ಧರ್ಮ ಬದಲಾಯಿಸಲು ಹಿಂದುತ್ವವಾದಿಗಳಿಂದ ಮನೆ, ಎರಡು ಲಕ್ಷ ರೂಪಾಯಿ ಆಮಿಷ: ಮಾಜಿ ಸಚಿವ ಮೇರಾಜುದ್ದೀನ್

0
562

ಮೀರತ್: ಉತ್ತರಪ್ರದೇಶದಲ್ಲಿ ಇತ್ತೀಚಿಗೆ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರವಾಗಿರುವದಕ್ಕೆ ಮುಸ್ಲಿಂ ಸಮುದಾಯದಲ್ಲಿ ಬೇರೆ ಬೇರೆ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಬಜರಂಗದಳ, ಹಿಂದೂ ವಾಹಿನಿಯಂತಹ ಸಂಘಟನೆಗಳು ಧರ್ಮವನ್ನು ಬದಲಿಸುವವರಿಗೆ ಮನೆ ಮತ್ತು 2 ಲಕ್ಷ ರೂಪಾಯಿ ನೀಡುತ್ತಿದ್ದಾರೆ ಎಂದು ಮಾಜಿ ಸಚಿವರಾದ ಮೇರಾಜುದ್ದೀನ್ ಅಹ್ಮದ್ ಆರೋಪಿಸಿದ್ದಾರೆ.

ಅವರು 1998 ರಲ್ಲಿ ಬಾಗ್ಪಾಥ್ ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು ಮತ್ತು ಮಾಜಿ ಸಚಿವರೂ ಆಗಿದ್ದರು.
ಮೀರತ್ ನ ವಲಯ ಆಯುಕ್ತರಾದ ಅನಿತ್ ಸಿ ಮೆಶರಾಮರನ್ನು ಭೇಟಿಯಾದ ಮೇರಾಜುದ್ದೀನ್ ಅಹ್ಮದ್, ಇಂತಹ ಅಂಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ .

ಬಾಗ್ಪಥ್ ನಲ್ಲಿ ಹಿಂದೂ ಧರ್ಮಕ್ಕೆ ಪರಿವರ್ತನೆಯಾದ ಮುಸ್ಲಿಂ ಕುಟುಂಬದಲ್ಲಿ ಶಿಕ್ಷಣದ ಕೊರತೆ ಇತ್ತು ಎಂದು ಮೇರಾಜುದ್ದೀನ್ ಈ ಸಂದರ್ಭದಲ್ಲಿ ತಿಳಿಸಿದರು .