ಸದ್ಭಾವನಾ ವೇದಿಕೆಯಿಂದ ದೀಪಾವಳಿ ಸೌಹಾರ್ದ ಕೂಟ

0
1844

ಮಂಗಳೂರು: ಸದ್ಭಾವನಾ ವೇದಿಕೆ ಜಪ್ಪು ವರ್ತುಲದ ವತಿಯಿಂದ ನ. 5 ರಂದು ದೀಪಾವಳಿ ಸೌಹಾರ್ದ ಕೂಟ ಕಾರ್ಯಕ್ರಮವು ಮೋರ್ಗನ್ಸ್ ಗೇಟ್‍ನ ಕಾಸಿಯಾ ಚರ್ಚ್ ಹಾಲ್‍ನಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಶ್ರೀ ತುಪ್ಪೆಕಲು ನರಸಿಂಹ ಶೆಟ್ಟಿ ಮಂಗಳೂರು (ಲಯನ್ಸ್ ಜಿಲ್ಲೆ 317 ಡಿ ರೀಜಿನಲ್ ಚಯರ್ ಪರ್ಸನ್)ರವರು ಮಾತನಾಡಿ, “ದೀಪಾವಳಿಯು ಅಜ್ಞಾನದಿಂದ ಜ್ಞಾನದ ಕಡೆಗೆ ಹಾಗೂ ಕತ್ತಲೆಯಿಂದ ಬೆಳಕಿನ ಕಡೆಗೆ ಹೃದಯದಲ್ಲಿ ಆತ್ಮಜ್ಯೋತಿ ಬೆಳಗುವ ಹಬ್ಬವಾಗಿದೆ. ಎಲ್ಲಾ ಧರ್ಮ ಗಳನ್ನು ಗೌರವಿಸಿಕೊಂಡು ಸ್ವಧರ್ಮ ದಲ್ಲಿರುವುದೇ ಧರ್ಮವಾಗಿದೆ. ನಾವು ಸದ್ಭಾವನೆಯಿಂದ ಜೀವಿಸಿದರೆ ಮಾತ್ರ ಒಬ್ಬರೊನ್ನೊಬ್ಬರು ಅರಿತುಕೊಳ್ಳಲು ಸಾಧ್ಯ” ಎಂದರು.
ಇನ್ನೊರ್ವ ಅತಿಥಿ ಡಾ| ವಿಲಿಯಮ್ ಮಿನೆಜಸ್ (ಪಿ.ಆರ್.ಓ. ಟುದಿ ಬಿಷಪ್ ಆಫ್, ಮಂಗಳೂರು) ಮಾತನಾಡಿ, “ದೇವನು ದೀಪಾವಳಿ ಮೂಲಕ ನಮ್ಮಲ್ಲಿರುವ ತಪ್ಪುಕಲ್ಪನೆ ಗಳನ್ನು ದೂರಗೊಳಿಸಿ ನಾವೆಲ್ಲರೂ ಸಹೋದರ ಸಹೋದರಿಯಂತೆ ಬಾಳಲು ಸಹಾಯ ಮಾಡುತ್ತಾನೆ. ಉಪ್ಪು ಯಾವ ರೀತಿಯಲ್ಲಿ ಊಟಕ್ಕೆ ರುಚಿ ಕೊಡುತ್ತದೋ ಅದೇ ರೀತಿ ಸದ್ಭಾವನಾ ವೇದಿಕೆ ಜನರಲ್ಲಿ ಸೌಹಾ ರ್ದತೆ ಕಾಪಾಡಲು ಸಹಾಯ ಮಾಡಲಿ” ಎಂದು ಹಾರೈಸಿದರು.
ಡಾ| ಮುಹಮ್ಮದ್ ಮುಬೀನ್ (ಪೆÇ್ರ| ಕರಾವಳಿ ಕಾಲೇಜು ಆಫ್ ಫಾರ್ಮಸಿ, ಮಂಗಳೂರು)ರವರು ಮಾತನಾಡಿ, ಒಳಿತು ಯಾರೇ ಮಾಡಿ ದರೂ ನಾವು ಅವರಿಗೆ ಸಹಕರಿಸಬೇಕು. ಕೆಡುಕು ಯಾರು ಮಾಡಿದರೂ ಒಂದು ವೇಳೆ ಅವರು ನಮ್ಮ ಆಪ್ತರಾಗಿದ್ದರೂ ನಾವು ಅವರಿಗೆ ಸಹಾಯ ಮಾಡ ಬಾರದು. ಸದ್ಭಾವನಾ ವೇದಿಕೆಯವರು ಮಾಡುವಂತಹ ಇಂತಹ ಸೌಹಾರ್ದ ಕೂಟಗಳು ಇವತ್ತಿನ ಕಾಲದ ಬೇಡಿಕೆ ಯಾಗಿದೆ. ನಾವು ಕೆಡುಕನ್ನು ಒಳಿತಿನ ಮೂಲಕ ನಿವಾರಿಸಬೇಕು ಎಂದು ದೇವನು ಆಜ್ಞಾಪಿಸುತ್ತಾನೆ. ನಾವು ವೈಜ್ಞಾನಿಕವಾಗಿ ಬಹಳ ಮುಂದುವರಿದಿ ದ್ದೇವೆ. ಆದರೆ ನೈತಿಕತೆಯಲ್ಲಿ ಬಹಳ ಹಿಂದುಳಿದಿದ್ದೇವೆ. ನಮ್ಮಲ್ಲಿರುವ ಅಪ ನಂಬಿಕೆಗಳು ದೂರವಾಗಲು ಸದ್ಭಾವನಾ ವೇದಿಕೆಯು ಸಹಾಯಕವಾಗಲಿ” ಎಂದು ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಸುಜಾತ ಅರುಣ್ ಪ್ರಾರ್ಥನಾ ಗೀತೆ ಹಾಡಿದರು. ಸದ್ಭಾವನಾ ವೇದಿಕೆಯ ಅಧ್ಯಕ್ಷರಾದ ಶ್ರೀ ಎಂ.ವಿ. ಸುರೇಶ್ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಜ| ಸಾಲೆಹ್ ಮುಹಮ್ಮದ್ ಧನ್ಯವಾದವಿತ್ತರು. ಜ| ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.