ಸತ್ಯದ ಜೊತೆ ನಿಂತು ಹೊರಟು ಹೋದ ಸಾಚಾರ್

0
941
ಡಾ. ಸಯ್ಯಿದ್ ಝಫರ್ ಮಹ್‍ಮೂದ್
ಜಸ್ಟಿಸ್ ಸಾಚಾರ್ ಇನ್ನು ನೆನಪು ಮಾತ್ರ. ಇತ್ತೀಚೆಗಿನ ಶತಮಾನಗಳಲ್ಲಿ ಅವರಂಥ ಒಬ್ಬ ಮನುಷ್ಯ ಭೂಮಿಯಲ್ಲಿ ಅಪರೂಪವಾಗಿ  ಕಾಣಿಸಿಕೊಂಡಿದ್ದು ಎನ್ನಬಹುದು. 21ನೆ ಶತಮಾನದ ಭಾರತೀಯ ಮುಸ್ಲಿಮರ ಸ್ಥಿತಿಗತಿಯ ಅಧ್ಯಯನಕ್ಕೆ ಪ್ರಧಾನಮಂತ್ರಿಯ ಉನ್ನತಾಧಿಕಾರ  ಸಮಿತಿಯ ಅಧ್ಯಕ್ಷತೆ ಯನ್ನು ವಹಿಸಲು ಒಪ್ಪಿಕೊಂಡಿದ್ದು ಅವರ ವಿಶೇಷ ಮಾನ ವೀಯತೆಯನ್ನು ಬಹಿರಂಗಗೊಳಿಸುತ್ತದೆ. ಸಂಕುಚಿತತೆ   ಯಿಂದ ದೂರವಿದ್ದು ಮಾನವ ಸೇವಾ ಮೌಲ್ಯಗಳನ್ನು ಎತ್ತಿಹಿಡಿದ ವ್ಯಕ್ತಿ ಅವರು.
ಅವರು 2006ರಲ್ಲಿ ಸಿದ್ಧಪಡಿಸಿದ ವರದಿ ಸ್ವತಂತ್ರ ಭಾರತದಲ್ಲಿ ಉಕ್ಕಿನ ಗೋಡೆಯಂತೆ ಪ್ರತ್ಯೇಕವಾಗಿ ನಿಲ್ಲು ತ್ತದೆ. ಮುಸ್ಲಿಮರಿಗೆ ಸಂಬಂಧಿಸಿ  ಸರಿಯಾದ ವಿವರಗಳು ವರದಿಯಲ್ಲಿವೆ. ಅಂದಿನ ಅತಿ ಬಲಿಷ್ಠ ಪ್ರತಿಪಕ್ಷದವರಿಗೂ ಆ ಸತ್ಯವನ್ನು ನಿರಾಕರಿಸಲು ಸಾಧ್ಯವಾಗಲಿಲ್ಲ. ಮಾತ್ರವಲ್ಲ,  ವರದಿಯ ವಿರುದ್ಧ ಸಲ್ಲಿಸಲಾದ ಕೆಲವು ರಿಟ್ ಅರ್ಜಿ ಗಳೂ ತಿರಸ್ಕøತವಾದವು.
ಅವರು ನಿರ್ಗತಿಕರ ಧ್ವನಿಯಾದರು. ನಿರ್ಗತಿಕರಿಗಾಗಿ ಅವರು ಬಲಿಷ್ಠ ಭಾಷೆಯಲ್ಲಿ, ಮೆದು ಧ್ವನಿಯಲ್ಲಿ ಮಾತಾಡಿದರು. ಪ್ರಧಾನಮಂತ್ರಿಯ  ಉನ್ನತಾಧಿಕಾರ ಸಮಿತಿಯ ಹೊಣೆಯೊಂದಿಗೆ 2002-05ರ ಕಾಲಘಟ್ಟದಲ್ಲಿ ಅವರು ದೇಶಾದ್ಯಂತ ಸಂಚರಿಸಿ ಎಲ್ಲ ನೆಲೆಯಲ್ಲಿಯೂ  ಪುರುಷರು, ಮಹಿಳೆಯರು, ಯುವಕರೊಂದಿಗೆ ಮಾತಾಡಿದರು. ಜನರ ಮಾತುಗಳಿಗೆ ಸಂಪೂರ್ಣ ಕಿವಿಯಾನಿಸಲಾಯಿತು. ಈ ಚರ್ಚೆಗಳ  ಸಾರವನ್ನು ಸೇರಿಸಿ ಅವರು ನಂತರ ದೇಶದ ಉನ್ನತ ರಾಜಕೀಯ ನೇತೃತ್ವ ಮತ್ತು ಆಡಳಿತ ವ್ಯವಸ್ಥೆ, ಸಚಿವಾಲಯಗಳ ಗಮನಕ್ಕೆ ತಂದರು.  ಭೇಟಿ ನೀಡುವ ರಾಜ್ಯದ ಬಗ್ಗೆ ಬರೆಯುವ ಮೊದಲು ಅಲ್ಲಲ್ಲಿನ ಮುಖ್ಯ ಮಂತ್ರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.
ವಿಶೇಷಾಧಿಕಾರ ಕಾನೂನಿನ ದುರುಪಯೋಗದ ಕುರಿತು ಅಸ್ಸಾಮಿನ ಜನರು ಸಾಚಾರ್ ಸಮಿತಿಯೊಂದಿಗೆ ವಿವರವಾಗಿ ಮಾತಾಡಿದರು.  ಯಾರು ವಿದೇಶಿ ಎನ್ನುವ ಮಾನದಂಡಗಳ ಬಗ್ಗೆ ಅವರು ದೂರಿಕೊಂಡರು. ನಂತರ ಈ ವಿಷಯ ಪೊಲೀಸರೊಂದಿಗೆ ನಡೆಸಲಾದ ಸಭೆಯಲ್ಲಿ ಚರ್ಚೆಗೆ ಬಂತು. ಜನರ ಆರೋಪವನ್ನು ಪೊಲೀಸರು ನಿರಾಕರಿಸಿದರು. ಅದರ ನಡುವೆ ವಿದೇಶಿಗಳನ್ನು ಪತ್ತೆಹಚ್ಚುವ ಮಾನದಂಡಗಳ  ಕುರಿತು ಮಾತಾಡುವಾಗ  ಅಲ್ಲಿನ ಒಬ್ಬ ಯುವ ಐಪಿಎಸ್ ಅಧಿಕಾರಿ ಟೋಪಿ ಗಡ್ಡ ಲುಂಗಿ ಅದನ್ನು ಅರಿಯಲು ಇರುವ ದಾರಿಯೆಂದು  ಹೇಳಿದರು. ಇದನ್ನು ಕೇಳಿ ಹಿರಿಯ ಪೊಲೀಸ್ ಅಧಿಕಾರಿಗಳು ಗರಬಡಿದು ನಿಂತರು. ಸಾಚಾರ್ ಕೋಪದಿಂದ ಕೆಂಡಾಮಂಡಲವಾದರು.
ವರದಿಯ ಮೇಲೆ ಕೈಗೊಳ್ಳಲಾದ ಕ್ರಮಗಳ ಕುರಿತು ಅವಲೋಕನ ನಡೆಸಲು 2017 ಮಾರ್ಚ್ ಹತ್ತಕ್ಕೆ ಅವರು ದಿಲ್ಲಿಯಲ್ಲಿ ಏಕದಿನ ಸಮ್ಮೇಳನ ಕರೆದರು. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕಗಳ ವರದಿಯಲ್ಲಿ- ಮುಸ್ಲಿಂ ಸಮುದಾಯದ ಗ್ರಾಫ್ ಮತ್ತೂ ಕೆಳಗಿರುವುದು ನಿ ರಾಶಜನಕವೆನ್ನುವುದನ್ನು ವಿವರಗಳು ಬಹಿರಂಗಗೊಳಿಸಿದವು. ಇತ್ತೀಚೆಗೆ ಒಂದು ಪ್ರಶ್ನೋತ್ತರದ ಸಮಯದಲ್ಲಿ ನಾನು ಅವರ ಜತೆ  ಮಾತಾಡಿದೆ. ಜ್ಯುಡಿಶರಿ ಸಂವಿಧಾನ ಕೊಡುವ ಮಾನವಹಕ್ಕನ್ನು ರಾಷ್ಟ್ರಹಿತದ ನೆಪದಲ್ಲಿ ಅಡ್ಡಿಪಡಿಸುವ ಕುರಿತು ಏನು ಮಾಡಬೇಕೆನ್ನುವ ¸ ಸಂಶಯ ವ್ಯಕ್ತಪಡಿಸಿದೆ. ನೀವು ಬೀದಿಗೆ ಬನ್ನಿ. ಮುಂದೆ ನಿಲ್ಲಲು ನಾನಿದ್ದೇನೆ ಎಂದು ಉತ್ತರಿಸಿದರು.
ಜೀವನಾದ್ಯಂತ ಉನ್ನತ ಮೌಲ್ಯಗಳನ್ನು ಅವರು ಕಾಪಾಡಿಕೊಂಡರು. ಮಾನವೀಯತೆಗಾಗಿ ಜೀವಿಸಿದ ಅವರು ಸೃಷ್ಟಿಕರ್ತನಿಗೆ ಮಾತ್ರ  ಹೆದರಿದರು. ಸೃಷ್ಟಿಗಳ ಮುಂದೆ ಹೆದರದೆ ಎದುರಿಸಿ ನಿಂತರು. ಅವರ ಅಸ್ತಿತ್ವಕ್ಕೆ ಅಪಾಯ ಇದ್ದ ಘಟ್ಟದಲ್ಲಿ ಸತ್ಯದ ಭಾಷೆಯಲ್ಲಿ  ಮಾತಾಡಿದರು. ಮುಂದಿನ ತಲೆಮಾರನ್ನು ಅವರು ಸದಾ ಪರಿಗಣಿಸಿದರು. ಹಣ ಅಧಿಕಾರ ಸಿಗುವ ಎಲ್ಲ ಅವಕಾಶಗಳನ್ನು ಸ್ವಯಂ  ತ್ಯಜಿಸಿದರು. ಅವರ ಆತ್ಮಕ್ಕೆ ನಿತ್ಯ ಶಾಂತಿ ದೊರಕಲಿ.
(ಲೇಖಕರು, ಸಾಚಾರ ಸಮಿತಿಗೆ ಸಂಬಂಧಿಸಿದ ಡಾ. ಮನ್‍ಮೋಹನ್ ಸಿಂಗ್‍ರ ಕಚೇರಿಯಲ್ಲಿ ವಿಶೇಷ ಕರ್ತವ್ಯದಲ್ಲಿದ್ದರು)