ಮುಸ್ಲಿಮ್ ಮಹಿಳೆಗೆ ಮನೆ ನಿರಾಕರಣೆ

0
673

ಜರ್ಮನಿ: ಮುಸ್ಲಿಮರು ವಾಸ್ತವ್ಯಕ್ಕೆ ಬಂದರೆ ನೆರೆಯವರಿಗೆ ಕಷ್ಟವಾಗುತ್ತದೆ ಎಂದು ಹೇಳಿ ಬಾಡಿಗೆ ಗೊತ್ತುಪಡಿಸಲು ಸಹಾಯ ಮಾಡುವ ಸೈಟ್ ಏರ್‍ಬಿಎನ್‍ಬಿ ಆ ಮುಸ್ಲಿಮ್ ಮಹಿಳೆಯನ್ನು ಅವರ ಪಟ್ಟಿಯಿಂದ ಹೊರಗಿಟ್ಟಿದೆ. ಇಪ್ಪತೈದು ವರ್ಷದ ನೂರ್‍ಜಹಾನ್ ಸಾಲಿಕ್‍ರೊಂದಿಗೆ ಬಿಎನ್‍ಬಿ ಸೈಟ್ ತಾರತಮ್ಯದಿಂದ ನಡೆದುಕೊಂಡಿದೆ.

ನೂರ್‍ಜಹಾನ್ ಜರ್ಮನಿಯ ಹ್ಯಾಂಬರ್ಗ್‍ನಲ್ಲಿ ಬಾಡಿಗೆ ಮನೆ ಹುಡುಕಾಟ ನಡೆಸಿದ್ದರು. ಅವರು ಇಷ್ಟಪಡುವ ರೀತಿಯ ಮನೆ ಸಿಕ್ಕಿದಾಗ ಮನೆಯೊಡತಿಯನ್ನು ಸಂಪರ್ಕಿಸಿದ್ದರು. ಅವರ ಬೇಡಿಕೆಯನ್ನು ನಿರಾಕರಿಸಲಾಗಿತ್ತು.

ನಂತರ ಅದಕ್ಕೆ ಕಾರಣ ಕೇಳಿದಾಗ, ನೀವು ಮುಸ್ಲಿಮ್ ಆಗಿ ಮಫ್ತಾ ಧರಿಸುವ ಕಾರಣದಿಂದ ನೆರೆಯವರಿಗೆ ಕಷ್ಟಾಗುತ್ತಿದೆ, ಹೀಗಾಗಿ ನಿಮಗೆ ಮನೆಯನ್ನು ನಿರಾಕರಿಸಲಾಗಿದೆ ಎಂದು ಮನೆ ಮಾಲಕಿ ತಿಳಿಸಿದ್ದಾರೆ.