ಒಂದು ಕ್ರೂರ ಆಯ್ಕೆ ; ಇಸ್ರೇಲ್ ಫೆಲೆಸ್ತೀನ್ ಶಾಲೆಗಳನ್ನು ಏಕೆ ಗುರಿಪಡಿಸುತ್ತಿದೆ?

0
1547

ಆಂಗ್ಲ ಬರಹ: ಡಾ| ರಂಜಿ ಬಾರೂದ್
ಕನ್ನಡಕ್ಕೆ: ಆಯಿಶತುಲ್ ಅಫೀಫ
ಮೂಲ: ಕೌ೦ಟರ್ ಕರೆಂಟ್ಸ್ ಡಾಟ್ ಆರ್ಗ್

ಅಕ್ಟೋಬರ್ 15 ರಂದು ಪಶ್ಚಿಮ ದಂಡೆಯಲ್ಲಿನ ನಬುಲುಸ್ ದಕ್ಷಿಣಕ್ಕಿರುವ ಶಾಲೆಯ ಮೇಲೆ ನಡೆದ ಇಸ್ರೇಲಿ ಸೈನ್ಯದ ದಾಳಿಯಲ್ಲಿ ಫೆಲೆಸ್ತೀನಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅಧಿಕಾರಿಗಳು  ಗಾಯಗೊಂಡರು. ಈ ಹಿನ್ನೆಲೆಯಲ್ಲಿ ಅಲ್-ಸವಿಯಾ ಅಲ್-ಲೆಬಬಾನ್ ಮಿಕ್ಸೆಡ್ ಸ್ಕೂಲ್ ನ ಈ ವಿದ್ಯಾರ್ಥಿಗಳು ಶಾಲೆಯನ್ನು ” ಭಯೋತ್ಪಾದನೆ ಮತ್ತು ಗಲಭೆಯ ಸ್ಥಳ” ಎಂಬ ಆಧಾರದಲ್ಲಿ ಮುಚ್ಚುವ ಆದೇಶ ಹೊರಡಿಸಬೇಕೆಂದು  ಇಸ್ರೇಲಿ ಸೈನ್ಯಕ್ಕೆ  ಸವಾಲು ಹಾಕಿದರು.

   ವಿದ್ಯಾರ್ಥಿಗಳಿಗೆ, ಖಂಡಿತ ಪ್ರತಿಭಟಿಸುವ ಹಕ್ಕಿದೆ, ಕೇವಲ ಇಸ್ರೇಲಿ ಸೈನ್ಯವನ್ನು ಮಾತ್ರವಲ್ಲ ಆಲೇ  ಮತ್ತು ಮಾಲೆ ಲೆವೊನಾ ನೆಲೆಗಳ ಆಕ್ರಮಣಕಾರಿ ವಸಾಹತುಗಳನ್ನೂ ಸಹ. ಈ ಎರಡು ಕಾನೂನುಬಾಹಿರ ಯಹೂದಿ ವಸಾಹತುಗಳು ಅಲ್ -ಸವಿಯ ಮತ್ತು ಅಲ್-ಲೆಬಬಾನ್ ಹಳ್ಳಿಗಳಿಗೆ ಸೇರಿದ ಸಾವಿರಾರು ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಇಸ್ರೇಲ್ ವಶಪಡಿಸಿಕೊಂಡಿವೆ.

  2016 ರಲ್ಲಿ ವಿಶ್ವಸಂಸ್ಥೆ ನಡೆಸಿದ ಅಧ್ಯಯನ ಪ್ರಕಾರ,  ಪಶ್ಚಿಮ ದಂಡೆಯ 35 ಸಮುದಾಯಗಳ ಕನಿಷ್ಠ 2,500 ಫೆಲೆಸ್ತೀನ್ ವಿದ್ಯಾರ್ಥಿಗಳು ಪ್ರತಿದಿನ ತಮ್ಮ ಶಾಲೆಗಳನ್ನು ತಲುಪಲು ಇಸ್ರೇಲಿ ಸೇನಾ ತಪಾಸಣಾ ಕೇಂದ್ರಗಳ  ಮೂಲಕ ಹಾದುಹೋಗಬೇಕು. ಈ ವಿದ್ಯಾರ್ಥಿಗಳಲ್ಲಿ ಅರ್ಧದಷ್ಟು ಜನರು ತಮ್ಮ ತರಗತಿಗಳಿಗೆ ತೆರಳುವಾಗ ಅಥವಾ ಮನೆಗೆ  ಮರಳುವಾಗಿನ, ಸೈನ್ಯದ ಕಿರುಕುಳ ಮತ್ತು ಹಿಂಸೆಯನ್ನು ಎದುರಿಸಿದ್ದಾರೆ.

 ಇದು ವಸ್ತುಸ್ಥಿತಿಯ  ಕೇವಲ ಅರ್ಧ ಮಾತ್ರ,  ಯಹೂದಿ ವಸಾಹತುಗಾರರು ಯಾವಾಗಲೂ ಫೆಲೆಸ್ತೀನ್ ಮಕ್ಕಳ ಮೇಲೆ ಕಣ್ಣಿಟ್ಟಿರುತ್ತಾರೆ. ಈ ನಿವಾಸಿಗಳು, “ತಮ್ಮ ಸ್ವಂತ ತಪಾಸಣಾ ಕೇಂದ್ರಗಳನ್ನು” ಕೂಡ ಸ್ಥಾಪಿಸಿದ್ದಾರೆ, ಮಕ್ಕಳಿಗೆ  “ಕಲ್ಲು ಎಸೆಯುವುದು ” ಅಥವಾ ಅವರನ್ನು (ಫೆಲೆಸ್ತೀನ್ ಮಕ್ಕಳು )’ದಬ್ಬುವ’ ಮೂಲಕ ನಿಯಮಿತ ಹಿಂಸಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

  “ಯುನಿಸೆಫ್ ನ  ರಕ್ಷಣಾತ್ಮಕ  ತಂಡಗಳ ಸ್ವಯಂಸೇವಕರು  ದಾಳಿ, ಕಿರುಕುಳ, ತಡೆ  ಮತ್ತು ಬಂಧನ ಮತ್ತು ಸಾವಿನ ಬೆದರಿಕೆಗಳಿಗೆ ಒಳಗಾಗಿದ್ದಾರೆಂದು ”  ವಿಶ್ವಸಂಸ್ಥೆ ಹೇಳಿದೆ

 ಸುಮಾರು 50,000 ಮಕ್ಕಳು ಸೌಲಭ್ಯಗಳ ಕೊರತೆ , ಪ್ರವೇಶ ನಿಷೇಧ, ಹಿಂಸಾಚಾರ, ಮುಚ್ಚುವಿಕೆ ಮತ್ತು ನ್ಯಾಯಸಮ್ಮತವಲ್ಲದ ಮನೆ ಧ್ವಂಸ ಆದೇಶಗಳು  ಸೇರಿದಂತೆ ಅಸಂಖ್ಯಾತ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ.

 ಅಲ್ ಸವಿಯ ಅಲ್ ಲೆಬಬಾನ್  ಶಾಲೆಯು ಸಿ ಪ್ರದೇಶದಲ್ಲಿದೆ,  ಶಾಲಾ ಮಕ್ಕಳ ಅಹಿಂಸಾತ್ಮಕಪ್ರತಿಭಟನೆಗಳು ಸೇರಿದಂತೆ ಇದು ಯಾವುದೇ ವಿಧದ ಪ್ರತಿರೋಧಕ್ಕೆ ತಾಳ್ಮೆಯನ್ನು  ಹೊಂದಿಲ್ಲ.

 ಆದರೂ,  ಇಸ್ರೇಲಿ ಮಿಲಿಟರಿ ಉದ್ಯೋಗ ಮತ್ತು ಫೆಲೆಸ್ತೀನ್ ಸ್ವಾತಂತ್ರ್ಯದ ಮೇಲೆ ಚಾಲ್ತಿಯಲ್ಲಿರುವ ನಿರ್ಬಂಧಗಳ ಹೊರತಾಗಿಯೂ, ಫೆಲೆಸ್ತೀನ್ ನ ಹೆಚ್ಚಿನ ಜನರು  ಮಧ್ಯಪ್ರಾಚ್ಯದಲ್ಲಿ ಶಿಕ್ಷಣ ಪಡೆದಿದ್ದಾರೆ.

 ವಿಶ್ವಸಂಸ್ಥೆಯ  ಪ್ರಗತಿ ಸೂಚಿ  ಪ್ರಕಾರ, ಫೆಲೆಸ್ತೀನ್ ನಲ್ಲಿ (96.3% ರಷ್ಟು ಅಂದಾಜು) ಸಾಕ್ಷರತಾ ಪ್ರಮಾಣ ಇದೆ. ಇದು ಮಧ್ಯಪ್ರಾಚ್ಯದಲ್ಲೇ  ಅತ್ಯಧಿಕ ಪ್ರಮಾಣದ ಮತ್ತು ಅನಕ್ಷರತೆ ಪ್ರಮಾಣವು (15 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಲ್ಲಿ 3.7% ರಷ್ಟು) ವಿಶ್ವದಲ್ಲೇ ಅತಿ ಕಡಿಮೆ,

  ಈ ಅಂಕಿಅಂಶಗಳು ಸಾಕು , ಫೆಲೆಸ್ತೀನ್ ಶಾಲೆ ಮತ್ತು ಪಠ್ಯಕ್ರಮದ ಮೇಲೆ ಇಸ್ರೇಲ್ ಯುದ್ಧ ಮಾಡಲು.  ಯುದ್ಧ ಪೀಡಿತ ಗಾಜಾ ಪಟ್ಟಿ ಪಶ್ಚಿಮ ದಂಡೆಗಿಂತ ಹೆಚ್ಚಿನ ಸಾಕ್ಷರತಾ ಪ್ರಮಾಣವನ್ನು ಹೊಂದಿದೆ,  ಅವುಗಳು ಕ್ರಮವಾಗಿ  96.6% ಮತ್ತು 96%.ಇರುವುದನ್ನು ನಾವು ಗಮನಿಸಬಹುದು.

 ನಿಜವಾಗಿ, ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ . ಐತಿಹಾಸಿಕ ಫೆಲೆಸ್ತೀನ್ ನಿಂದ ಜನಾಂಗೀಯವಾಗಿ ಶುದ್ಧೀಕರಿಸಲ್ಪಟ್ಟ ಫೆಲೆಸ್ತೀನ್ ನಿರಾಶ್ರಿತರ ಮೊದಲ ತಂಡವು, ತಮ್ಮ ಮಕ್ಕಳ ಶಿಕ್ಷಣವನ್ನು ಮುಂದುವರೆಸಲು ಉತ್ಸುಕರಾಗಿದ್ದರು.  ಆದ್ದರಿಂದ ಅವರು 1948 ರಷ್ಟು ಹಿಂದೆಯೇ ಸ್ವಯಂಸೇವಕರಿಂದ ನಡೆಸಲ್ಪಡುತ್ತಿದ್ದ ಶಾಲಾ ಡೇರೆಗಳನ್ನು ಸ್ಥಾಪಿಸಿದರು.

ನಿರಾಕರಿಸಲ್ಪಟ್ಟ  ತಮ್ಮ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಶಿಕ್ಷಣವು  ಅತ್ಯುತ್ತಮ ಶಸ್ತ್ರ ಎಂದು ಫೆಲೆಸ್ತೀನ್ ರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಇಸ್ರೇಲಿ ಗೂ ಸಹ ಇದರ ಕಡಿವಾಣ  ತಿಳಿದಿದೆ, ಒಂದು ಅಧಿಕಾರವನ್ನು ಹೊಂದಿದ ಫೆಲೆಸ್ತೀನ್ ಜನಸಂಖ್ಯೆಯು ಇಸ್ರೇಲಿ ಶಸ್ತ್ರಾಸ್ತ್ರ ಪ್ರಾಬಲ್ಯವನ್ನು ಎದುರಿಸುವುದಕ್ಕಿಂತ ಹೆಚ್ಚು ಸಾಮರ್ಥ್ಯವನ್ನು ಹೊಂದಿದೆಯೆಂದು ಅದಕ್ಕೆ  ತಿಳಿದಿದೆ.  ಈ ಕಾರಣಕ್ಕೆ ಫೆಲೆಸ್ತೀನ್ ಶೈಕ್ಷಣಿಕ ವ್ಯವಸ್ಥೆಯು  ಪಟ್ಟುಬಿಡದ  ಮತ್ತು ವ್ಯವಸ್ಥಿತ ಗುರಿಯಾಗಿದೆ.

ಫೆಲೆಸ್ತೀನ್ ನ   ಶಾಲಾ ವ್ಯವಸ್ಥೆಯ ಮೂಲಸೌಕರ್ಯವನ್ನು ನಾಶಮಾಡುವಲ್ಲಿ ಇಸ್ರೇಲ್ ನ ತಂತ್ರವು ‘ಭಯೋತ್ಪಾದನೆ ‘ ಎಂಬ ಆರೋಪವನ್ನು ಕೇಂದ್ರೀಕರಿಸಿದೆ: ಅಂದರೆ, ತಮ್ಮ ಶಾಲೆಗಳಲ್ಲಿ ಫೆಲೆಸ್ತೀನಿಯನ್ನರು ‘ಭಯೋತ್ಪಾದನೆಯನ್ನು’ ಕಲಿಸುತ್ತಾರೆ; ಫೆಲೆಸ್ತೀನ್ ಶಾಲೆಯ ಪುಸ್ತಕಗಳು ‘ಭಯೋತ್ಪಾದನೆಯನ್ನು ‘ ಕೊಂಡಾಡುತ್ತವೆ ; ಶಾಲೆಗಳು ‘ಜನಪ್ರಿಯ ಭಯೋತ್ಪಾದನೆ’ ಮತ್ತು ಹಲವಾರು ಇತರ ಅಪರಾಧಗಳಿಗೆ ತಾಣವಾಗಿದೆ, ಇಸ್ರೇಲಿನ ಈ ತರ್ಕವು, ಶಾಲೆಗಳನ್ನು ಮುಚ್ಚಲು ,ಸೌಲಭ್ಯಗಳನ್ನು ಕೆಡವಲು, ವಿದ್ಯಾರ್ಥಿಗಳನ್ನು ಬಂಧಿಸಲು ಮತ್ತು ಗುಂಡಿಕ್ಕಲು  ಸೈನ್ಯವನ್ನು ಒತ್ತಾಯಿಸುತ್ತದೆ.

ಉದಾಹರಣೆಗೆ, ಜೆರುಸಲೆಮ್ ನ ಇಸ್ರೇಲಿ ಮೇಯರ್, ನಿರ್ ಬರ್ಕಾಟ್ ಮಾಡಿದ ಇತ್ತೀಚಿನ ಟೀಕೆಗಳು, ಫೆಲೆಸ್ತೀನ್ ನಿರಾಶ್ರಿತರಿಗೆ ವಿಶ್ವಸಂಸ್ಥೆಯ ವಿವಿಧ  ಸಂಘಟನೆಗಳ   ನೆರವು ನೀಡುವ ಕಾರ್ಯಾಚರಣೆಗಳನ್ನು (ಯು ಎನ್ ಆರ್ ಡಬ್ಲ್ಯೂ ಎ ) ಮುಚ್ಚುವ ಗುರಿ ಹೊಂದಿರುವ ಸರ್ಕಾರದ ಪ್ರಚಾರವನ್ನು ಈಗ ಇವರು  ಮುನ್ನಡೆಸುತ್ತಿದ್ದಾರೆ.

“ಜೆರುಸಲೆಮ್ ನಿಂದ  ಯು ಎನ್ ಆರ್ ಡಬ್ಲ್ಯೂಎ ತೆಗೆದುಹಾಕುವ  ಸಮಯ,” ಎಂದು ಬರ್ಕಾಟ್ ಅಕ್ಟೋಬರ್ ಆರಂಭದಲ್ಲಿ ಘೋಷಿಸಿದರು.

ಯು ಎನ್ ಆರ್ ಡಬ್ಲ್ಯೂ ಎ ಹೊರತು  ಫೆಲೆಸ್ತೀನ್ ನಿರಾಶ್ರಿತರಲ್ಲಿ ಯಾವುದೇ ಕಾನೂನು ವೇದಿಕೆ ಇಲ್ಲ  ಆದ್ದರಿಂದ ಯುಎನ್ಆರ್ಡಬ್ಲ್ಯೂಎ ಮುಚ್ಚುವಿಕೆಯು ಫೆಲೆಸ್ತೀನ್ ನಿರಾಶ್ರಿತರ ಅಧ್ಯಾಯ ಮತ್ತು ಅವರ ಹಕ್ಕುಗಳ ಸಂಪೂರ್ಣ ಮಚ್ಚುವಿಕೆ.

ಅಲ್ ಸವಿಯ ಅಲ್ ಲೆಬಬಾನ್ರ ಮುಚ್ಚುವಿಕೆಯ ನಡುವಿನ ಸಂಬಂಧ, ಯುಎನ್ಆರ್ ಡಬ್ಲ್ಯೂಎ ಮೇಲೆ ಇಸ್ರೇಲ್ ಮತ್ತು ಯು.ಎಸ್ ಗುರಿ, ವೆಸ್ಟ್ ಬ್ಯಾಂಕ್ ಮತ್ತು ಹೆಚ್ಚಿನ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸುವ ಹಲವಾರು ತಪಾಸಣಾ ಕೇಂದ್ರಗಳು ,’ಭಯೋತ್ಪಾದನೆ’ಯ ಇಸ್ರೇಲ್ ನ ಸುಳ್ಳು ಆರೋಪಕ್ಕಿಂತಲೂ ಹೆಚ್ಚು ಸಾಮಾನ್ಯವಾಗಿದೆ.

ಇಸ್ರೇಲಿ ಬರಹಗಾರ, ಓರ್ಲಿ ನಾಯ್, ಒಂದು ವಾಕ್ಯದಲ್ಲಿ ಇಸ್ರೇಲಿ ತರ್ಕವನ್ನು ಸಂಕ್ಷಿಪ್ತಗೊಳಿಸಿದ್ದಾರೆ,” ಸಿ ಪ್ರದೇಶ  ಮತ್ತು ಇತರ ಸ್ಥಳಗಳಲ್ಲಿನ  ಫೆಲೆಸ್ತೀನ್ ಹಳ್ಳಿಗಳ ಶಾಲೆಗಳನ್ನು ನಾಶಪಡಿಸುವ ಮೂಲಕ, ಇಸ್ರೇಲ್ ತಮ್ಮ ಭೂಮಿ ಮತ್ತು ಅವರ ಮಕ್ಕಳ ಭವಿಷ್ಯದ ನಡುವೆ  ಕ್ರೂರ ಆಯ್ಕೆ ಮಾಡಲು ಫೆಲೆಸ್ತೀನಿಯನ್ನರನ್ನು  ಒತ್ತಾಯಿಸುತ್ತಿದೆ “ಎಂದು ಅವರು ಈ ವರ್ಷದ ಆರಂಭದಲ್ಲಿ ಬರೆದಿದ್ದಾರೆ.

ಇದು 70 ವರ್ಷಗಳಿಂದ ಫೆಲೆಸ್ತೀನ್ ಶಿಕ್ಷಣದ ಬಗ್ಗೆ ಇಸ್ರೇಲ್ ಸರ್ಕಾರದ ಕಾರ್ಯನೀತಿಯನ್ನು ನಿರ್ದೇಶಿಸಿದ  ಕ್ರೂರ ತರ್ಕಇದು. ಫೆಲೆಸ್ತೀನಿಯನ್ನರ  ಗುರುತಿಸುವಿಕೆ, ಸ್ವಾತಂತ್ರ್ಯ ಮತ್ತು ವಾಸ್ತವವಾಗಿ, ಫೆಲೆಸ್ತೀನ್ ಜನರ ಅಸ್ತಿತ್ವದ ಮೇಲೀನ ಯುದ್ಧ, ಹೊರ ಪ್ರಪಂಚ  ಚರ್ಚಿಸಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದ ಯುದ್ಧವಾಗಿದೆ.

ಅಲ್ ಸವಿಯ ಅಲ್ ಲೆಬಬಾನ್ ಮಿಕ್ಸೆಡ್  ಶಾಲೆಯಲ್ಲಿ ಶಿಕ್ಷಣದ ಹಕ್ಕಿಗಾಗಿ  ವಿದ್ಯಾರ್ಥಿಗಳ ಹೋರಾಟವು ಫೆಲೆಸ್ತೀನ್ ಶಾಲಾ ಮಕ್ಕಳು ಮತ್ತು ವಿಕೃತ -ಸಂತೋಷದ ಇಸ್ರೇಲಿ ಸೈನಿಕರನ್ನು ಒಳಗೊಂಡಿರುವ ಒಂದು ಪ್ರತ್ಯೇಕವಾದ ಚಕಮಕಿಯಾಗಿರುವುದಿಲ್ಲ. ಬದಲಿಗೆ, ಅವರ ಸ್ವಾತಂತ್ರ್ಯಕ್ಕಾಗಿ ಫೆಲೆಸ್ತೀನ್ ಜನರ ಹೋರಾಟದ ಭಾಗವಾಗಿದೆ.