ಮುಸ್ಲಿಮರು ಕುರ್ ಆನ್ ನಂತೆ ಬದುಕುವ ಮೂಲಕ ಸಮಾಜದಲ್ಲಿ ತಮ್ಮ ಗುರುತನ್ನು ಮೂಡಿಸಲಿ: ಉಮರಿ

0
363

 ಪಹಡಿ ಶರೀಫ್ (ತೆಲಂಗಾಣ): ಇಲ್ಲಿ  ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ,ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ  ಉಪಾಧ್ಯಕ್ಷ ಮತ್ತು ಜಮಾಅತೆ ಇಸ್ಲಾಮಿ ಹಿಂದ್ (ಜೆಐಹೆಚ್) ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಸೈಯದ್ ಜಲಾಲುದ್ದೀನ್ ಉಮರಿ  ಮಾತನಾಡುತ್ತಾ, ಮುಸ್ಲಿಂ ಸಮುದಾಯವು ದೇಶದಲ್ಲಿ ಎರಡನೇ ಅತಿ ದೊಡ್ಡ ಸಮುದಾಯವಾಗಿದೆ ಮತ್ತು  ದೇಶದಲ್ಲಿ  ಶತಮಾನಗಳಿಂದ ವಾಸಿಸುತ್ತಿದ್ದಾರೆ. ಮುಸ್ಲಿಮರ  ದೇಶಭಕ್ತಿಯನ್ನು ಯಾರಿಗೂ ಸಾಬೀತು ಪಡಿಸಿ ತೋರಿಸಬೇಕಿಲ್ಲ ಎಂದು ಅವರು ಹೇಳಿದರು ಮತ್ತು ಮುಸ್ಲಿಮರು ಧರ್ಮವನ್ನು ಮತ್ತು ಕುರ್ ಆನ್  ಬೋಧನೆಗಳನ್ನು ಅನುಸರಿಸುವುದರ ಮೂಲಕ ತಮ್ಮ ಗುರುತನ್ನು ಪ್ರತಿಬಿಂಬಿಸಬೇಕು ಎಂದು ಹೇಳಿದರು, ಇದರಿಂದಾಗಿ ದೇಶ ವಾಸಿಗಳು ಇಸ್ಲಾಂ ಧರ್ಮದ ನೈಜ  ಸ್ವರೂಪವನ್ನು ಅರ್ಥಮಾಡಿಕೊಳ್ಳಬಲ್ಲರು.

   ಮಹಿಳೆಯರ ವಿರುದ್ಧ ಲೈಂಗಿಕ ಹಿಂಸಾಚಾರ ಹೆಚ್ಚುತ್ತಿರುವುದನ್ನು  ಉಲ್ಲೇಖಿಸಿ, ಇಸ್ಲಾಂ ಧರ್ಮ ದಬ್ಬಾಳಿಕೆಯನ್ನು ಪ್ರೋತ್ಸಾಹಿಸುವುದಿಲ್ಲ ಮತ್ತು ಮಹಿಳೆಯರ ವಿರುದ್ಧ ಹಿಂಸೆಯನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದರು. ಈ ವಿಭಾಗದಲ್ಲಿ ಭಾರತದ ಸ್ಥಾನಕ್ಕೆ  ಆತಂಕ ವ್ಯಕ್ತಪಡಿಸಿದರು ಮತ್ತು ಎಲ್ಲರೂ ಅಂತಹ ಘಟನೆಗಳ ಬಗ್ಗೆ ತಲೆತಗ್ಗಿಸಬೇಕು ಎಂದು ಹೇಳಿದರು. “ಮಹಿಳೆಯರ ವಿರುದ್ಧ ಹಿಂಸಾಚಾರವನ್ನು ತಡೆಯುವುದು ಮತ್ತು ಸಮಾಜದ ದುರ್ಬಲ ವರ್ಗಗಳ ಏಳಿಗೆಗಾಗಿ ಪ್ರಯತ್ನಿಸುವುದು ಪ್ರತಿ ಮುಸ್ಲಿಮರ ಜವಾಬ್ದಾರಿ ” ಎಂದು ಅವರು ಹೇಳಿದರು.

ದೇಶಾದ್ಯಂತ ಕೇಸರಿ ಬಣ್ಣವನ್ನು ಚಿತ್ರಿಸಲು ಸಿದ್ಧಪಡಿಸಲಾದ ಯಾವುದೇ ಪಿತೂರಿಗಳನ್ನು ಎದುರಿಸಲು ಭಾರತೀಯ ಸಂವಿಧಾನವು ಸಾಕಷ್ಟು ಪ್ರಬಲವಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ಮಜ್ಲಿಸ್-ಇ-ಮಶಾವರ್ತ್ (ಎಐಎಂಎಂಎಂ)ನ ಅಧ್ಯಕ್ಷರು  ನವೈದ್   ಹಮೀದ್ ಹೇಳಿದ್ದಾರೆ.  ಹಲವು ಸರಕಾರಗಳು ಬದಲಾಗಿದ್ದರೂ ಸಹ ಎಲ್ಲಾ ಧಾರ್ಮಿಕ ಗುಂಪುಗಳು ಇನ್ನೂ ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿದೆ ಎಂದು   ಅವರು ಹೇಳಿದರು.  ಜಮಾಅತೆ ಅಹ್ಲೆ ಹದೀಸ ಸ್ ಮೌಲಾನಾ ಅಸ್ಗರ್ ಇಮಾಮ್ ಮೆಹ್ದಿ ಸಲಫಿ, ಮೌಲಾನಾ ಮುಫ್ತಿ ಅಝೀಮುದ್ದೀನ್, ಜೆಐಹೆಚ್ ಗ್ರೇಟರ್ ಹೈದರಾಬಾದ್ ಅಧ್ಯಕ್ಷ, ಹಫೀಝ್ ರಶಾದುದ್ದೀನ್ ಮತ್ತು ಇತರರು ಸಭೆಯಲ್ಲಿ ಭಾಗವಹಿಸಿದರು.