ಸಿರಿಯ ಯುದ್ಧ ಭೂಮಿಗೆ ಅಮೇರಿಕ ಮಿಸೈಲ್ ಗಳೊಂದಿಗೆ ಪ್ರವೇಶ 

0
1157

ನ್ಯೂಸ್‌ ಡೆಸ್ಕ್

ವಾಷಿಂಗ್ಟನ್: ಅಮೇರಿಕಾ ಮಿತ್ರ ಸೇನೆಯಿಂದ ಸಿರಿಯಾ ವಿರುದ್ದ ವೈಮಾನಿಕ ದಾಳಿ ನಡೆದಿದೆ. ಅದ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದನುಸಾರ ಈ ಪ್ರಕ್ರಿಯೆ ಜರಗಿದೆ. ಬ್ರಿಟನ್ ಮತ್ತು ಫ್ರಾನ್ಸ್ ಈ ದಾಳಿಗೆ ಸೇನಾ ಬೆಂಬಲವನ್ನು ಘೋಷಿಸಿದೆ. ಡಮಾಸ್ಕಸ್ ಬಳಿ ಸೌಮದಲ್ಲಿ ಕಳೆದ ಬಾರಿ ಸಿರಿಯಾ  ರಾಸಾಯನಿಕ ದಾಳಿ ನಡೆಸಿದ್ದರ ವಿರುದ್ಧ ಪ್ರತೀಕಾರವಾಗಿ ಈ ದಾಳಿ ನಡೆದಿದೆ. ಸಿರಿಯಾದ ರಾಸಾಯನಿಕ ಕೇಂದ್ರವನ್ನು ದ್ವಂಸಗೊಳಿಸುವುದು ನಮ್ಮ ಉದ್ದೇಶ ಎಂದು ಟ್ರಂಪ್ ಹೇಳಿದ್ದಾರೆ.

ಟ್ರ ವೈಮಾನಿಕ ದಾಳಿಯ ದೃಶ್ಯ ದ ವಿಡಿಯೋ(ಕೃಪೆ Kve NEWS)

https://youtu.be/-5EVqtJq2M8
ಸಿರಿಯಾದ ವಿರುದ್ದ ಅಪಾಯಕಾರಿಯಾದ ಯಾವುದೆ ನಿಲುವು ತಾಳಬಾರದೆಂದು ಅಮೆರಿಕ ಮತ್ತು  ಬ್ರಿಟನ್‍ನೊಂದಿಗೆ  ವಿಶ್ವ ಸಂಸ್ಥೆಯ ಪ್ರಧಾನ  ಕಾರ್ಯದರ್ಶಿ ಅಂಟನಿಯೋ ಗುಟರ್ಸ್ ಆಗ್ರಹಿಸಿದ ಬಳಿಕ ಈ ದಾಳಿ ನಡೆದಿದೆ.
ಸಿರಿಯಾದ ರಾಜಧಾನಿ ಡಮಾಸ್ಕಸ್‍ಗೆ ಸಮೀಪದ ಪ್ರದೇಶಗಳಲ್ಲಿ ಭಾರೀ ಸ್ಪೋಟಗಳು ನಡೆದಿವೆ. ಸಮಾರು ನೂರರಷ್ಟು ಮಿಸೈಲುಗಳು ಸಿರಿಯಾದ ರಾಸಾಯನಿ ಕೇಂದ್ರಗಳ ಮೇಲೆ ಪ್ರಯೋಗಿಸಲಾಗಿದೆ. ಆದರೆ ಮೂವತ್ತರಷ್ಟು ಮಿಸೈಲುಗಳು ಮಾತ್ರ ಬಂದಿದ್ದು,  ಅದರಲ್ಲಿ ಹೆಚ್ಚಿನದ್ದನ್ನು ದ್ವಂಸಗೊಳಿಸಿರುವುದಾಗಿ ಸಿರಿಯಾ ಹೇಳಿಕೊಂಡಿದೆ. ಡಮಾಸ್ಕಸ್  ದಕ್ಷಿಣ ಭಾಗದಲ್ಲಿ ಸುಮಾರು ಹದಿಮೂರು ಮಿಸೈಲುಗಳನ್ನು ದ್ವಂಸಗೊಳಿಸಿರುವುದಾಗಿ ಸಿರಿಯಾದ ಸೇನೆಯು ಹೇಳಿದೆ.

ತನ್ನ ನೆಲದಲ್ಲಿ ವಿದೇಶಿ ಕ್ಷಿಪಣಿ ದಾಳಿ ಸ್ಥಳದ ಚಿತ್ರವನ್ನು ತೋರಿಸುತ್ತಿರುವ ಸಿರಿಯಾ ಟಿವಿ

ವಾಯು ದಾಳಿಯನ್ನು ಖಂಡಿಸಿ ಡಮಾಸ್ಕಸ್ನಲ್ಲಿ ಸಿರಿಯನ್ ಜನತೆ ಪತಿಭಟಿಸುವ ಚಿತ್ರ

ಸಿರಿಯಕ್ಕೆ ಮಿಸೈಲ್ ಉಡಾಯಿಸಲಿದ್ದೇವೆ: ರಷ್ಯಾಗೆ ಟ್ರಂಪ್ ಎಚ್ಚರಿಕೆ.
Click👇🏿
https://sanmarga.com/ಸಿರಿಯಕ್ಕೆ-
ಮಿಸೈಲ್-ಉಡಾಯಿಸ/