ಧರ್ಮನಿಂದೆ ಆರೋಪ: ಪಾಕಿಸ್ತಾನದಲ್ಲಿ ಕ್ರೈಸ್ತ ಮಹಿಳೆ ಖುಲಾಸೆ

0
173

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಧರ್ಮ ನಿಂದೆ ಆರೋಪಿಸಿ ಕೆಳ ಕೋರ್ಟಿನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕ್ರೈಸ್ತ ಮಹಿಳೆಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟು ಖುಲಾಸೆಗೊಳಿಸಿದೆ.

ಮುಸ್ಲಿಮರ ಬಾವಿಯಿಂದ ನೀರು ತೆಗೆದ ವಿಷಯ ಮೊದಲು ಕೇಸಿಗೆ ಕಾರಣವಾದ ಘಟನೆ ಯಾಗಿತ್ತು. ಬಕೆಟ್‍ನಿಂದ ಒಂದು ಲೋಟ ನೀರು ತೆಗೆದದ್ದು ಕೇಸಿಗೆ ಆಸ್ಪದವಾಗಿತ್ತು. ನಂತರ ಮಾತಿನ ಚಕಮಕಿ ನಡೆದು ಕ್ರೈಸ್ತ ಮಹಿಳೆ ಆಸಿಯಾ ಬೀವಿ ಪ್ರವಾದಿಯವರನ್ನು(ಸ) ನಿಂದಿಸಿದ್ದಾರೆ ಎಂದು ಆರೋಪಿಸಿ ಕೇಸು ದಾಖಲಿಸಲಾಗಿತ್ತು.

ಕೇಸು ಸಾಬೀತುಪಡಿಸಲು ಪ್ರಾಸಿ ಕ್ಯೂಶನ್‍ನಿಂದ ಸಾಧ್ಯವಾಗಿಲ್ಲ ಎಂದು ಸುಪ್ರೀಂ ಕೋರ್ಟು ತಿಳಿಸಿದೆ. ನಾನು ಹಾಗೆ ಮಾಡಿಲ್ಲ ಎಂದು ಕೆಳ ಕೋರ್ಟು ಗಲ್ಲುಶಿಕ್ಷೆ ನೀಡಿದ ವೇಳೆ ಆಸಿಯಾ ಬೀವಿ ಹೇಳಿದ್ದರು. ಹೆಚ್ಚು ಅಂತಾರಾಷ್ಟ್ರೀಯ ಗಮನ ಸೆಳೆದ ಘಟನೆ ಇದು ಆಗಿತ್ತು. ಧರ್ಮ ನಿಂದೆ ಪಾಕಿಸ್ತಾನಿನಲ್ಲಿ ದೊಡ್ಡ ಅಪರಾಧವಾಗಿದೆ. ಎಲ್ಲ ಧರ್ಮಕ್ಕೂ ಇದು ಬಾಧಕವಾಗಿದೆ.

ಮಹಿಳೆಗೆ ಮರಣದಂಡನೆ ಜಾರಿ ಗೊಳಿಸಬೇಕೆಂದು ಹೇಳಿ ಕೋರ್ಟಿನ ಮುಂದೆ ದೊಡ್ಡ ಜನ ಸಂದಣಿ ನೆರೆದಿತ್ತು. ಧರ್ಮವನ್ನು ಪಾಕಿಸ್ತಾನದ ಜನರು ಭಾವನಾತ್ಮಕವಾಗಿ ಸ್ವೀಕರಿಸುತ್ತಾರೆ. ಇಸ್ಲಾಮ್ ವಿಶ್ವಾಸ ಎನ್ನುವುದಕ್ಕಿಂತಲೂ ಇಸ್ಲಾಮೀ ಭಾವನೆ ಎಂಬುದು ಪಾಕಿಸ್ತಾನಿಯರ ನಿಲುವು ಆಗಿದೆ. ಒಂದು ಕಪ್ ನೀರು ತೆಗೆದದ್ದು ಕೇಸಿಗೆ ಕಾರಣವಾಗಿತ್ತೇ ಎನ್ನುವುದು ಕೂಡ ಸ್ಪಷ್ಟವಾಗಿಲ್ಲ. ಪ್ರವಾದಿಯವರನ್ನು(ಸ) ನಿಂದಿಸಿದ್ದು ಸ್ಥಳದಲ್ಲಿದ್ದ ಇತರ ಮಹಿಳೆಯರಿಗೆ ಕೇಳಿಸಿದೆ ಎಂದು ವರದಿಯಲ್ಲಿದೆ. ಧರ್ಮ ನಿಂದೆ ಕಾನೂನಿಗೆ ಬದಲಾವಣೆ ತರಬೇಕೆಂದು ಪಾಕಿಸ್ತಾನದಲ್ಲಿ ಕೆಲವರು ಅಭಿಯಾನವನ್ನು ಕೂಡ ನಡೆಸುತ್ತಿದ್ದಾರೆ.