1200 ಕೋಟಿ ರೂ. ಸಾಲ ವಂಚನೆ ಪ್ರಕರಣ: ಆರೋಪಿಗಳು ದೇಶ ತೊರೆದರೇ?

0
153

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಬ್ಯಾಂಕಿನಿಂದ 1200 ಕೋಟಿ ರೂಪಾಯಿ ಸಾಲ ಪಡೆದ ದಿಲ್ಲಿಯ ಕಂಪೆನಿಯೊಂದರ ನಿರ್ದೇಶಕರ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದ್ದು, ಆರೋಪಿಗಳು ಬ್ಯಾಂಕಿಗೆ ಪಂಗನಾಮ ಹಾಕಿ ದೇಶ ತೊರೆದಿದ್ದಾರೆ ಎನ್ನಲಾಗುತ್ತಿದೆ. ಸಿಬಿಐ ಇದೀಗ ಕಂಪೆನಿಯ ನಿರ್ದೇಶಕರನ್ನು ಹುಡುಕುತ್ತಿದೆ.

ಭ್ರಷ್ಟಾಚಾರ, ವಂಚನೆ ಕೇಸುಗಳನ್ನು ಅಮಿರ ಪ್ಯೂವನ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ನಿರ್ದೇಶಕರ ವಿರುದ್ಧ ದಾಖಲಿಸಿ ತನಿಖೆಗಿಳಿದಿದೆ. ನ್ಯಾಶನಲ್ ಕಂಪೆನಿ ಲೊ ಟ್ರಿಬ್ಯೂನಲ್ ಕಂಪೆನಿ ನಿರ್ದೇಶಕರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಕರಣ್ ಎ. ಚನ್ನ, ಪತ್ನಿ ಅನಿತಾ ಡಿಯಾಂಗ್, ಅಪರ್ಣ ಪುರಿ, ರಾಜೇಶ್ ಅರೋರ, ಜವಾಹರ್ ಕಪೂರ್ ಆರೋಪಿಗಳಾಗಿದ್ದು ತಲೆ ತಪ್ಪಿಸಿಕೊಂಡಿದ್ದಾರೆ.

ಕೆನರಾ ಬ್ಯಾಂಕ್ ನೇತೃತ್ವದ ಹನ್ನೆರಡು ಬ್ಯಾಂಕುಗಳಿಂದ ಸಾಲ ತೆಗೆದುಕೊಂಡಿದ್ದು, ಕೆನರಾ ಬ್ಯಾಂಕ್ 197 ಕೋಟಿ ರೂ, ಬ್ಯಾಂಕ್ ಆಫ್ ಬರೋಡ 180 ಕೋ.ರೂ, ಪಂಜಾಬ್ ನ್ಯಾಶನಲ್ ಬ್ಯಾಂಕ್ 260 ಕೋಟಿ.ರೂ. ಬ್ಯಾಂಕ್ ಆಫ್ ಇಂಡಿಯಾ 147 ಕೋಟಿ. ರೂ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 112 ಕೋ. ರೂ, ಯೆಸ್ ಬ್ಯಾಂಕ್ 99 ಕೋಟಿ ರೂ, ಐಸಿಐಸಿಐ 75 ಕೋಟಿ ರೂ, ಇಂಡಿಯನ್ ಓರ್ವಸಿಸ್ ಬ್ಯಾಂಕ್ 64 ಕೋಟಿ ರೂ, ಐಡಿಬಿಐ 47 ಕೋಟಿ ರೂ
, ವಿಜಯಾ ಬ್ಯಾಂಕ್ 22 ಕೋಟಿ ರೂ. ಆರೋಪಿಗಳಿಗಗೆ ಸಾಲ ನೀಡಿತ್ತು. ಅಮಿರ ಬಾಸುಮತಿ ಅಕ್ಕಿ ಮತ್ತಿತರ ಆಹಾರ ವಸ್ತುಗಳನ್ನು ರಫ್ತು ಮಾಡುವ ಕಂಪೆನಿಯಾಗಿದೆ.