ಮಸೀದಿ ಗೋಪುರ ಕೆಡವಿದರು: ಅಕ್ರಮವಾಗಿಯೇ ಕಟ್ಟಿದ್ದೆಂದು ಬರೆಯುವಂತೆ ಪೊಲೀಸರ ಒತ್ತಾಯ!

0
2255
ಸಾಂದರ್ಭಿಕ ಚಿತ್ರ

ಅಲ್ವಾರ್, ಮೇವಾತ್: ಸ್ಥಳೀಯ ಹಿಂದುತ್ವ ಸಂಘಟನೆಗಳು ಅಲ್ವಾರ್ ನ ಷಹಜಹಾನ್ಪುರದಲ್ಲಿ 30 ಅಡಿ ಎತ್ತರದ ಮಸೀದಿ ಗೋಪುರ ನಿರ್ಮಾಣದ ಮೇಲೆ ಆಕ್ಷೇಪ ವ್ಯಕ್ತಪಡಿಸಿವೆ. ನಂತರ ಅವರು ಎತ್ತರವನ್ನು ತಗ್ಗಿಸುವಂತೆ ಮುಸ್ಲಿಮರ ಮೇಲೆ ಒತ್ತಡ ಹಾಕಿದ್ದಾರೆ. ಮಸೀದಿ ಕಟ್ಟಡದಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ ಫತಾಹ್ ಮೊಹಮ್ಮದರು ಮನೆಗೆ ಮರಳುತ್ತಿರಬೇಕಾದರೆ ಅವರ ಮೇಲೆ ಕೊಲೆ ಯತ್ನ ನಡೆಸಲಾಗಿದೆ.

ಡಾ. ಫತಾಹ್ ಮೊಹಮ್ಮದ್ ಅವರ ಪತ್ನಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ. ಆದರೆ ಬೆಳಿಗ್ಗೆ ಹಿಂದುತ್ವವಾದಿಗಳು ಪೊಲೀಸು ಠಾಣೆಗೆ ಮುತ್ತಿಗೆ ಹಾಕಿದರು. ಈ ಹಿನ್ನೆಲೆಯಲ್ಲಿ ಇಬ್ಬರು ದಾಳಿಕೋರರನ್ನು ಬಿಡುಗಡೆ ಮಾಡಲಾಯಿತು.

ಜಮಿಯತ್ ಉಲಮಾ ಅಲ್ವಾರ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಅಲ್ವಾರಿಯವರು, ಅಲ್ವಾರ್ ನ ಜಿಲ್ಲಾಧಿಕಾರಿ ಮತ್ತು ಎಸ್ಪಿಯನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ದೂರು ನೀಡಿದ್ದಾರೆ ಮತ್ತು ಲಿಖಿತ ದಾಖಲೆ ಸಲ್ಲಿಸುವ ಮೂಲಕ ಗೋಪುರ ಕಿತ್ತುಹಾಕುವುದನ್ನು ತಡೆಗಟ್ಟಲು ಕೋರಿದ್ದಾರೆ. ಅದರ ಹೊರತಾಗಿಯೂ, ಗೋಪುರವನ್ನು ಸಂಪೂರ್ಣವಾಗಿ ಕೆಡವಲಾಗಿದೆ. ತಪ್ಪಾಗಿ ಅಳವಡಿಸಲಾಗಿರುವ ಕಾರಣ, ಗೋಪುರವನ್ನು ಕೆಡವಲಾಯಿತು ಎಂದು ಬರೆಯುವಂತೆ ಪೊಲೀಸರು ಮುಸ್ಲಿಮರಿಗೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಅನು: ಆಯಿಷತುಲ್ ಅಫೀಫಾ