ಜರ್ಮನಿಯಿಂದ ಸೌದಿಗೆ ಶಸ್ತ್ರಾಸ್ತ ಪೂರೈಕೆ ಸ್ಥಗಿತ

0
712

ಬರ್ಲಿನ್: ಜಮಾಲ್ ಕಸೋಗಿ ಕೊಲೆಯ ನಂತರ ವಿವಾದಗಳು ತಾರಕಕ್ಕೇರಿದ್ದು ಸೌದಿ ಅರೇಬಿಯದ ವಿರುದ್ಧ ಯುರೋಪಿಯನ್ ದೇಶಗಳು ಕ್ರಮಕ್ಕೆ ಮುಂದಾಗಿವೆ. ಸೌದಿಗೆ ಆಯುಧ ರಫ್ತು ಮಾಡುವುದಿಲ್ಲ ಎಂದು ಕಳೆದ ವಾರ ಜರ್ಮನಿ ತಿಳಿಸಿದೆ. ಮಾತ್ರವಲ್ಲ, ಇತರ ಯುರೋಪಿಯನ್ ಯೂನಿಯನ್ ಸದಸ್ಯ ದೇಶಗಳು ಸೌದಿಗೆ ಆಯುಧಗಳನ್ನು ರಫ್ತು ಮಾಡುವುದನ್ನು ನಿಲ್ಲಿಸಬೇಕೆಂದು ಕೂಡ ಜರ್ಮನಿ ಆಗ್ರಹಿಸಿದೆ.

ರಾಯಿಟರ್ಸ್ ಸುದ್ದಿ ಸಂಸ್ಥೆ ಜರ್ಮನಿಯ ಹಣಕಾಸು ಸಚಿವ ಪೀಟರ್ ಅಲ್ಟಮೆಯರ್ ರನ್ನು ಉದ್ಧರಿಸಿ ವರದಿ ಮಾಡಿದೆ. ಕಳೆದ ದಿವಸ ಜರ್ಮನ್ ಚಾನ್ಸಲರ್ ಅಂಗಲಾ ಮರ್ಕಲ್ ಕಸೋಗಿ ಸಾವಿನಲ್ಲಿ ಅನಿಶ್ಚಿತತೆ ಇರುವುದರಿಂದ ಸೌದಿ ಅರೇಬಿಯಕ್ಕೆ ಆಯುಧ ರಫ್ತು ನಿಲ್ಲಿಸುವುದಾಗಿ ತಿಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸೌದಿ ಅರೇಬಿಯ ನೀಡಿದ ವಿವರಣೆ ತೃಪ್ತಿಕರವಲ್ಲ ಎಂದು ಜರ್ಮನಿಯ ನಿಲುವು ಆಗಿದೆ. ಆದ್ದರಿಂದ ಸೌದಿಅರೇಬಿಯದ ಆಯುಧ ರಫ್ತು ಮುಂದುವರಿಸಲು ಇಚ್ಛಿಸುವುದಿಲ್ಲ . ಏನು ನಡೆದಿದೆ ಎಂದು ತಮಗೆ ತಿಳಿಸಬೇಕೆಂದು ಮರ್ಕಲ್‍ಗೆ ಸಂಬಂಧಿಸಿದ ಮೂಲಗಳು ತಿಳಿಸಿವೆ.

ಈ ವರ್ಷ 462 ಮಿಲಿಯನ್ ಡಾಲರ್ ಮೌಲ್ಯದ ಆಯುಧಗಳನ್ನು ಸೌದಿ ಅರೇಬಿಯಕ್ಕೆ ರಫ್ತು ಮಾಡಲು ಜರ್ಮನಿ ತೀರ್ಮಾನಿಸಿತ್ತು. ಅಲ್ಜೀರಿಯನ್ನು ಹೊರತುಪಡಿಸಿದರೇ, ಸೌದಿ ಅರೇಬಿಯ ಜರ್ಮನಿಯ ಆಯುಧಗಳು ಅತ್ಯಂತ ಹೆಚ್ಚು ಆಮದುಕೊಳ್ಳುತ್ತಿದೆ.