ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತಕ್ಕೆ ಬೆಂಬಲ ನೀಡುವುದೆಂದರೆ ರಾಷ್ಟ್ರದ ವಿರುದ್ಧ ಯುದ್ಧ ಮಾಡುವುದೆಂದರ್ಥವಲ್ಲ- ಕೇರಳ ಹೈಕೋರ್ಟ್

0
587

ಐಸಿಸ್ ನಂಟಿನ ಆರೋಪದಲ್ಲಿ ಬಂಧಿಸಲ್ಪಟ್ಟು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಅಡಿಯಲ್ಲಿ ಮಹಿಳೆಗೆ ನೀಡಲಾದ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಮಾರ್ಪಡಿಸಿದೆಯಲ್ಲದೆ, ಸಿದ್ಧಾಂತವನ್ನು ಬೆಂಬಲಿಸುವುದು ರಾಷ್ಟ್ರದ ವಿರುದ್ಧ ಯುದ್ಧ ಮಾಡುವುದಕ್ಕೆ ಸಮವಲ್ಲ ಎಂದು ತೀರ್ಪು ನೀಡಿದೆ.

ನ್ಯಾಯಮೂರ್ತಿ ಎ ಎಮ್ ಶಫೀಕ್ ಮತ್ತು ನ್ಯಾಯಮೂರ್ತಿ ಪಿ. ಸೋಮರಾಜನ್ ಅವರ ವಿಭಾಗೀಯ ಪೀಠವು ಸೆಕ್ಷನ್ 125 (ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಯಾವುದೇ ಏಷ್ಯ ಖಂಡದ ರಾಷ್ಟ್ರಗಳ ವಿರುದ್ಧ ಯುದ್ಧ ಮಾಡುವುದು) ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆ 39 ರಿಂದ 40 ರ ಅಡಿಯಲ್ಲಿ ಆರೋಪಿಯಾಗಿರುವ ಬಿಹಾರ ಮೂಲದ ಯಾಸ್ಮೀನ್ ಳನ್ನು ಆ ಕಾಯ್ದೆಯಿಂದ ಬಿಡುಗಡೆ ಮಾಡಿದೆ.

ಯಾಸ್ಮೀನ್ ಳನ್ನು ತನ್ನ ಮಗುವಿನೊಂದಿಗೆ ಅಫ್ಘಾನಿಸ್ತಾನಕ್ಕೆ ಪ್ರಯಾಣಿಸಲು ಯತ್ನಿಸುತ್ತಿದ್ದರು ಎಂಬ ಆರೋಪದಲ್ಲಿ 2016 ರ ಆಗಸ್ಟ್ ನಲ್ಲಿ ಬಂಧಿಸಲಾಗಿತ್ತು.

ಅವರು ರಾಷ್ಟ್ರದ ವಿರುದ್ಧ ಸಂಚು ನಡೆಸಿದ್ದರೆಂಬುದು ಸಾಬೀತಾಗಿಲ್ಲವಾದರೂ ಐಪಿಸಿ ಸೆಕ್ಷನ್ 120 ಬಿ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಭಯೋತ್ಪಾದಕ ಸಂಘಟನೆಯ ಸದಸ್ಯತ್ವಕ್ಕಾಗಿ ಯುಎಪಿ ಕಾಯ್ದೆ 38 ರ ಅಡಿಯಲ್ಲಿ ಅವರು ಅಪರಾಧಿಯಾಗುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

ಸೆಕ್ಷನ್ 120 ಬಿ ಅಡಿಯಲ್ಲಿ ಅಪರಾಧಕ್ಕಾಗಿ ಅವರಿಗೆ ಒಂದು ವರ್ಷ ಮತ್ತು UAP ಕಾಯಿದೆಯ ವಿಭಾಗ 38 ರ ಅಡಿಯಲ್ಲಿ ಅಪರಾಧಕ್ಕಾಗಿ ಮೂರು ವರ್ಷಗಳ ಸೆರೆವಾಸ್ ಶಿಕ್ಷೆಯನ್ನು ನ್ಯಾಯಾಲಯವು ವಿಧಿಸಿದೆ.