ಸೌದಿಯಲ್ಲಿ ಸಿನೆಮಾ: ಸಿನೆಮಾದ ತಪ್ಪೇನಿದೆ?

0
2467
ಸೌದಿ ಅರೇಬಿಯ ಸಿನೆಮಾಕ್ಕೆ ತೆರೆದು ಕೊಂಡಿದೆ. ಹಾಗಂತ, ಅವರು ತೀರ್ಮಾನಿಸಿದ್ದಾರೆ. ವಿದೇಶದ ಹಲವು ದೇಶಗಳ ಹಲವು ಕಂಪೆನಿಗಳು  ಸೌದಿಯಲ್ಲಿ ಥಿಯೇಟರ್ ನಿರ್ಮಿಸಲು ತಾಮುಂದು ನಾಮುಂದು ಎಂದು ಧಾವಿಸಿ ಬಂದಿವೆ. ನಿನ್ನೆಯವರೆಗೆ ಅಲ್ಲಿ ಇಲ್ಲದ ಒಂದು ಹೊಸ  ವಿಷಯ ಸಿನೆಮಾ ಆಗಬಹುದು. ಹೊಸ ಸರಕಾರ ವೈಚಾರಿಕ ವಿಶಾಲತೆಯನ್ನು ತೋರಿಸುತ್ತಿದೆ. ಆದರೆ ಸೌದಿಯು ತನ್ನ ಹೊಸ  ತೆರೆದುಕೊಳ್ಳು ವಿಕೆಯ ಮೊದಲು ಸಮಾಜ ಕ್ರಮ ಮತ್ತು ಅದರ ಮನಸ್ಸನ್ನು ಅರಿತುಕೊಂಡಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಕಳೆದ  ಮೂವತ್ತೈದು ವರ್ಷಗಳಿಂದ ಅಲ್ಲಿಲ್ಲದ ಒಂದು ಅಲ್ಲಿ ಘಟಿಸುತ್ತಿರುವುದರಿಂದ ಸಮಾಜದಲ್ಲಿ ಕುತೂಹಲವೋ ಜಿಜ್ಞಾಸೆಗಳೋ ಇಲ್ಲ ಎಂದು  ಹೇಳಬರುವುದಿಲ್ಲ.
ಯಾಕೆಂದರೆ ಇಸ್ಲಾಮೀ ಜಗತ್ತಿಗೆ ಸಿನೆಮಾ ಎಂಬ ಮಾಧ್ಯಮದೊಂದಿಗೆ ಸರಿಯಾಗಿ ಹೊಂದಿ ಕೊಂಡಿರಲು ಸಾಧ್ಯವಾಗಿಲ್ಲ. ಸಿನೆಮಾ ¸ ಸಮಾಜದ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎಂದಿರು ವಾಗಲೂ ಉದಾಸೀನರಾಗಿರುವುದು ಕ್ಷಮ್ಯವೇ? ಆಧುನಿಕ ತಂತ್ರಜ್ಞಾನದಿಂದ  ಗರಿಷ್ಠ ಪ್ರಯೋಜನ ಪಡೆದಲ್ಲಿ ಯಶಸ್ಸು ಸಿಗುತ್ತದೆ. ಇಂದು ಜಗತ್ತು ಮೆದುಳಿನ ಯುದ್ಧದಲ್ಲಿ ತಲ್ಲೀನವಾಗಿದೆ. ಅಲ್ಲಿಗೆ ದಾಟಿ ಹೋಗಲು ಶತ್ರುಗಳು ಅಳವಡಿಸಿಕೊಂಡಿ ರುವ ದಾರಿಗಳನ್ನೇ ಇಸ್ಲಾಮೀ ಜಗತ್ತು ಸರಿಯಾದ ರೀತಿಯಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಕವಿಗಳನ್ನು ಪವಿತ್ರ  ಕುರ್‍ಆನ್ ವಿಮರ್ಶಿಸಿತು. ಇದೇ ವೇಳೆ ಕವಿತೆಯನ್ನು ಇಸ್ಲಾಮ್ ಉಪಯೋಗಿಸಿದೆ. ಸಿನೆಮಾದ ಬಗ್ಗೆ ನಮ್ಮ ನಿಲುವನ್ನು ಇದರ ಮೇಲೆ  ಕಟ್ಟಬೇಕಾಗಿದೆ.
ನಿಮಗೆ ಗೊತ್ತೇ ಇದೆ, ಕಳೆದ ಹತ್ತು ವರ್ಷ ದಲ್ಲಿ ತಂತ್ರಜ್ಞಾನದಲ್ಲಿ ಆದ ಕ್ರಾಂತಿ ಬಹುದೊಡ್ಡದು. ಇಂತಹ ಕ್ಷೇತ್ರಗಳನ್ನೆಲ್ಲ ಇಸ್ಲಾಮಿನ ಶತ್ರುಗಳು ಸಂಪೂರ್ಣವಾಗಿ ಇಸ್ಲಾಮಿನ ವಿರುದ್ಧ ಉಪ ಯೋಗಿಸುತ್ತಿದ್ದಾರೆ. ಇಸ್ಲಾಮನ್ನೇ ಟೀಕಿಸಿದ ಅದೆಷ್ಟೊ ಸಿನೆಮಾಗಳು ಬಿಡುಗಡೆಯಾಗಿವೆ.  ಇಸ್ಲಾಮಿಸ್ಟರಿಂದ ಅದೇ ಮಾಧ್ಯಮದ ಮೂಲಕ ಅವುಗಳಿಗೆ ಪ್ರತಿಕ್ರಿಯಿಸಲು ಆಗಿಲ್ಲ. ಕೆಲವು ಸಲ ವೈಚಾರಿಕವಾಗಿ ಪ್ರತಿಕ್ರಿಯಿಸಲಾಗುತ್ತಿದೆ.  ಸಿನೆಮಾ ಎಂಬ ಮಾಧ್ಯಮ ನಿಷಿದ್ಧ ಎನ್ನುವಂತೆ ಮುಂದೆ ಸಾಗಿದವರು ಹಲವರು. ಹೀಗೆ ಅದು ಅಡ್ಡಿಯೂ ಆಗಿದೆ.
ಈ ಮೊದಲು ಸೌದಿ ಅರೇಬಿಯದ ಮನೋ ಭಾವ ಹೀಗೇ ಇತ್ತು. ಆದ್ದರಿಂದ ಮೂವತ್ತೈದು ವರ್ಷಗಳ ಹಿಂದೆ ಸಿನೆಮಾ ಗೃಹಗಳನ್ನೇ  ಮುಚ್ಚಿ ವಾಣಿಜ್ಯೋದ್ದೇಶಗಳಿಗೆ ಬಳಸಲಾಯಿತು. ಆದರೆ ಯುವ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಸಿನೆಮಾದತ್ತ ಸಾಗಿದ್ದಾರೆ.  ಅವರಲ್ಲಿ ಸೌದಿಯ ಸಾಮಥ್ರ್ಯವನ್ನು ಜಗಜ್ಜಾಹೀರು ಮಾಡುವ ಉದ್ದೇಶ ಇದೆ. ಈ ಉದ್ದೇಶ ಇಟ್ಟು ಕೊಂಡು ವಿದೇಶಗಳ ಕಂಪೆನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ವಾರ್ನರ್ ಬ್ರದರ್ಸ್‍ಗಳ ಜೊತೆ ಮಾತಾಡಿದ್ದಾರೆ. ಪಿಬಿಒ ಇತ್ಯಾದಿ ಕಂಪೆನಿಗಳ ಸೌದಿಯಲ್ಲಿ  ತಮ್ಮ ಮಾರುಕಟ್ಟೆ ವಿಸ್ತರಿಸಲು ಹಾತೊರೆಯುತ್ತಿವೆ.
ಸಿನೆಮಾವನ್ನು ಮನರಂಜನೆಯ ವಸ್ತು-ವಿಷಯಗಳನ್ನಾಗಿ ಪರಿಗಣಿಸಲಾಗುತ್ತದೆ. ಸಿನೆಮಾ ವನ್ನು ಒಂದು ಮಾಧ್ಯಮ ಎಂದು ಒಪ್ಪಲು  ಕೆಲವರಿಗೆ ಇನ್ನೂ ಸಾಧ್ಯವಾಗಿಲ್ಲ. ಇಸ್ಲಾಮನ್ನು ಅವಹೇಳಿಸುವುದಕ್ಕಾಗಿ ಡೆನ್ಮಾರ್ಕಿನ ನಿರ್ದೇಶಕ ಗಿಲ್ಡ್ ವೈಡರ್ಸ್ ಒಮ್ಮೆ ಒಂದು ಸಿನೆಮಾ  ಮಾಡಿ ವಿವಾದ ಸೃಷ್ಟಿಸಿದ್ದು ಕೆಲವು ವರ್ಷ ಹಿಂದಿನ ಮಾತು. ಆದರೆ ಆತನಿಗೆ ಸಿನೆಮಾ ಬರೇ ಮನರಂಜನೆಯ ವಸ್ತು ಆಗಿಲ್ಲ. ತನ್ನ  ದುರುದ್ದೇಶ ಅಥವಾ ತೀಟೆಯನ್ನು ತೀರಿಸಲು ಸಿಕ್ಕ ಬಲಶಾಲಿ ಮಾಧ್ಯಮವಾಗಿತ್ತು. ಇವನನ್ನು ನೋಡಿ ಕಲಿಯಬೇಕಾದ ವಿಚಾರ ಇಲ್ಲಿದೆ.  ಸಿನೆಮಾವನ್ನು ಗಿಲ್ಡ್ ಸರಿಯಾಗಿ ಗುರುತಿಸಿದ. ನಮಗೆ ಅದನ್ನು ಗುರುತಿಸುವಲ್ಲಿ ಎಡವಿಕೆ ಸಂಭ ವಿಸಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ.  ಅಂದರೆ ಸೌದಿ ಅರೇಬಿಯ ಸಿನೆಮಾವನ್ನು ಒಂದು ಬಲಿಷ್ಠ ಮಾಧ್ಯಮವಾಗಿ ಈಗಲಾದರೂ ಒಪ್ಪಿಕೊಂಡಿದೆ ಎನ್ನುವುದನ್ನು ಎಲ್ಲರೂ ಒಪ್ಪಲೆಬೇಕಾಗುತ್ತದೆ.
ಆದರೆ ಈ ಮಾಧ್ಯಮವನ್ನು ಅದು  ಅಂದರೆ ಸೌದಿ ಅರೇಬಿಯ ತನ್ನ ಯಾವ ಉದ್ದೇಶಕ್ಕಾಗಿ ಉಪಯೋಗಿಸುತ್ತದೆ ಎನ್ನುವ ಸ್ಪಷ್ಟತೆ ನಮ್ಮಲ್ಲಿ  ಯಾರಿಗೂ ಇಲ್ಲ.  ಒಂದೋ ಅದರಿಂದ ಅದು ತನ್ನ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿ ಸುವ ಉದ್ದೇಶ ಇಟ್ಟುಕೊಂಡಿರಬಹುದು ಅಥವಾ  ರಾಷ್ಟ್ರಕ್ಕೆ ಪಾಶ್ಚಾತ್ಯ ಸಿನೆಮಾದಿಂದಾಗುವ ವೈಚಾರಿಕ ಹಾನಿಗೆ ಅದೇ ಮಾಧ್ಯಮಗಳ ಮೂಲಕ ಉತ್ತರಿಸ ಬೇಕೆನ್ನುವ ಮಹದಾಕಾಂಕ್ಷೆಯೂ  ಅದಕ್ಕಿರಬಹುದು ಅಥವಾ ಇಸ್ಲಾಮಿನ ಸಂದೇಶ ಪ್ರಚಾರಕ್ಕೆ ಮಾಧ್ಯಮವನ್ನಾಗಿ ಸಿನೆಮಾವನ್ನು ಸೌದಿ ಬಳಸ ಬಹುದು ಆಥವಾ ಡೆನ್ಮಾರ್ಕಿನ  ಗಿಲ್ಡ್ ವೈಡರ್ಸನ ಸಿನೆಮಾದಂತವುಗಳ ದಾಳಿಯನ್ನು  ಪ್ರತಿರೋಧಿಸು ವುದಕ್ಕೆ ಸಿನೆಮಾ ರಂಗವನ್ನು ಉಪಯೋಗಿಸಲಿಕ್ಕೂ ಇರಬಹುದು.
ಅಂತೂ ಸೌದಿಯಲ್ಲಿ ಥಿಯೇಟರ್ ನಿರ್ಮಾಣ ಕಾರ್ಯ ಮುಗಿದಿದೆ. ಇನ್ನು ಚಿತ್ರ ಪ್ರದರ್ಶನವೂ ನಡೆಯಬಹುದು. ಚಿತ್ರ ನಿರ್ಮಾಣವೂ  ಆಗಬಹುದು.
ಹೌದು ಸಿನೆಮಾವನ್ನು ಹಲವು ರೀತಿಯಲ್ಲಿ ಹಲವಾರು ಮಂದಿ ಉಪಯೋಗಿಸಿದ್ದಾರೆ. ಅದನ್ನು ಮಾಧ್ಯಮವನ್ನಾಗಿಯೂ ಬಳಸಿದವರಿದ್ದಾರೆ.  ಈಗಂತೂ ವ್ಯಾಪಾರಿ ಮನೋಸ್ಥಿತಿಗೆ ಹೆಚ್ಚು ಹೊಂದುವ ವಿಷಯ ಸಿನೆಮಾ ಆಗಿದೆ. ಪರದೆ ಯಲ್ಲಿ ಅಶ್ಲೀಲ ತೋರಿಸಿ ರೊಕ್ಕ ಎಣಿಸಿಕೊಳ್ಳುವ  ಮಂದಿಯೇ ಇಂದು ಹೆಚ್ಚಿದ್ದಾರೆ ನಿಜ. ಹಾಗಂತ ಅದು ಸಿನೆಮಾ ಎಂಬ ಮಾಧ್ಯಮದ ತಪ್ಪಲ್ಲ. ಅದನ್ನು ತಪ್ಪಾಗಿ ಬಳಸಿದವರ ತಪ್ಪು ಅದು.  ಆದ್ದರಿಂದ ನಿಷಿದ್ಧ ಎಂದ ಸೌದಿಯೇ ಈಗ ಬುದ್ಧಿಕಲಿತಿದೆ ಅಥವಾ ಅದಕ್ಕೆ ವಿವೇಕ ಮೂಡಿದೆ. ಮನುಷ್ಯನಿಂದ ಕೆಡುಕಿನ ಕೆಲಸ ಮಾಡಲು  ಸಾಧ್ಯವಿರುವಂತೆ ಒಳಿತಿನ ಕೆಲಸ ಮಾಡಲು ಕೂಡಾ ಅವನಿಂದಲೇ ಸಾಧ್ಯ. ಇಲ್ಲಿ ಮನುಷ್ಯ ವಿಷಯ ವಸ್ತುಗಳಿಗೆ ಮಾಧ್ಯಮ  ಹೇಗಾಗುವನೋ ಅದೇ ರೀತಿ  ಸಿನೆಮಾ ಕೂಡ ಬಳಸುವವನ ಕೈಯಲ್ಲಿರುವ ತುತ್ತೂರಿ ಆಗಿದೆ. ಅರ್ಥಾತ್ ಮಾಧ್ಯಮ ಆಗಿದೆ.  ತುತ್ತೂರಿಯನ್ನು ವಿಕಾರ ವಾಗಿಯೂ ನುಡಿಸಬಹುದು. ಸುಶ್ರಾವ್ಯವಾಗಿಯೂ ನುಡಿಸಬಹುದು. ಸಿನೆಮಾವನ್ನು ಕೂಡಾ ಒಳ್ಳೆಯ ದ್ದಕ್ಕಾಗಿಯೂ  ಕೆಟ್ಟದ್ದಕ್ಕಾಗಿಯೂ ಬಳಸಿಕೊಳ್ಳ ಬಹುದು. ಅದಕ್ಕೆಲ್ಲ ಮನುಷ್ಯನ ತಲೆಯಲ್ಲಿರುವ ಮೆದುಳು ಕಾರಣಕರ್ತ ಆಗಿರುತ್ತದೆಯೇ ಹೊರತು ಸಿನೆಮಾ  ಅಲ್ಲ.
ಸೌದಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸುಧಾರಣಾ ಪ್ರಕ್ರಿಯೆಯ ಭಾಗವಾಗಿ ಸಿನೆಮಾ ಪ್ರದರ್ಶನ ಆರಂಭಗೊಳ್ಳುತ್ತಿದೆ. ಸೌದಿಯ ಸಿನೆಮಾ  ಕ್ಷೇತ್ರವನ್ನು ಪ್ರವೇಶಿಸುವುದರ ಹಿಂದೆ ಪಾಶ್ಚಾತ್ಯ ರಾಷ್ಟ್ರಗಳು ದೊಡ್ಡ ಕನಸ್ಸನ್ನು ಇಟ್ಟು ಕೊಂಡಿರ ಬಹುದು. ಸೌದಿಯಲ್ಲಿ ತಲೆತಲಾಂತರದಿಂದ  ನೆಲೆಸಿದ ಅರಬ್ ಸಾಂಸ್ಕøತಿಕ ಸಂಪ್ರದಾಯವನ್ನು ಹಾಳುಗೆಡವಲು ಇರುವ ಒಂದು ಸಾಧ್ಯತೆಯಾ ಗಿಯೂ ತಮ್ಮ ಕನಸ್ಸಿಟ್ಟುಕೊಂಡಿರಬಹುದು  ಅಥವಾ ಕನಸ್ಸು ಕಟ್ಟಿಕೊಂಡಿರಬಹದು. ಹಾಗಂತ, ಇದರಲ್ಲೆಲ್ಲ ಸಿನೆಮಾದ ತಪ್ಪೇನಿದೆ?