ಸ್ಮ್ರತಿ ಇರಾನಿ, ಕರಂದ್ಲಾಜೆ: ದಯವಿಟ್ಟು ಮಾತಾಡಿ..

0
1381

ನ್ಯೂಸ್ ಡೆಸ್ಕ್

ಮಹಿಳೆಯರಿಗೆ 33% ಮೀಸಲಾತಿ ಒದಗಿಸುವುದರಿಂದ ಶಾಸನ ಸಭೆಗಳಲ್ಲಿ ಮಹಿಳೆಯರು ತುಂಬಬಹುದೇ ಹೊರತು ಮಹಿಳಾ ಸಬಲೀಕರಣಕ್ಕೆ ಅದು ನೆರವಾಗುವ ಸಾಧ್ಯತೆ ತೀರಾ ಕಡಿಮೆ ಅನ್ನುವುದನ್ನು ಕಾಶ್ಮೀರದ ಕಥುವಾ ಮತ್ತು ಉತ್ತರ ಪ್ರದೇಶದ ಉನ್ನಾವ ಘಟನೆಗಳು ಸ್ಪಷ್ಟಪಡಿಸಿವೆ.
ಎರಡೂ ಘಟನೆಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವುದು ಹೆಣ್ಣು. ಮಾತ್ರವಲ್ಲ, ಆ ದೌರ್ಜನ್ಯ ಎಸಗಿದವರ ಪರವಹಿಸಿ ಮಾತಾಡಿದವರು ಬಿಜೆಪಿಯ ಪುರುಷ ಜನಪ್ರತಿನಿಧಿಗಳು. ವಿಷಾದ ಏನೆಂದರೆ, ಈ ಪುರುಷರನ್ನು ಖಂಡಿಸುವುದಕ್ಕೆ ಬಿಜೆಪಿಯ ಘಟಾನುಘಟಿ ಮಹಿಳೆಯರಿಗೆ ಈವರೆಗೂ ಸಾಧ್ಯವಾಗಿಲ್ಲ. ಸ್ಮ್ರತಿ ಇರಾನಿ, ಕರಂದ್ಲಾಜೆ, ಮನೇಕಾ ಗಾಂಧಿ, ನಿರ್ಮಲಾ ಮುಂತಾದ ಪ್ರಬಲ ಸಂಸದರು, ಸ್ಥಾನ ಮಾನಗಳಲ್ಲಿ ತಮಗಿಂತ ತೀರಾ ಕೆಳಗಿರುವ ಶಾಸಕರ ವಿರುದ್ಧ ಮಾತೆತ್ತುವುದಕ್ಕೆ ಹಿಂಜರಿಯುತ್ತಾರೆಂದರೆ ಏನರ್ಥ? ಇದಕ್ಕೆ ಪಕ್ಷನಿಷ್ಠೆ ಕಾರಣವೇ? ಅತ್ಯಾಚಾರದ ಪರ ನಿಂತವರನ್ನು ಖಂಡಿಸುವುದಕ್ಕೆ ಪಕ್ಷನಿಷ್ಠೆ ಅಡ್ಡ ಬರುತ್ತದೆಂದಾದರೆ, 33% ಮೀಸಲಾತಿಯಿಂದ ಮಹಿಳೆಯರಿಗೆ ಏನು ಪ್ರಯೋಜನವಾಗಬಹುದು? ಪಕ್ಷದ ಹಿತದ್ರಷ್ಟಿಗೆ ಇಷ್ಟು ಪ್ರಾಮುಖ್ಯತೆ ಇದೆಯೆಂದಾದರೆ, ಮೀಸಲಾತಿ ಯಾತಕ್ಕೆ? ಮಹಿಳೆಯರು ಆರಿಸಿ ಬಂದರೂ ಅವರ ನಿಷ್ಠೆ ಪಕ್ಷಕ್ಕಲ್ಲವೇ?

ಈ ನಿಷ್ಠೆ ಪ್ರಜಾತಂತ್ರಕ್ಕೆ ಅವಮಾನಕರ.

ಏ ಕೆ ಕುಕ್ಕಿಲ