ಕೊರೋನಾ: ಕ್ವಾರಂಟೈನ್ ಸೌಲಭ್ಯಕ್ಕಾಗಿ ಹೋಟೆಲನ್ನೇ ನೀಡಿದ ಅಶ್ರಫ್ ಅಲಿ ಬಷೀರ್: ಜಿಲ್ಲಾಧಿಕಾರಿ ಪ್ರಶಂಸೆ

0
55094
  1. ಸನ್ಮಾರ್ಗ ವಾರ್ತೆ

ಹುಬ್ಬಳ್ಳಿ: ಇಲ್ಲಿನ ಕೊಪ್ಪೀಕರ್ ರಸ್ತೆಯಲ್ಲಿರುವ ಮೆಟ್ರೊಪೊಲಿಸ್ ಹೋಟೇಲನ್ನು ಕ್ವಾರಂಟೈನ್ ಗೆ ಉಚಿತವಾಗಿ ನೀಡುವುದಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶ್ರಫ್ ಅಲಿ ಬಷೀರ್ ಅಹ್ಮದ್ ಘೋಷಿಸಿದ್ದಾರೆ. 46 ಕೊಠಡಿಗಳು, ಊಟ ಮತ್ತು ಉಪಹಾರವನ್ನು ಸ್ವಯಂ ಪ್ರೇರಣೆಯಿಂದ ಒದಗಿಸುವುದಾಗಿ ಅವರು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಪತ್ರ ಹಸ್ತಾಂತರಿಸಿದ್ದಾರೆ.

ಹೋಟೆಲಿನ ಕೊಠಡಿಗಳನ್ನು ಪರಿಶೀಲಿಸಲು ಅಧಿಕಾರಿಗಳನ್ನು ಕಳುಹಿಸಬಹುದು. ಮೆಟ್ರೊಪೊಲಿಸ್ ಸಮೂಹವು ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮುತ್ತಲಿನ 70 ಹೋಟೆಲ್ ಕೊಠಡಿಗಳನ್ನು ಅಲ್ಲಿನ ಸರ್ಕಾರಕ್ಕೆ ಕ್ವಾರಂಟೈನ್ ಸೌಲಭ್ಯಕ್ಕಾಗಿ ನೀದಿದೆ.ಸಂಸ್ಥೆಯ ಸಿ ಎಸ್ ಆರ್ ಚಟುವಟಿಕೆಗಳಡಿ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಶ್ರಫ್ ಅಲಿ ತಿಳಿಸಿದರು.

ಹೋಟೆಲ್ ಉದ್ಯಮಿಗಳು ಸ್ವಯಂ ಪ್ರೇರಣೆಯಿಂದ ಕ್ವಾರಂಟೈನ್ ಸೌಲಭ್ಯಕ್ಕೆ ಕೊಠಡಿಗಳನ್ನು ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.