ನಾವು ಗುಂಡೇಟಿನಿಂದ ತಪ್ಪಿಸಿಕೊಂಡಿದ್ದೇವೆ ಆದರೆ ನ್ಯಾಯದ ಕಾಯುವಿಕೆ ನಮ್ಮನು ಸಾಯಿಸಿದೆ: 1987ರ ಹಶಿಂಪುರ ಹತ್ಯಾಕಾಂಡ ಪ್ರಕರಣ

0
1048

1987 ರ ಹಶಿಂಪುರ ಹತ್ಯಾಕಾಂಡದ ಬಲಿಪಶುಗಳ ಅನೇಕ ಸಂಬಂಧಿಕರು ಅವರ ತಂದೆ ಮತ್ತು ಸಹೋದರರನ್ನು ಪ್ರಾಂತೀಯ ಶಸ್ತ್ರಸಜ್ಜಿತ ಪಡೆಯು (ಪಿಎಸಿ) ವ್ಯಾನ್ನಲ್ಲಿ ಕರೆದುಕೊಂಡು ಹೋಗಿ ಗುಂಡು ಹಾರಿಸಿದಾಗ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿರಲಿಲ್ಲ .

ಆದರೆ, ಅವರು ಮತ್ತು ಬದುಕುಳಿದವರು ಇನ್ನೂ ಕೆಲವರು ಕಳೆದ 31 ವರ್ಷಗಳಿಂದ ಗಾಜಿಯಬಾದ್ ತದನಂತರ ದೆಹಲಿ ಕೋರ್ಟ್ ವಿಚಾರಣೆಗಾಗಿ ಖರ್ಚು ಮಾಡಿರುವುದನ್ನು ಮತ್ತು ಈ ಪ್ರಕ್ರಿಯೆಯಲ್ಲಿ ಶಿಕ್ಷಣ, ಉದ್ಯೋಗ ಮತ್ತು ಆಪ್ತರನ್ನು ಕಳೆದುಕೊಡಿರುವುದು ಅಚ್ಚಳಿಯದೇ ಉಳಿದುಕೊಂಡಿದೆ.

ಅಂದು ಬದುಕುಳಿದ ನಾಲ್ವರಾದ ಮುಜಿಬುರ್ರಹಮಾನ್, ಬಾಬುದ್ದೀನ್, ಮುಹಮ್ಮದ್ ಉಸ್ಮಾನ್ ಮತ್ತು ಜುಲ್ಫಿಕರ್ ನಾಸಿರ್ ಮತ್ತು ಕೊಲ್ಲಲ್ಪಟ್ಟವರ ಹಲವರ ಸಂಬಂಧಿಕರನ್ನು ಸಂದರ್ಶಿಸಿದ ಇಂಡಿಯನ್ ಎಕ್ಸ್ಪ್ರೆಸ್ ಗೆ ವಿದ್ಯುತ್ ಮಗ್ಗ, ಸ್ಥಳೀಯ ಅಂಗಡಿಗಳು ಹಾಗೂ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕಡಿಮೆ ವೇತನ ಪಡೆಯುತ್ತಿದ್ದ ಕಾರಣ ನ್ಯಾಯಾಲಯಕ್ಕೆ ಹಾಜರಾಗಲು ದೇಣಿಗೆಗಳನ್ನು ಅವಲಂಬಿಸಬೇಕಾಯಿತೆಂಬ ಕಟುಸತ್ಯದ ಅರಿವಾಯ್ತು.

38 ಮುಸ್ಲಿಮರನ್ನು ಗುಂಡಿಕ್ಕಿ ಕೊಂದ 16 ಪಿಎಸಿ ಸಿಬ್ಬಂದಿಗಳನ್ನು 2015 ರ ವಿಚಾರಣಾಧೀನ ನ್ಯಾಯಾಲಯವು ಖುಲಾಸೆಗೊಳಿಸಿತ್ತಾದರೆ ಸುಪ್ರೀಂ ಕೋರ್ಟ್ ಈ ತೀರ್ಪನ್ನು ತಳ್ಳಿಹಾಕಿತಲ್ಲದೇ ಜೀವಾವಧಿ ಶಿಕ್ಷೆಯ ತೀರ್ಪನ್ನು ಪ್ರಕಟಿಸಿತು.

ಹತ್ಯಾಕಾಂಡದಲ್ಲಿ ಬದುಕುಳಿದು ವಿದ್ಯುತ್ ಮಗ್ಗಗಳಲ್ಲಿ ಕೆಲಸ ಮಾಡುತ್ತಿದ್ದ ಬಬುದ್ದೀನ್, ವಿಚಾರಣೆಗೆ ಹಾಜರಾಗಲು ದೆಹಲಿಯ ಪ್ರಯಾಣ ವೆಚ್ಚ ಭರಿಸುವಷ್ಟು ಹಣವನ್ನು ಹೊಂದಿರಲಿಲ್ಲ, ಇದಲ್ಲದೇ “ಊಟಕ್ಕೂ ಸಹ ಇತರರನ್ನು ಅವಲಂಬಿಸಿದ್ದೆನೆಂದು” ಎಂದು ಹೇಳುತ್ತಾರೆ.

ಹತ್ಯಾಕಾಂಡದಲ್ಲಿ ಬದುಕುಳಿದಿರುವ ಮೊಹಮ್ಮದ್ ಉಸ್ಮಾನ್ ರ ಕಾಲಿಗೆ ಗುಂಡೇಟಿನ ಗಾಯಗಳಾಗಿದ್ದ ಕಾರಣ ನ್ಯಾಯಾಲಯದ ಪ್ರಯಾಣವು ತ್ರಾಸದಾಯಕ ವಾಗಿರುತಿತ್ತು. “ನಾವು ದೆಹಲಿ ಮತ್ತು ಗಾಜಿಯಾಬಾದ್ ಗೆ ಬಸ್ಸು, ರೈಲು ಮತ್ತು ಖಾಸಗಿ ಕಾರುಗಳನ್ನು ಮಾಡಿಕೊಂಡು ಹಲವು ಬಾರಿ ಹೋಗಿದ್ದೇವೆ. ನಾವು ಸಾಮೂಹಿಕ ಹತ್ಯಾಕಾಂಡದಿಂದ ಬದುಕುಳಿದಿದ್ದರೂ ಸಹ ನಮಗದು ಸುಲಭವಾಗಿರಲಿಲ್ಲ” ಎಂದು ಉಸ್ಮಾನ್ ಹೇಳಿದ್ದಾರೆ.

ಉಸ್ಮಾನ್ ಕುಟುಂಬವು ಸಾಲಕ್ಕೆ ಈಡಾದ ಕಾರಣ ಹಾಶಿಮ್ ಪುರದ ಅವರ ಕುಟುಂಬದ ಮನೆಯನ್ನು ಮಾರಬೇಕಾಯಿತು “ನಾನು ಹಣ್ಣಿನ ಅಂಗಡಿಯನ್ನು ನಡೆಸಿದೆ ಆದರೆ ಅದು ಕೆಲಸ ಮಾಡಲಿಲ್ಲ. ನಾನು ಸ್ವಲ್ಪ ಸಮಯ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ ಮತ್ತು ನಂತರ ನನ್ನ ಗಾಯದ ಕಾರಣದಿಂದ ಅದನ್ನು ಬಿಡಬೇಕಾಯಿತು “ಎಂದು ಅವರು ಹೇಳಿದರು.

ಸಾಮೂಹಿಕ ಹತ್ಯಾಕಾಂಡದ ಬಳಿಕ ಅನೇಕ ಕುಟುಂಬಗಳಿಗೆ ತುತ್ತು ಅನ್ನ ನೀಡುವವರಿರಲಿಲ್ಲ. ಪತಿ ಮೊಹಮ್ಮದ್ ಇಕ್ಬಾಲ್ ರನ್ನು ಪೊಲೀಸರು ಕರೆದುಕೊಂಡು ಹೋದಾಗ ಮಡಿಲಲ್ಲಿ ಎರಡು ದಿನದ ಕೂಸು ಇದ್ದುದ್ದನ್ನು ಜೈಬುನ್ನೀಸಾ ನೆನಪಿಸಿಕೊಳ್ಳುತ್ತಾರೆ. ”ನಾನು ಮತ್ತು ನನ್ನ ಮೂವರು ಹೆಣ್ಣುಮಕ್ಕಳು ಇಲ್ಲಿಯವೆರೆಗೆ ನ್ಯಾಯಕ್ಕಾಗಿ ಹೋರಾಡಿದ್ದೇವೆ. ನನ್ನ ಮಕ್ಕಳಿಗೆ ತಮ್ಮ ತಂದೆಯ ಬಗ್ಗೆ ಇರುವ ನೆನಪು ಹತ್ಯಾಕಾಂಡ,”ಎಂದು ಅವರು ಹೇಳಿದರು. “ನಾನು ಐದನೇ ತರಗತಿಯ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದೇನೆ. ನಾವೆಲ್ಲರೂ ಆಧಾರಕ್ಕಾಗಿ ಮನೆ ಕೆಲಸದಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಜೈಬುನ್ನೀಸಾರ ಮಗಳಾದ 31 ವರ್ಷಡಾ ನಾಝಿಯಾ ಹೇಳಿದರು.

ಖಮರುದ್ದೀನ್ ಅವರ ತಂದೆ, ಜಮಾಲುದ್ದೀನ್ (81), ತನ್ನ ಮಗನನ್ನು ಹುಡುಕುವ ಸಲುವಾಗಿ ಹಲವಾರು ಆಸ್ಪತ್ರೆಗಳು, ಜೈಲುಗಳು ಮತ್ತು ಪೊಲೀಸ್ ಠಾಣೆಗಳನ್ನು ಹೇಗೆ ಅಲೆದರು ಎಂಬುದನ್ನು ಸ್ಮರಿಸುತ್ತಾರೆ “ಇಂದಿಗೂ, ಅವನು ಹತ್ಯೆಯಾಗಿದ್ದಾನೆ ಎಂಬುವುದು ನೋವುಂಟು ಮಾಡುತ್ತದೆ. ಇತರರ ದೇಹಗಳನ್ನು ಗುರುತಿಸುವಲ್ಲಿ ಅಧಿಕಾರಿಗಳಿಗೆ ಸಹಾಯ ಮಾಡಿದ ನನಗೆ ಮೊರಾದ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ನನ್ನ ಮಗನ ಮೃತದೇಹವನ್ನು ತೋರಿಸಿದಾಗ ಅದಾಗಲೇ ಉಬ್ಬಿಕೊಂಡಿತ್ತು ಅದು ನನ್ನ ಮಗನ ಮೃತದೇಹ ಎಂಬುದನ್ನು ನನಗೆ ಗುರುತಿಸಲಾಗಿಲ್ಲ. ಎಂದು ಜಮಾಲುದ್ದೀನ್ ಹೇಳುತ್ತಾರೆ.

ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುವ ಮೊಹಮ್ಮದ್ ಆಸಿಫ್, ಅವರ ತಂದೆ ಶಮೀಮ್ ಮೃತಪಟ್ಟಾಗ ಕೇವಲ ಎರಡು ವರ್ಷದವರಾಗಿದ್ದರು. “ನನ್ನ ಜೀವನದ ಹೆಚ್ಚಿನ ದಿನಗಳನ್ನು 6 ಗಂಟೆಗೆ ಎದ್ದು ಕೆಲಸಕ್ಕಾಗಿ ಸ್ಥಳೀಯ ಕಾರ್ಮಿಕ ಚೌಕವನ್ನು ಅಳೆಯುದಕ್ಕೆ ವ್ಯಯಿಸಿದ್ದೇನೆ. ನಾವು ಏಳು ಜನ ಸಹೋದರರು ಶಿಕ್ಷಣವಿಲ್ಲದೆ ಬೆಳೆದೆವು ಆ ದಿನ ಪಿಎಸಿ ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟಿದ್ದರೆ, ನಾನು ಉತ್ತಮ ಜೀವನವನ್ನು ಹೊಂದಿರುತ್ತಿದ್ದೆ … ಮತ್ತು ತಂದೆಯನ್ನು ಸಹ” ಎಂದು ಆಸಿಫ್ ಹೇಳಿದರು.

ತನ್ನ ತಂದೆಯಿಂದ ದೂರವಾದಾಗ ಜಮಿಲ್ ಅಹ್ಮದ್ ರಿಗೆ 16 ವರ್ಷ. ಆ ಸಮಯದಲ್ಲಿ ಅವನ ತಂದೆ ಹೊಂದಿದ್ದ ಚಹಾದ ಅಂಗಡಿಯನ್ನೇ ಅವನು ಈಗಲೂ ನಡೆಸುತ್ತಿದ್ದಾನೆ. “ನಾನು ಈಗಲೂ ನನ್ನ ತಂದೆಯ ಚಹಾ ಅಂಗಡಿಯಲ್ಲಿ ಕೆಲಸ ಮಾಡುವೆನೆಂದು ನಾನು ಎಂದಿಗೂ ಊಹಿಸಲಿಲ್ಲ…ನಾನು ಪಡೆದಿರುವ ಹೆಚ್ಚಿನದನ್ನು ತಂದೆಗಾಗಿ ಹೋರಾಡಲು ಖರ್ಚು ಮಾಡಿದ್ದೇನೆ ಹೀಗಿರುವಾಗ ಒಬ್ಬರ ಜೀವನದಲ್ಲಿ ಬದಲಾವಣೆ ಬರಲು ಹೇಗೆ ಸಾಧ್ಯ? ಪಿಎಸಿಯವರು ನಮ್ಮ ಮನೆ ಬಾಗಿಲು ಬಡಿಯುತ್ತಿದ್ದಾಗ, ನನ್ನ ತಂದೆ ನನ್ನಲ್ಲಿ ಅಡಗಿಕೊಳ್ಳಲು ಹೇಳಿದರು. ಅದಕ್ಕಾಗಿ ನಾನು ಅವರಿಗೆ ಅಭಾರಿಯಾಗಿದ್ದೇನೆ ” ಎಂದು ಅಹ್ಮದ್ ಹೇಳಿದರು.

ಬದುಕುಳಿದವರ ಮತ್ತು ಬಲಿಪಶುಗಳ ಪ್ರಕಾರ, ಯುಪಿ ಸರ್ಕಾರ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳನ್ನು ನೀಡಿದೆ,ಆದರೆ ಅದು “ಸಾಕಾಗಲಿಲ್ಲ” ಪರಿಹಾರವನ್ನು ಕೆಲವು ಕುಟುಂಬಗಳು ತಮ್ಮ ಸಾಲಗಳನ್ನು ತೀರಿಸಲು, ಮತ್ತು ಇತರರು ಮತ್ತೊಂದು ಜಿಲ್ಲೆಯಲ್ಲಿ ಭೂಮಿ ಖರೀದಿಸುವಲ್ಲಿ ಬಳಸಿದರು.

” ನಾವು ಹೆಚ್ಚಿನ ಹಣವನ್ನು ಕೆಲವು ತಿಂಗಳುಗಳಲ್ಲೆ ಖರ್ಚು ಮಾಡಿದ್ದೇವೆ. ಸರಕಾರವು ಕುಟುಂಬ ಸದಸ್ಯರಿಗೂ ಹಣವನ್ನು ವಿತರಿಸಿದೆ ಮತ್ತು 15 ವರ್ಷ ವಯಸ್ಸಿನವರಿಗೂ 25,000 ರೂ ನೀಡಿದೆ. ಆ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಬಹಳ ಕಷ್ಟಕರವಾಗಿತ್ತು “ಎಂದು ಖಮರುದ್ದೀನ್ ಕಿರಿಯ ಸಹೋದರಿ ಶೆನಾಜ್ ಹೇಳಿದರು.

“ಹತ್ಯಾಕಾಂಡವು ನಮ್ಮ ಪ್ರದೇಶದ ಚಿತ್ರಣವನ್ನು ಕಳಂಕಗೊಳಿಸಿದೆ ಮತ್ತು ಕೆಲಸದ ಲಭ್ಯತೆ ಇನ್ನೂ ವಿರಳವಾಗಿದೆ. ಕೆಲವು ಭೋಜನ ಗೃಹಗಾಕು ಈ ಪ್ರದೇಶದಲ್ಲಿ ಬಂದವು ಆದರೆ ಆಡಳಿತ ವಿಭಾಗವು ಕಡೆಗಣಿಸಿವೆ. ಜನರು ಇಲ್ಲಿ ವ್ಯಾಪಾರ ಸ್ಥಾಪಿಸಲು ಹಿಂದುಮುಂದು ನೋಡುತ್ತಾರೆ, “ಎಂದು ಹತ್ಯಾಕಾಂಡದಲ್ಲಿ ಬದುಕುಳಿದಿರುವ ನಾಸಿರ್ ಹೇಳಿದರು .

ಮುಜಿಬು ರೆಹಮಾನ್ ಸತ್ತಂತೆ ನಟಿಸುವ ಮೂಲಕ ಹತ್ಯಾಕಾಂಡದಿಂದ ಬದುಕುಳಿದರು ಮತ್ತು ನಂತರ ಮೀರತ್ ನ ಲಿಂಕ್ ರೋಡ್ ಪೊಲೀಸ್ ಠಾಣೆಯಲ್ಲಿ ಹತ್ಯಾಕಾಂಡದ ತನಿಖೆ ನಡೆಸುವಂತೆ ಪ್ರಕರಣವನ್ನು ದಾಖಲಿಸಿದರು, .”ಕಾಲುವೆ ಬಳಿ ಹುಲ್ಲುಗಾವಲಿನಲ್ಲಿ ಕಾಯುತ್ತಿದ್ದುದು ನನಗೆ ನೆನಪಿದೆ. ನಾನು ಪ್ರಕರಣವನ್ನು ನೋಂದಾಯಿಸಿದೆ ಆದರೆ ಯಾವುದೇ ಪ್ರಯೋಜನವಿಲ್ಲವೆಂದು ಆ ಸಮಯದಲ್ಲಿ ಭಾವಿಸಿದ್ದೆ .ನಾನು ಗುಂಡೇಟಿನಿಂದ ತಪ್ಪಿಸಿಕೊಂಡಿದ್ದೆ ಆದರೆ ನ್ಯಾಯದ ಕಾಯುವಿಕೆ ನಮ್ಮನ್ನು ಸಾಯಿಸಿದೆ “ಎಂದು ಅವರು ಹೇಳಿದರು.

ಆರೋಪಿಗಳನ್ನು ಗುರುತಿಸುವಲ್ಲಿ ವಿಫಲತೆಯ ಕಾರಣ ನೀಡಿ ಕೆಳ ನ್ಯಾಯಾಲಯವು 16 ಜನ ಪಿಎಸಿ ಗಳನ್ನು ಬಿಡುಗಡೆ ಗೊಳಿಸಿದಾಗ ”ಆಘತಕ್ಕೊಳಗಾಗಿದ್ದೆವು” ಎಂದು ಹಲವರು ಹೇಳಿದ್ದಾರೆ “ಅವರು ನಮ್ಮ ಮೇಲೆ ಗುಂಡು ಹಾರಿಸುತ್ತಿದ್ದಾಗ, ಗೊಂದಲವಾಲಾಗಿತ್ತು . ಕತ್ತಲೆಯಲ್ಲಿ ಯಾರೆಂದು ಗುರುತಿಸುವುದು ಕಷ್ಟಕರವಾಗಿತ್ತು. ನಮ್ಮನ್ನು ಹೊಡೆದ ಪುರುಷರು ಆ ದಿನ ಮುಕ್ತರಾದರು “ಎಂದು ನಾಸಿರ್ ಹೇಳಿದರು.

ಆದರೆ ಉಚ್ಛ ನ್ಯಾಯಾಲಯದ ತೀರ್ಪಿನ ನಂತರ, ಸಂತ್ರಸ್ತರ ಕುಟುಂಬಗಳು ಮರಣದಂಡನೆಗೆ ಕರೆ ನೀಡಿದ್ದಾರೆ. “ಕೊನೆಗೂ ಉಚ್ಛನ್ಯಾಯಾಲಯ ಅವರನ್ನು ಗುರುತಿಸಿದೆ. ನಮ್ಮ ಸುತ್ತಲಿರುವ ಪ್ರತಿಯೊಬ್ಬರೂ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಅವರಿಗೆ ಮರಣ ದಂಡನೆ ವಿಧಿಸಬೇಕೆಂದು ನಾವು ಬಯಸುತ್ತೇವೆ” ಎಂದು ಬಾಬುದ್ದೀನ್ ಹೇಳಿದರು.

ವರದಿ: ಆನಂದ ಮೋಹನ್ ಜೆ
ಕನ್ನಡಕ್ಕೆ: ಆಯಿಶತುಲ್ ಅಫೀಫಾ
ಕೃಪೆ: ದಿ ಇಂಡಿಯನ್ ಎಕ್ಸ್ಪ್ರೆಸ್