ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿಗಳು ನಿಧನ: ಜಮಾಅತೆ ಇಸ್ಲಾಮಿ ಹಿಂದ್ ಸಂತಾಪ

0
1150

ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿಗಳು  ನಿಧನಕ್ಕೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿರುವ  ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಅಥರುಲ್ಲಾ ಷರೀಫ್ ಅವರು, ಸ್ವಾಮೀಜಿಯವರು ಸಮಾಜದ ಆಸ್ತಿಯಾಗಿದ್ದರು, ಸೌಹಾರ್ದ ಸಮಾಜದ ಕನಸು ಕಂಡು ಅದನ್ನು ನನಸು ಮಾಡಲು ಹೊರಟ ಋಷಿಯಾಗಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ವಾಮೀಜಿಯಾಗಿದ್ದುಕೊಂಡು ಸಮಾಜವನ್ನು ತಿದ್ದುವುದಕ್ಕೆ ಇರುವಷ್ಟು ಅವಕಾಶ ಮತ್ತು ಸ್ವಾತಂತ್ರ್ಯ ಇನ್ನಾರಿಗೂ ಇರುವುದಿಲ್ಲ. ಇದನ್ನು ಚೆನ್ನಾಗಿ ಬಳಸಿಕೊಂಡವರು ತೋಂಟದಾರ್ಯ ಶ್ರೀಗಳು.  ಧರ್ಮ,ಜಾತಿ, ಭಾಷೆಗಳ ಆಧಾರದಲ್ಲಿ ಸಮಾಜವನ್ನು ಒಡೆಯುವುದರ ವಿರುದ್ಧ ಅಚಲವಾಗಿ ನಿಂತರು. ನಾನು ಅವರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದೆ. ಅವರು ಧರ್ಮದ ಹೆಸರಲ್ಲಿ ರಕ್ತಪಾತ, ಹಿಂಸೆ, ವಿಭಜನೆಯನ್ನು ಬಲವಾಗಿ ವಿರೋಧಿಸಿದವರು.    ಅವರ ನಿಧನವು ಈ ಸಮಾಜಕ್ಕೆ ಬಹುದೊಡ್ಡ ನಷ್ಟ. ಅವರು ಪ್ರತಿಪಾದಿಸಿದ ಸೌಹಾರ್ದ ಸಮಾಜ ಕಾರ್ಯರೂಪಕ್ಕೆ ಬರಲಿ ಮತ್ತು ಅವರ ಪರಿವಾರ, ಅಭಿಮಾನಿ ವರ್ಗಕ್ಕೆ ಅವರ ಅನುಪಸ್ಥಿತಿಯನ್ನು ಸಹಿಸುವ ಸಾಮರ್ಥ್ಯವನ್ನು ದೇವನು  ದಯಪಾಲಿಸಲಿ ಎಂದವರು ಪ್ರಾರ್ಥಿಸಿದ್ದಾರೆ.

ಇದೆ ವೇಳೆ  ಶ್ರೀ ಗಳಿಗೆ ಆತ್ಮೀಯರಾಗಿದ್ದ ಜಮಾಅತೆ ಇಸ್ಲಾಮೀ ಹಿಂದ್ ಮಾಜಿ ರಾಷ್ಟ್ರ ಅಧ್ಯಕ್ಷರಾದ  ಮೌಲಾನ ಸೀರಾಜುಲ್ ಹಸನ್  ಸಾಬ್   ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ ರವರು ಕೂಡ ತೀವ್ರ ಸಂತಾಪ  ವ್ಯಕ್ತಪಡಿಸಿದ್ದಾರೆ