ಕತರ್ ನ ಪ್ರಗತಿಯನ್ನು ಪ್ರಶಂಸಿದ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್

0
1674

ರಿಯಾದ್: ಜಾಗತಿಕ ಹೂಡಿಕೆ ಸಮ್ಮೇಳನದಲ್ಲಿ ಕತರ್ ನ ಬೆಳವಣಿಗೆಯನ್ನು ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಪ್ರಶಂಸಿದ್ದಾರೆ. ಮಧ್ಯ ಏಷ್ಯಾದ ಅಭಿವೃದ್ಧಿಯ ಕುರಿತು ಹೇಳಿದಾಗ ಸೌದಿ ಅರೇಬಿಯದಿಂದ ದೂರ ನಿಂತ ಕತರನ್ನು ಅವರು ಹೊಗಳಿದರು. ಅವರ ಈ ಮಾತುಗಳನ್ನು ಸೌದಿ ಪ್ರಜೆಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ.

ರಿಯಾದ್ ರಿಟ್ಝ್ ಕಾರ್ಲಟನ್‍ಹೊಟೇಲಿನ ಜಾಗತಿಕ ಹೂಡಿಕೆ ಸಂಗಮ ವೇದಿಕೆಯಲ್ಲಿ ಅರಬ್ ವಲಯದ ಅಭಿವೃದ್ಧಿ ಮತ್ತು ಭವಿಷ್ಯ ಈ ಕುರಿತು ಅವರು ಮಾತಾಡುತ್ತಿದ್ದರು. ಇದರಲ್ಲಿ ಪಶ್ಚಿಮ ಏಷ್ಯಾವನ್ನು ಮುಂದಿನ ಮೂವತ್ತು ವರ್ಷದಲ್ಲಿ ಯುರೋಪ್ ಮಾಡಲಾಗುವುದು ಎಂದು ದೊರೆಯ ಉತ್ತರಾಧಿಕಾರಿ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದರು.

ತದನಂತರ ಅಭಿವೃದ್ಧಿಹೊಂದಿದ ದೇಶಗಳ ಜೊತೆ ಕತರ್ ನ್ನು ಉದ್ಧರಿಸಿ ಮಾತಾಡಿದ್ದಾರೆ. 2017ರಿಂದ ಕತರಿನೊಂದಿಗಿನ ಸಂಬಂಧವನ್ನು ಸೌದಿ ಮುರಿದುಕೊಂಡಿತ್ತು ಈ ಸಂದರ್ಭದಲ್ಲಿ ಪ್ರಿನ್ಸ್ ಮುಹಮ್ಮದ್‍ರ ಮಾತುಗಳು ಕುತೂಹಲ ಕೆರಳಿಸಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ರಾಜಕುಮಾರ ಮಾತಿನಲ್ಲಿ ಆಸ್ಥೆಯಿಂದ ಕಾದು ನೋಡುತ್ತಿದೆ.