ಆರ್ಥಿಕ ಬಿಕ್ಕಟ್ಟು: ಇರಾನ್‍ನಲ್ಲಿ ಶೇ.70ರಷ್ಟು ಫ್ಯಾಕ್ಟರಿ ಮುಚ್ಚುಗಡೆ

0
1986

ಟೆಹ್ರಾನ್,ಅ.26: ಕಠಿಣ ಆರ್ಥಿಕ ಸಂದಿಗ್ಧ ಪರಿಸ್ಥಿತಿಯನ್ನು ಇರಾನ್ ಎದುರಿಸುತ್ತಿದ್ದು ಅಲ್ಲಿನ ಶೇ.70ರಷ್ಟು ಫ್ಯಾಕ್ಟರಿಗಳು ಮುಚ್ಚುಗಡೆಗೊಳ್ಳಲಿದೆ. ಸಾಲ, ನಷ್ಟದಿಂದ ಫ್ಯಾಕ್ಟರರಿಗಳು, ಕಾರಖಾನೆಗಳು, ಗಣಿಗಳನ್ನು ಮುಚ್ಚಲಾಗುತ್ತಿದೆ ಎಂದು ಇರಾನ್ ತಿಳಿಸಿದೆ. ಈ ಅಧಿಕೃತ ಮೂಲಗಳು ಈ ವಿಷಯವನ್ನು ತಿಳಿಸಿವೆ. ಇರ್ನಾ ನ್ಯೂಸ್ ಏಜೆನ್ಸಿ ಈ ಕುರಿತು ವರದಿಯನ್ನು ಪ್ರಕಟಿಸಿವೆ.

ದೇಶದ ಪ್ರಧಾನ ವ್ಯವಸ್ಥೆ ಗಣಿಗಾರಿಕೆಯಾಗಿದೆ. ಈಗ ಗಣಿಗಳೆಲ್ಲ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಆದ್ದರಿಂದ ಅದನ್ನು ಮುಚ್ಚುವುದು ಅನಿವಾರ್ಯವಾಗಿದೆ ಎಂದು ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಹೇಳುತ್ತಿದ್ದಾರೆ. ಕಚ್ಚಾವಸ್ತುಗಳ ಕೊರತೆ ಕೂಡಾ ಫ್ಯಾಕ್ಟರಿಗಳಿಗೆ ತಿರುಗೇಟಾಗಿದೆ. ಅಮೆರಿಕದ ದಿಗ್ಬಂಧನದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಿದೆ. ಕರೆನ್ಸಿಯ ಮೌಲ್ಯಕುಸಿತ, ಬೆಲೆಯೇರಿಕೆಗೆ ಕಾರಣವಾಗಿದೆ. ಆದ್ದರಿಂದ ಇರಾನ್‍ನಲ್ಲಿ ಜನಸಾಮಾನ್ಯರ ಜೀವನ ತಾರುಮಾರಾಗಿದೆ.