ಗಾಝದ ಶಾಂತಿಗೆ ಜರ್ಮನಿ ಶ್ರಮ

0
649

ಜರುಸಲೇಂ: ಗಾಝ ಪಟ್ಟಿಯನ್ನು ಶಾಂತವಾಗಿರಿಸಲು ಜರ್ಮನಿ ಯತ್ನಸುತ್ತಿದೆ ಎಂದು ಜರ್ಮನ್ ಚಾನ್ಸಲರ್ ಆಂಜೆಲೋ ಮರ್ಕೆಲ್ ಹೇ ಳಿದರು. ಜರ್ಮನಿ, ಇಸ್ರೇಲ್-ಗಾಝ ಪಟ್ಟಿ ವಿಷಯದಲ್ಲಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲಿದೆ ಎಂದು ಜರ್ಮನಿಯ ಹೈಫ ವಿಶ್ವವಿದ್ಯಾ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡುತ್ತಾ ಮಾರ್ಕೆಲ್ ಹೇಳಿದರು.

ಮಾರ್ಕೆಲ್ ವಿಶ್ವವಿದ್ಯಾನಿಲಯ ನೀಡಿದ ಗೌರವ ಡಾಕ್ಟರೇಟನ್ನು ಸ್ವೀಕರಿಸಲು ಬಂದಿದ್ದರು. ಗಾಝ ಪಟ್ಟಿಯ ಸುತ್ತಲೂ ದೊಡ್ಡ ರೀತಿಯಲ್ಲಿ ಸೇನೆಯನ್ನು ನಿಯೋಜಿಸಲಾಗುವುದು ಎಂದು ಇಸ್ರೇಲ್ ಘೋಷಿಸಿದ ನಂತರ ಜರ್ಮನಿ ಈ ರೀತಿ ಪ್ರತಿಕ್ರಿಯೆ ನೀಡಿದೆ. ಎರಡು ದಿವಸ ಅಧಿಕೃತ ಸಂದರ್ಶನಕ್ಕಾಗಿ ಬುಧವಾರ ಮರ್ಕಲ್ ಜರುಸಲೇಂಗೆ ಬಂದಿದ್ದಾರೆ. ಈ ಹಿಂದೆಯೂ ಮರ್ಕೆಲ್ ಫೆಲಸ್ತೀನ್ ವಿರುದ್ಧ ಇಸ್ರೇಲಿನ ನಿಲುವುಗಳಿಗೆ ವಿರೋಧ ವ್ಯಕ್ತಪಡಿಸಿದ್ದರು.