ವಾರಾಣಾಸಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಮುಸ್ಲಿಮ್ ಮುಖಂಡರು; ಉತ್ತರಪ್ರದೇಶ ಕಾಂಗ್ರೆಸ್ ನಲ್ಲಿ ಬಿರುಕು!

0
334

ಕಳೆದ ಕೆಲವು ವರ್ಷಗಳಿಂದ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಮತ ಬ್ಯಾಂಕ್ ಅನ್ನು ಬಲಪಡಿಸಲು ರಾಜಕೀಯ ಪಕ್ಷಗಳು ಎಲ್ಲ ತಂತ್ರಗಳನ್ನು ಪ್ರಯತ್ನಿಸುತ್ತಿವೆ. ಆದರೆ, ಬಿಜೆಪಿಯ ಅತಿ ದೊಡ್ಡ ರಾಜಕೀಯ ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಾಸ್ತವವಾಗಿ ಪೂರ್ವ ಉತ್ತರಪ್ರದೇಶದ ಮುಸ್ಲಿಮರ, ವಿಶೇಷವಾಗಿ ವಾರಣಾಸಿಯವರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ತೋರುತ್ತದೆ.

ವಾರಣಾಸಿಯ ವಿವಿಧ ನಾಯಕರು ಮತ್ತು ಕಾರ್ಯಕರ್ತರು ಸೇರಿ, ಅಲ್ಪಸಂಖ್ಯಾತರನ್ನು ಅದರಲ್ಲೂ ವಿಶೇಷವಾಗಿ ಮುಸ್ಲಿಮರನ್ನು ನಿರ್ಲಕ್ಷಿಸಲಾಗುತ್ತಿದೆಯೆಂದು ಜಿಲ್ಲಾ ಮತ್ತು ರಾಜ್ಯ ಕಾಂಗ್ರೆಸ್ ಸಮಿತಿಗಳನ್ನು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಮತಗಳಿಗಾಗಿ ಮಾತ್ರ ಬಳಸಿದೆ ಮತ್ತು ಪಕ್ಷದೊಳಗಾಗಲಿ ಅಥವಾ ಮಾಧ್ಯಮದ ಮುಂದೆಯಾಗಲಿ ಅವರಿಗೆ ಸಾಕಷ್ಟು ಗಮನ ನೀಡಲಿಲ್ಲವೆಂದು ಆರೋಪಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೌನ್ಸಿಲರ್ ಅನ್ವರ್ ಅಹ್ಮದ್ ಪಪ್ಪು ಅವರು ಕಾಂಗ್ರೆಸ್ ಪಕ್ಷವು ವಾರಾಣಸಿ ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಿ ಚುನಾವಣಾ ಸಮಯದಲ್ಲಿ ಮಾತ್ರ ಬಳಸುತ್ತಿದೆ ಎಂದು ಆರೋಪಿಸಿ ಎರಡು ವಾರಗಳ ಹಿಂದೆ ಫೇಸ್ಬುಕ್ ಪೋಸ್ಟ್ ಹಾಕಿದಾಗ ಈ ವಿವಾದವು ಸ್ಫೋಟಿಸಿತು . ಪೋಸ್ಟ್ ಗಂಟೆಗಳ ಒಳಗೆ ವೈರಲ್ ಆಯಿತು ಇದಕ್ಕೆ ಮಾಡಿದ ಪ್ರತಿಕ್ರಿಯೆಗಳಲ್ಲಿ ಭಿನ್ನಮತ ಕಾಣಬಹುದು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ್ ಕೇಸರಿ ಪ್ರತಿಕ್ರಿಯಿಸುತ್ತಾ ಇಂತಹ ಪೋಸ್ಟ್ ಗಳು ಅಹ್ಮದ್ ರನ್ನು ಸಾಮಾಜಿಕ ಮಾಧ್ಯಮದ ರಾಜಕಾರಣಿಯಾಗಿ ಮಾತ್ರ ತಯಾರು ಮಾಡಬಹುದು ಎಂದು ಟೀಕಿಸಿದ್ದರು.

ಅಹ್ಮದರಲ್ಲಿ ಬೆಳೆದ ಅಸಮಾಧಾನವು ಹೆಚ್ಚಾಯಿತು ಮತ್ತು ನವರಾತ್ರಿ ಹಬ್ಬದ ನಂತರ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆಂದು ಬೆದರಿಕೆ ಹಾಕಿದರು. ಇದೇ ಸಂದರ್ಭದಲ್ಲಿ ಕಾರ್ಪೋರೇಟರ್ಗಳನ್ನೊಳಗೊಂಡು ಪಕ್ಷದ ಹಲವು ಮುಸ್ಲಿಂ ಮುಖಂಡರು ಕಾಂಗ್ರೆಸ್ ಪಕ್ಷದವರು ಮುಸ್ಲಿಮರನ್ನು ನಿರ್ಲಕ್ಷಿಸಿರುವುದನ್ನು ಬಹಿರಂಗಪಡಿಸಿದರು.

ರಂಜಾನ್ ಅಲಿ, ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಮತ್ತು ವಾರಣಾಸಿಯ ಪುರಸಭಾ ನಿಗಮದ ಕಾರ್ಯ ನಿರ್ವಾಹಕ ಸದಸ್ಯರು ಟೂ ಸರ್ಕಲ್. ನೆಟ್ ನೊಂದಿಗೆ ಮಾತನಾಡಿದರು. “ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು … ಮುಸ್ಲಿಮರು ನಗರದಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ. ಯುಪಿ ವಿಧಾನಸಭೆ ಚುನಾವಣೆಯಲ್ಲಿ 2017 ರಲ್ಲಿ ಮುಸ್ಲಿಮರು ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಮತ ಚಲಾಯಿಸಿದರು ಮತ್ತು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ . ಆದರೆ ಅದರ ನಂತರ, ನಾವು ಪಕ್ಷದ ಸಭೆಗಳು ಮತ್ತು ಸಾರ್ವಜನಿಕ ಕಾರ್ಯಗಳಿಗಾಗಿ ಆಮಂತ್ರಣಗಳನ್ನು ಪಡೆಯಲಿಲ್ಲ. ಪಕ್ಷದ ಯಾವುದೇ ಸಭೆ ಅಥವಾ ಸಾರ್ವಜನಿಕ ಕಾರ್ಯವನ್ನು ಆಯೋಜಿಸಿದಾಗ ಕಾಂಗ್ರೆಸ್ ಪಕ್ಷದ ಹಿರಿಯ ಮುಸ್ಲಿಂ ನಾಯಕರನ್ನು ವೇದಿಕೆಗೆ ಆಹ್ವಾನಿಸಲಿಲ್ಲ . “

ಪಕ್ಷದ ಮತಗಟ್ಟೆಯಲ್ಲಿ ಕೆಲಸ ಮಾಡುವವರ ಪ್ರಕಾರ, ಅಜಯ್ ರೈ 2014 ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿರುವ ಹಿರಿಯ ಕಾಂಗ್ರೆಸ್ ನಾಯಕ, ಅವರು ಭದ್ರತಾ ಠೇವಣಿ ಕಳೆದುಕೊಂಡರೂ, ಅವರು ಪಡೆದ ಕೆಲವು ಮತಗಳು ಮುಸ್ಲಿಂ ಸಮುದಾಯದಿಂದ ಬಂದಿರುವಂತದ್ದು . “ಮುಸ್ಲಿಂ ಸಮುದಾಯದ ಹೆಚ್ಚಿನ ಮತಗಳು ಅರವಿಂದ್ ಕೇಜ್ರಿವಾಲ್ ಗೆ ಹೋಯಿತು ನಂತರ ಅವರು ಪರ್ಯಾಯವಾಗಿ ಹೊರಹೊಮ್ಮಿದರು, ಆದರೆ ಕಾಂಗ್ರೆಸ್ ಯಾವುದೇ ಮತ ಪಡೆದಿದ್ದರು ಅದು ಕೇವಲ ಮುಸ್ಲಿಂ ಕಾರ್ಮಿಕರು ಮತ್ತು ಮತದಾರರಿಂದ ” ಎಂದು ಅಲಿ ಹೇಳಿದರು.

ಸ್ಥಳೀಯ ಮಟ್ಟದಲ್ಲಿ, ಕಾಂಗ್ರೆಸ್ ಪಕ್ಷವು 21 ಕಾರ್ಪೊರೇಟರ್ಗಳನ್ನು ಹೊಂದಿದೆ ಮತ್ತು 14 ಮಂದಿ ಮುಸ್ಲಿಮರು. ಕಳೆದ ವರ್ಷ ನಡೆದ ಪುರಸಭೆ ಚುನಾವಣೆಯಲ್ಲಿ, ಹಲವು ಮುಸ್ಲಿಂ ಅಭ್ಯರ್ಥಿಗಳನ್ನು ಎರಡನೆಯ ಅವಧಿಗೆ ಚುನಾಯಿತರಾದರು . ಆದರೆ ಪುರಸಭೆಯಲ್ಲಿರುವ ಕಾಂಗ್ರೆಸ್ ಕಾರ್ಪೊರೇಟರ್ಗಳ ಮುಖಂಡರಾಗಿ ಯಾವುದೇ ಮುಸ್ಲಿಮರನ್ನು ಆಯ್ಕೆ ಮಾಡಬಾರದೆಂದು ಪಕ್ಷವು ನಿರ್ಧರಿಸಿತು.

ಕೆಲವು ತಿಂಗಳುಗಳ ಹಿಂದೆ ಸಭೆಯೊಂದರಲ್ಲಿ ಪ್ರತಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ಮುಂದೆ ನಾವು ಈ ವಿಚಾರಗಳನ್ನು ಮಂಡಿಸಿದ್ದೇವೆ, ಆದರೆ ನಮ್ಮ ಸಮಸ್ಯೆಯನ್ನು ಆಲಿಸಲು ನಾವು ಇನ್ನೂ ಹೋರಾಟ ಮಾಡುತ್ತಿದ್ದೇವೆ.

”ನಾವು ಪಕ್ಷದಲ್ಲಿ ವಿಭಜನೆಯನ್ನು ಬಯಸುತ್ತೇವೆಂದಲ್ಲ , ಆದರೆ ಪಕ್ಷವು ವಾರಣಾಸಿಯ ರಾಯ್, ಮಿಶ್ರಾ ಮತ್ತು ಶರ್ಮರ ಹೊರತಾಗಿಯೂ ಉಗಮವಾಗಬೇಕು. ಮುಸ್ಲಿಂ ಸಮುದಾಯವನ್ನು ಕೇವಲ ಮತ ಬ್ಯಾಂಕಾಗಿ ನೋಡಬಾರದು. ನಾವು ಕಾಂಗ್ರೆಸ್ ಪಕ್ಷದೊಳಗೆ ಒಂದು ಸಮಾನಾಂತರ ಸಮಿತಿಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ.ಕಾಂಗ್ರೆಸ್ ಪರವಾಗಿರುವ ನಮ್ಮ ಭಕ್ತಿಯನ್ನು ಪ್ರಕಟಪಡಿಸುತ್ತಲೇ ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತೇವೆ”. ಎಂದು ಅಲಿ ಹೇಳಿದರು.

ಬಿಜೆಪಿ-ಅಲ್ಲದ ರಾಜಕೀಯ ಗುಂಪುಗಳಿಗೆ ಮುಸ್ಲಿಂ ಮತಗಳನ್ನು ತಮ್ಮ ಪರವಾಗಿ ಒಗ್ಗೂಡಿಸುವುದು ಯಾವಾಗಲೂ ಕಠಿಣ ಕಾರ್ಯವೆಂಬುದನ್ನು ಗಮನಿಸಬೇಕು. ಕಳೆದ ವರ್ಷ ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿಯವರ ಪ್ರಮುಖ ರಸ್ತೆ ಪ್ರದರ್ಶನದಲ್ಲಿ, ಎರಡೂ ಪಕ್ಷಗಳು ಮುಸ್ಲಿಂ ಪ್ರಾಬಲ್ಯದ ವಾರಾಣಸಿ ಪ್ರದೇಶವನ್ನು ಮಾರ್ಗವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದವು.

ಲಖನೌ ಮೂಲದ ಹಿರಿಯ ಮುಸ್ಲಿಮರಲ್ಲದ ಕಾಂಗ್ರೆಸ್ ಮುಖಂಡರೊಬ್ಬರು ಟೂ ಸರ್ಕಲ್.ನೆಟ್ ಗೆ ಪ್ರತಿಕ್ರಿಯಿಸುತ್ತಾ, “ಕಳೆದ ಕೆಲವು ವರ್ಷಗಳಿಂದ ಮುಸ್ಲಿಮರು ಸಮಾಜವಾದಿ ಪಕ್ಷಕ್ಕೆ ಮತ ಚಲಾಯಿಸುತ್ತಿದ್ದಾರೆ ಮತ್ತು ಇದರ ಕಾರಣ ಕಾಂಗ್ರೆಸ್ ಪಕ್ಷದಲ್ಲಿಯೇ ಇದೆ .ಪಕ್ಷವು ಬ್ರಾಹ್ಮಣರು, ಠಾಕೂರರು , ಭೂಮಿಹಾರ್ಗಳು ಮತ್ತು ಇತರ ವ್ಯಾಪಾರಿ ವರ್ಗಗಳಿಂದ ನಡೆಸಲ್ಪಟ್ಟ ಒಂದು ಪಕ್ಷವಾಗಿ ಮಾರ್ಪಟ್ಟಿದೆ. ಅದರ ಮತದಾರರನ್ನು ಅದರ ಮುಖಂಡರೆಂದು ನೋಡಲಾಗುವುದಿಲ್ಲ ಮತ್ತು ಹಾಗಾಗಿ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿದೆ. ” ಎನ್ನುತ್ತಾರೆ.

ಅನ್ವರ್ ಅಹ್ಮದ್ ಪಪ್ಪು, ಫೇಸ್ಬುಕ್ ನಲ್ಲಿ ಅವರ ಅಸಮ್ಮತಿಯನ್ನು ಪೋಸ್ಟ್ ಮಾಡಿದ ನಂತರ, ಹಿರಿಯ ಕಾಂಗ್ರೆಸ್ ನಾಯಕರ ಒತ್ತಡದ ಮೇರೆಗೆ ಪೋಸ್ಟನ್ನು ಅಳಿಸಲಾಗಿದೆ. ಈ ಕುರಿತು ಅಹ್ಮದ್ ಅವರನ್ನು ಸಂಪರ್ಕಿಸಿದಾಗ ಮಾತನಾಡಲು ನಿರಾಕರಿಸಿದ ಅವರು,”ಕಾಂಗ್ರೆಸ್ ಪಕ್ಷದೊಂದಿಗೆ ನನಗೆ ಯಾವುದೇ ಪಾತ್ರವಿಲ್ಲ. ನಾನು ನನ್ನ ವ್ಯವಹಾರದ ಮೇಲ್ವಿಚಾರಣೆ ನೋಡುತ್ತಿದ್ದೇನೆ ಮತ್ತು ಕನಿಷ್ಠ ಮಟ್ಟದಲ್ಲಿ ಪಕ್ಷದೊಂದಿಗೆ ಭಾಗಿಯಾಗುತ್ತಿದ್ದೇನೆ. ಎಂದು ಹೇಳಿದರಾದರೂ,
” ಪಕ್ಷವು ನಮ್ಮತ್ತ ಒಳವು ಹರಿಸಿದರೆ, ನಾನು ಮತ್ತೆ ಸೇರುವ ಬಗ್ಗೆ ಯೋಚಿಸುತ್ತೇನೆ.” ಎಂದು ಅಹ್ಮದ್ ಹೇಳಿದ್ದಾರೆ.

ಪ್ರಜಾನಾಥ್ ಶರ್ಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ , ಸಾಮಾಜಿಕ ಮಾಧ್ಯಮದ ಪೋಸ್ಟ್ ಗಳಿಗೆ ಕಾಂಗ್ರೆಸ್ ಗಮನ ಕೊಡುವುದಿಲ್ಲ ಎಂದು ಹೇಳುವ ಎಲ್ಲ ವಿಚಾರಗಳನ್ನು ನಿರಾಕರಿಸಿದರು.ಅವರು ಹೇಳಿದರು, “ಅಂತಹ ವಿಷಯಗಳನ್ನು ಹೇಳುವವರು ಪ್ರಭಾವಕ್ಕೊಳಗಾಗಿದ್ದಾರೆ.” ಎಂದು ಆರೋಪಿಸಿದರಾದರೆ “ಯಾರಿಂದ ಪ್ರಭಾವಿತರಾಗಿದ್ದಾರೆ ” ಎಂಬ ಪ್ರಶ್ನೆಗೆ ಶರ್ಮಾ ಉತ್ತರಿಸಲಿಲ್ಲ. “ನಾವು ಮುಸ್ಲಿಂ ಮುಖಂಡರಿಗೆ ಅವರ ಅರ್ಹತೆ ಪ್ರಕಾರ ಪ್ರಾಮುಖ್ಯತೆ ನೀಡುತ್ತೇವೆ” ಎಂದು ಶರ್ಮಾ ಹೇಳಿದರು.

ಅಫ್ಝಲ್ ಅಹ್ಮದ್ ಅನ್ಸಾರಿ, ಕಾಂಗ್ರೆಸ್ ನ ಮತೊಬ್ಬ ಪ್ರಮುಖ ಮುಸ್ಲಿಂ ಮುಖಂಡ ಮತ್ತು ಎರಡು ಅವಧಿಗೆ ಕಾರ್ಪೊರೇಟರಾಗಿ ಆಯ್ಕೆಯಾದವರು, ಟೂ ಸರ್ಕಲ್.ನೆಟ್ ನೊಂದಿಗೆ ಮಾತನಾಡುತ್ತಾ, “ಆತಂಕವಿದೆ ನಿಜ, ಮತ್ತು ಬಹುಶಃ ಅನೇಕ ನಾಯಕರು ಮಾತನಾಡುವುದಿಲ್ಲ. ನಮ್ಮಲ್ಲಿ ಅಧಿಕಾರ ಹಿಡಿದಿರುವ ರಾಜಕೀಯೇತರ ಜನರಿದ್ದಾರೆ. ಮತಗಟ್ಟೆ ರಚನೆಯನ್ನು ಸಹ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದ ವ್ಯಕ್ತಿಗಳು ನಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆ?.”

“ನೀವು ಫಲಿತಾಂಶಗಳ ಬಗ್ಗೆ ಮಾತನಾಡುವಾಗ, ಅದು ನರೇಂದ್ರ ಮೋದಿಯ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಬಗ್ಗೆ ಮಾತನಾಡುತ್ತಿದ್ದೇವೆಂದು ನಾವು ಅರ್ಥಮಾಡಿಕೊಳ್ಳಬೇಕು – ಪರಿಸ್ಥಿತಿಯು ಇದೆ ರೀತಿ ಮುಂದುವರಿದರೆ, 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ಬಳಲಬಹುದು.”ಎಂದು ಅನ್ಸಾರಿ ಹೇಳಿದರು.

ವರದಿ: ಸಿದ್ಧಾಂತ ಮೋಹನ್
ಕನ್ನಡಕ್ಕೆ: ಆಯಿಷಾತುಲ್ ಅಫೀಫಾ
ಟು ಸರ್ಕಲ್.ನೆಟ್