಿ ತೀವ್ರ ಹಿಂದುತ್ವವಾದಿಗಳ ನೇತೃತ್ವದಲ್ಲಿ ನಮ್ಮ ದೇಶ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಇತ್ತೀಚೆಗಿನ ಉದಾಹರಣೆಯಾಗಿದೆ. ಬಂಗಾಳದ ಮಾಲ್ಡದಿಂದ ರಾಜಸ್ಥಾನಕ್ಕೆ ಕೂಲಿ ಕೆಲಸಕ್ಕೆ ಬಂದು ಜೀವನ ನಡೆಸುತ್ತಿದ್ದ 50 ವರ್ಷದ ಮುಹಮ್ಮದ್ ಅಫ್ರಾಝುಲ್ ಎನ್ನುವ ವ್ಯಕ್ತಿಯನ್ನು ಲವ್‍ಜಿಹಾದ್ ನಡೆಸುವಾತ ಎನ್ನುವ ಹೆಸರಿನಲ್ಲಿ ಹಗಲು ಕರೆಯಿಸಿಕೊಂಡು ಕಡಿದು, ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ.
ಹೀನವಾದ ಈ ಕೃತ್ಯವನ್ನು ಬಹಳ ಸ್ಪಷ್ಟವಾಗಿ ಚಿತ್ರೀಕರಿಸುವುದು ಮತ್ತು ಅದನ್ನು ವಾಟ್ಸಪ್‍ನಲ್ಲಿ ಪೋಸ್ಟ್ ಮಾಡಿರುವುದು ಭಯಾನಕ. ಕೊಲೆ ನಡೆಸುವುದರ ವೀಡಿಯೊ ಅಲ್ಲದೆ, ಕೊಲೆಗಡುಕ ಶಂಭುಲಾಲ್, ಕಾವಿ ಧ್ವಜ ಹಿನ್ನೆಲೆಯಲ್ಲಿ ನಿಂತು ಕೊಂಡು ಜಗತ್ತಿನೊಂದಿಗೆ ಹೇಳುತ್ತಿರುವ ಕೆಲವು ವಿಷಯಗಳು ಚಿತ್ರೀಕರಿಸಿ ಪೋಸ್ಟ್ ಮಾಡಲಾಗಿದೆ. ಲವ್ ಜಿಹಾದ್‍ನಿಂದ ಹಿಂದೂ ಸಹೋದರಿ ಯರನ್ನು ರಕ್ಷಿಸಲು ತಾನು ಈ ಕೃತ್ಯ ನಡೆಸಿದೆ ಎಂದು ಆತ ಹೇಳುತ್ತಿದ್ದಾನೆ. ಲವ್ ಜಿಹಾದ್ ಪ್ರೋತ್ಸಾಹಿಸುತ್ತಿದೆ ಎನ್ನುವ ಹೆಸರಿನಲ್ಲಿ ಪದ್ಮಾವತಿ, ಪಿ.ಕೆ. ಮುಂತಾದ ಸಿ ನಿಮಾಗಳನ್ನು ಆತ ಟೀಕಿಸುತ್ತಿದ್ದಾನೆ. ಬಾಬರಿ ಮಸೀದಿ ಧ್ವಂಸವಾಗಿ 25 ವರ್ಷಗಳು ಕಳೆದಿವೆ. ಆದರೆ ಏನಾದರೂ ಆಯಿತೆ? ಆದ್ದರಿಂದ ಜಿಹಾದಿಗಳ ವಿರುದ್ಧ ಈ ದಾರಿಯನ್ನೇ ಆಯ್ಕೆ ಮಾಡಬೇಕಾಗಿದೆ. ಇಸ್ಲಾಮಿಕ್ ವಿಚಾರಧಾರೆ ಅನುಸರಿಸುವವರು ಮತ್ತು ಕಪ್ಪು ಬಟ್ಟೆ ಧರಿಸಿ ಮಸೀದಿಯ ಹೊರಗೆ ಅಂಗಡಿಗಳಲ್ಲಿ ಬಂದು ನಿಲ್ಲುವವರು ನಮ್ಮ ಸಾಂಸ್ಕøತಿಕ ಪರಂಪರೆಗೆ ಬೆದರಿಕೆಯಾಗಿದ್ದಾರೆ. ಮಹಾ ರಾಜ ಪ್ರತಾಪ್ ಸಿಂಗ್ ಇಸ್ಲಾಮಿಕ್ ಜಿಹಾದ್ ವಿರುದ್ಧ ಹೋರಾಡಿದಂತೆ ನಾವು ಹೋರಾಡಬೇಕು. ಆದ್ದರಿಂದ ನಾನು ಅದನ್ನು ಮಾಡಿದ್ದೇನೆ. ಏನಿದ್ದರೂ ಒಂದು ದಿವಸ ಸಾಯಬೇಕು. ಅವರನ್ನು ನಿರ್ಮೂಲಿಸಿದ ಬಳಿಕ ಸಾಯುವುದು ಉತ್ತಮ ಅಲ್ಲವೇ? ತಾನಿದೆಲ್ಲವನ್ನೂ ರಾಜಸಮುಂದ್‍ನ ಮಹಾದೇವ ಮಂದಿರ ದಲ್ಲಿ ಹೇಳಲು ಹೋಗುತ್ತಿದ್ದೇನೆ. ಮೇವಾರ್‍ನ ಎಲ್ಲ ಸಹೋದರರು ಸಹೋದರಿ ಯರು ನನ್ನನ್ನು ಅನುಸರಿಸಬೇಕು. ಈ ರೀತಿ ಶಂಭೂಲಾಲನ ಭಾಷಣ ಸಾಗುತ್ತಿದೆ.
ಮುಹಮ್ಮದ್ ಅಫ್ರಾಝುಲ್ ಕೊಲೆ ಈ ಸ್ವಭಾವದ ಮೊದಲ ಘಟನೆಯಲ್ಲ. ರಾಜಸ್ಥಾನದಲ್ಲಿ ಕಳೆದ ಒಂಬತ್ತು ತಿಂಗಳಲ್ಲಿ ನಾಲ್ವರು ಮುಸ್ಲಿಮರನ್ನು ಈ ರೀತಿ ವಿವಿಧ ಕಾರಣಗಳ ಹೆಸರಿನಲ್ಲಿ ಕೊಲ್ಲಲಾಗಿದೆ. ಕಾನೂನು ವ್ಯವಸ್ಥೆಯ ವೈಫಲವಲ್ಲ ಇದು. ಬದಲಾಗಿ ಆಡಳಿ ತಕೂಟ, ಪೊಲೀಸರ ಸಹಿತ ಕಾನೂನು ಪಾಲಕ ವ್ಯವಸ್ಥೆ ಮಾಧ್ಯಮಗಳು ಒಂದು ಮಿತಿವರೆಗೆ ಸೇರಿ ಸೃಷ್ಟಿಸಿರುವುದೇ ಇವೆಲ್ಲ. ಹಿಂದೂ ಮಹಿಳೆಯರನ್ನು ಸುತ್ತುವರಿದು ಹಿಡಿಯಲು ಮುಸ್ಲಿಮರ ನೇತೃತ್ವದಲ್ಲಿ ಲವ್ ಜಿಹಾದ್ ಎನ್ನವ ಒಂದು ವ್ಯವಸ್ಥೆ ಸರ್ವಸಜ್ಜಿತವಾಗಿ ಕೆಲಸವನ್ನು ಮಾಡುತ್ತಿದೆ ಎನ್ನುವ ನಕಲಿ ಪ್ರಚಾರ ವನ್ನು ನಮ್ಮ ದೇಶದಲ್ಲಿ ಆರಂಭಿಸಿದ್ದೇ ಸಂಘಪರಿವಾರವಾಗಿದೆ. ಮುಖ್ಯ ಧಾರೆಯ ಮಾಧ್ಯಮಗಳು ಇದಕ್ಕೆ ದೊಡ್ಡ ಪ್ರಚಾರವನ್ನು ಕೊಟ್ಟವು. ಎಡ, ಜಾತ್ಯತೀತರು ಇದನ್ನು ಪರೋಕ್ಷವಾಗಿ ಅನುಮೋದಿಸುತ್ತಿದ್ದಾರೆ. ವಿವಾದಾಸ್ಪದ ವಾದ ಹಾದಿ ಯಾ ಪ್ರಕರಣದಲ್ಲಿ ರಾಷ್ಟ್ರೀಯ ಮಾಧ್ಯಮಗಳು ನೀಡಿದ
ತಲೆಬರಹ ಕೇರಳಾಸ್ ಲವ್ ಜಿಹಾದ್ ಎಂದಾಗಿತ್ತು. ಹೀಗೆ ಕೇರಳದಿಂದ ಆರಂಭವಾಗಿ ಉತ್ತರ ಭಾರತದಲ್ಲಿ ನಲಿದಾಡಿದ ಈ ಸುಳ್ಳು ಪ್ರಚಾರದ ಹುತಾತ್ಮ ಅಫ್ರಾಝುಲ್ ಎನ್ನುವ ನತದೃಷ್ಟ ವ್ಯಕ್ತಿಯಾಗಿದ್ದಾನೆ ಎನ್ನಬಹುದು.
ಅಫ್ರಾಝುಲ್‍ನನ್ನು ಕೊಂದ ಕೊಲೆ ಗಡುಕನೇ ಕ್ಯಾಮರಾದ ಮುಂದೆ ನಿಂತು ತಾನೇ ಕೊಂದಿರುವೆ ಎಂದು ಘೋಷಿಸಿದ್ದಾನೆ. ಆದ್ದರಿಂದ, ಗತ್ಯಂತರ ವಿಲ್ಲದೆ ಅವನನ್ನು ಬಂಧಿಸಲಾಗಿದೆ. ಅಲ್ಲದಿದ್ದರೆ ಸಂಘಪರಿವಾರದ ಕೇಂದ್ರ ಗಳು ಬೇರೆ ಯಾವುದಾದರೂ ಕಥೆಯನ್ನು ಪ್ರಚಾರ ಮಾಡಬಹು ದಾಗಿತ್ತು. ಹರಿಯಾಣದ ಜುನೈದ್‍ನನ್ನು ಹೊಡೆದು ಕೊಂದಾಗ ರೈಲಿನಲ್ಲಿ ಸೀಟು ಬಿಟ್ಟುಕೊಡದ ವಿವಾದ ಎನ್ನುವ ಪ್ರಚಾರ ವನ್ನು ಅವರು ಪ್ರಚಾರ ಮಾಡಿದ್ದರು. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಶಂಭುಲಾಲನ ಪ್ರವೃತ್ತಿ ಮಹತ್ತರ ವಾದುದು ಎಂದು ಪ್ರಚಾರ ನಡೆಸಲಾಗು ತ್ತಿದೆ. ಈ ಪೈಶಾಚಿಕ ಮನಸ್ಥಿತಿಯವರು ನಮ್ಮ ದೇಶವನ್ನು ಎಲ್ಲಿಗೆ ಕೊಂಡು ಹೋಗುತ್ತಿದ್ದಾರೆ? ಪ್ರಜಾಪ್ರಭುತ್ವದ ಮತ್ತು ಮಾನವೀಯ ಮೌಲ್ಯಗಳಲ್ಲಿ ವಿಶ್ವಾಸ ವಿರುವರು ಆಲಸ್ಯ ನಿಲುವನ್ನು ಕೊನೆ ಗೊಳಿಸಿ ಇದರ ವಿರುದ್ಧ ರಂಗಪ್ರವೇಶಿಸ ಬೇಕಾದ ಸಮಯ ಮೀರಿದೆ.