ಶಿಯಾಗಳ ಮನೆಯಲ್ಲಿ ಸುನ್ನಿಗಳು ಇಫ್ತಾರ್ ಮಾಡಬಾರದು ಎಂದು ದೇವ್ ಬಂದ್ ಫತ್ವಾ ಹೊರಡಿಸಿತೇ? ನಿಜ ಏನು?

0
1174

ನ್ಯೂಸ್ ಡೆಸ್ಕ್

ಶಿಯಾ ಮುಸ್ಲಿಮರ ಮನೆಗಳಲ್ಲಿ ಸುನ್ನಿ ಮುಸ್ಲಿಮರು ಇಫ್ತಾರ್ (ಉಪವಾಸ ತೊರೆಯಬಾರದು) ಮಾಡಬಾರದು ಎಂದು ದಾರುಲ್ ಉಲೂಮ್ ದೇವ್ ಬಂದ್ ಫತ್ವಾ ಹೊರಡಿಸಿದೆ ಎಂಬ ಮಾಧ್ಯಮ ಸುದ್ದಿಯನ್ನು ದೇವ್ ಬಂದ್ ನ ಪ್ರಮುಖರಾದ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಾಲಿ ನಿರಾಕರಿಸಿದ್ದಾರೆ ಮತ್ತು ಈ ಸುದ್ದಿಯು ಮುಸ್ಲಿಮರು ಮತ್ತು ಶಿಯಗಳನ್ನು ಪರಸ್ಪರ ಎತ್ತಿಕಟ್ಟಲು ಶ್ರಮಿಸುವವರು ಸೃಷ್ಟಿ ಮಾಡಿದ ಹುನ್ನಾರವಾಗಿದೆ ಎಂದಿದ್ದಾರೆ.
ರಮ್ಜಾನ್ ನಲ್ಲಿ ದೇವ್ ಬಂದ್ ಮುಚ್ಚಿರುತ್ತದೆ. ಹೀಗಿರುವಾಗ ಇಂಥದ್ದೊಂದು ಫತ್ವಾ ಹೊರಡಿಸುದಕ್ಕೆ ಸಾಧ್ಯವೇ ಇಲ್ಲ. ಇದೊಂದು ಸಂಚಿನ ಭಾಗ. ಮುಸ್ಲಿಮರು ಶಿಯಾಗಳ ಮನೆಯಲ್ಲಿ ಇಫ್ತಾರ್ ಮಾಡುವುದಕ್ಕೆ ಯಾವ ಆಕ್ಷೇಪವೂ ಇಲ್ಲ. ಇದು ಸುಳ್ಳು ಸುದ್ದಿ. ಈ ಬಗ್ಗೆ ತನಿಖೆಯಾಗಬೇಕು ಎಂದವರು ಆಗ್ರಹಿಸಿದ್ದಾರೆ.
ಇದೇವೇಳೆ, ಪ್ರಮುಖ ಶಿಯಾ ಧರ್ಮಗುರು ಮೌಲಾನಾ ಯಸೂಬ್ ಅಬ್ಬಾಸ್ ಕೂಡ ಈ ಫತ್ವಾದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದು, ಇದು ಸುನ್ನಿ ಶಿಯಾ ಸಂಬಂಧವನ್ನು ಹಾಳುಗೆಡವಲು ಯಾರೋ ಹುಟ್ಟು ಹಾಕಿದ ಪಿತೂರಿಯಾಗಿರಬಹುದು. ದಾರುಲ್ ಉಲೂಮ್ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿದ್ದಾರೆ.
ಸಿಕಂದರ್ ಅಲಿ ಅನ್ನುವಾತ ಈ ಫತ್ವಾದ ಬಗ್ಗೆ ಹೇಳಿಕೊಂಡಿದ್ದರು. ತಾನು ಈ ಇಫ್ತಾರ್ ದೇವ್ ಬಂದ್ ನಲ್ಲಿ ರಮ್ಜಾನ್ ಮೊದಲ ದಿನ ಫತ್ವಾ ಕೇಳಿದ್ದು, ಮರುದಿನ ದೇವ್ ಬಂದ್ ನ ಗೆಟ್ ನಲ್ಲಿ ಉತ್ತರದ ಲಕೋಟೆ ಪಡಕೊಳ್ಳುವಂತೆ ಹೇಳಲಾಗಿತ್ತೆಂದು ಅವರು ಹೇಳಿದ್ದರು.