ಸ್ಟೀಫನ್ ಹಾಕಿಂಗ್‍ಗೆ ನೋಬೆಲ್ ಪ್ರಶಸ್ತಿ ಏಕೆ ದೊರೆತಿಲ್ಲ?

0
2017

ನವದೆಹಲಿ: ಅಲ್ಬರ್ಟ್ ಐನ್ ಸ್ಟೈನ್ ಬಳಿಕ ಬೌತಶಾಸ್ತ್ರ ಕಂಡ ಪ್ರತಿಭಾವಂತ ವಿಜ್ಞಾನಿ ಎಂದು ವಿಜ್ಞಾನ ಲೋಕವು ಗೌರವಿಸುವ ಸ್ಟೀಫನ್ ಹಾಕಿಂಗ್‍ಗೆ ನೋಬೆಲ್ ಪ್ರಶಸ್ತಿ ದೊರೆತಿಲ್ಲವೇಕೆ? 20ನೇ ಶತಮಾನದಲ್ಲಿ ವಿಜ್ಞಾನ ಜಗತ್ತಿಗೆ ಮೆರುಗು ನೀಡಿದ ಅನೇಕ ಸಿದ್ಧಾಂತಗಳು, ಜನಸಾಮಾನ್ಯರಿಗೂ ಅರಿವಿಗೆ ಬರುವಂತೆ ವಿಶ್ವದ ರಹಸ್ಯವನ್ನು ಅನಾವರಣಗೊಳಿಸಿದ ಸಂಶೋಧಕ , ವಿಶ್ವದ ಕುರಿತ ಚಿಂತನೆಗಳ ಚಿತ್ರಣ ಬದಲಾಯಿಸಿದ ಕೃತಿಗಳ ಕರ್ತೃ.. ಹೀಗಿದ್ದೂ ವಿಜ್ಞಾನ ಜಗತ್ತಿನ ಪರಮೋನ್ನತ ಪುರಸ್ಕಾರವಾದ ನೋಬೆಲ್ ಪಾರಿತೋಷಕ ಅವರಿಂದ ಅಂತರ ಕಾಯ್ದುಕೊಂಡದ್ದೇಕೆ?

1960ರಲ್ಲಿ ಕ್ಯಾಂಬ್ರಿಡ್ಜ್ ನಲ್ಲಿ ಸಂಶೋಧನೆ ನಡೆಸುತ್ತಿರುವಾಗ ಬ್ರಿಟಿಷ್ ವಿಜ್ಞಾನಿ ರೋಜರ್ ಪನ್‍ರೋಸ್‍ರ ಜೊತೆ ಸೇರಿ ವಿಶ್ವದ ಉದಯದ ಕುರಿತು ಬಹಳ ಗಂಭೀರವಾದ ಕೆಲವು ವಿಷಯಗಳನ್ನು ಮಂಡಿಸಿದ್ದರು. 2014ರಲ್ಲಿ ವಿಜ್ಞಾನ ಜಗತ್ತು ವಿಸ್ಮಯಗೊಳ್ಳುವಂತಹ ಹೊಸ ಸಿದ್ಧಾಂತವನ್ನು ಸಂಶೋಧಿಸಿದ್ದರು. ಇಂಧನ ಮುಗಿದು ಜ್ವಲನಕ್ರಿಯೆ ಸ್ಥಗಿತಗೊಂಡ ಮಹಾನಕ್ಷತ್ರಗಳು ಗುರುತ್ವಾಕರ್ಷಣೆಗೆ ವಿಧೇಯವಾಗಿ ಸಣ್ಣ ಗಾತ್ರವಾಗಿ ಅತ್ಯಂತ ಸಾಂದ್ರತೆಯುಳ್ಳ ವಸ್ತುವಾಗಿ ಹೊಳೆಯುತ್ತದೆ. ಪ್ರಕಾಶಕಣಗಳು ಕೂಡಾ ಇದರಿಂದ ಹೊರಬರದು ಎಂಬುದು ಆ ವರೆಗಿನ ನಿಲುವಾಗಿತ್ತು. ಕಪ್ಪು ರಂದ್ರಗಳಿಂದ ಹೊರ ಬರುವ ವಿಕಿರಣಗಳು ನಾಶವಾದವು ಎಂದು ತಿಳಿಸುವ ವಿವರಗಳು ಸರಿಯಲ್ಲ ಎಂಬ ಸಂಶೋಧನೆಯನ್ನು ಅವರು ಪ್ರತಿಪಾದಿಸಿದರು.

ಈ ಸಂಶೋಧನೆಗೆ ಭಾರೀ ಬೆಂಬಲ ದೊರೆತರೂ ರೇಡಿಯೇಶನ್ ಎಂಬ ವಾಸ್ತವ ಬೌತಶಾಸ್ತ್ರದ ಮಾನದಂಡ ಉಪಯೋಗಿಸಿ ಅವರಿಗೆ ನಿರೂಪಿಸಲಾಗಲಿಲ್ಲ. ಒಂದು ವೇಳೆ ಅವರು ಅದನ್ನು ನಿರೂಪಿಸಿದ್ದರೆ ಅವರನ್ನು ನೋಬೆಲ್ ಪುರಸ್ಕಾರ ಅರಸಿಕೊಂಡು ಬರುತ್ತಿತ್ತೋ ಏನೋ? ಸಂಶೋಧನೆಗಳಿಗೆ ಸಂಬಂಧಿಸಿ ವೈಜ್ಞಾನಿಕ ಸಿದ್ದಾಂತಗಳನ್ನು ಸ್ಪಷ್ಟವಾಗಿ ನಿರೂಪಿಸಲು ಸಾದ್ಯವಾಗಬೇಕು. ಆರಂಭದಲ್ಲಿ ನಿಲುವುಗಳ ಬಗ್ಗೆ ಹೇಳಿ ಅದನ್ನು ನಿರೂಪಿಸಲು ಅಗತ್ಯವಾದ ವಸ್ತುಗಳನ್ನು ವರ್ಷಗಳ ಬಳಿಕ ರೂಪಿಸಬೇಕು. ಗುರುತ್ವಾಕರ್ಷಣಾ ಬಲಗಳ ಕುರಿತು 1920ರಲ್ಲಿ ಐನ್ ಸ್ಟೈನ್ ಪರಿಚಯಿಸಿದ ಕೆಲವು ವಿಚಾರಗಳನ್ನು 2016ರಲ್ಲಿ ನಿರೂಪಿಸಲಾಯಿತು. ಇನ್ನು ಮುಂದಕ್ಕೆ ಅವರ ಸಂಶೋದನೆಗಳು ನಿರೂಪಿಸಲು ಸಾದ್ಯವಾದರೂ ನೋಬೆಲ್ ಪುರಸ್ಕಾರ ದೊರಕದು. ಯಾಕೆಂದರೆ ಮರಣಾ ನಂತರ ನೋಬೆಲ್ ಪುರಸ್ಕಾರ ನೀಡುತ್ತಿಲ್ಲ,