ಅಮೆರಿಕದ ವಸತಿರಹಿತರು ಮತ್ತು ಸವಾಲು

0
322

ನಿರಾಶ್ರಿತರು ಎಂದರೆ ಯಾವುದೋ ಒಂದು ದೇಶದಿಂದ ಬಂದವರು ಮಾತ್ರವಲ್ಲ. ಹುಟ್ಟಿದೂರಿ ನಲ್ಲಿ ನಿರಾಶ್ರಿತರಾದವರೂ ಸೇರಿದ್ದಾರೆ. ಮನೆಯೆನ್ನು ವುದು ಮನುಷ್ಯನಿಗೆ ಆಶ್ರಯ ನೀಡುವ ಸ್ಥಳ ತಾನೆ. ಮನೆಯಿಲ್ಲದ್ದು ಜಗತ್ತಿನಲ್ಲಿ ಅತಿದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಮನೆಯಿಲ್ಲದವರನ್ನು ನಾವೆಲ್ಲ ಕಡೆಯೂ ನೋಡುತ್ತೇವೆ. ಹಳೆಯ ಸ್ಥಳ ಮತ್ತು ಹೊಸ ಸ್ಥಳಗಳಲ್ಲಿ ವಯಸ್ಸಿನ ವ್ಯತ್ಯಾಸವಿಲ್ಲದೆ ಬೀದಿಗಳಲ್ಲಿ, ಕಾರ್ಡ್ ಬೋರ್ಡು, ಮಣ್ಣಲ್ಲಿ ಮಲಗಿ ನಿದ್ರಿಸುವ ಈ ಮಂದಿ ಮನೆಗಳಿಲ್ಲದೆ ಸೇತುವೆ ಅಡಿಯಲ್ಲಿ, ಮರಗಳ ನೆರಳಲ್ಲಿ ಮಲಗಿ ನಿದ್ರಿಸುತ್ತಾರೆ. ಇವರ ಸಾಮಗ್ರಿಗಳು ಒಂದು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಅವರ ಹತ್ತಿರವೇ ಇರುತ್ತದೆ. ಭಾರತದಲ್ಲಿ ಮಾತ್ರವಲ್ಲ ಅಮೆರಿಕದಲ್ಲಿ ವಸತಿ ರಹಿತರು ಬಹುದೊಡ್ಡ ಸಮಸ್ಯೆಯಾಗಿದ್ದಾರೆ. ಸರಿಯಾದ ಲೆಕ್ಕದಂತೆ ಅಮೆರಿಕದಲ್ಲಿ 553742 ಜನರು ಮನೆಯಿಲ್ಲದವರು ಇದ್ದಾರೆ. ಇದು ಹೌಸಿಂಗ್ ಆಂಡ್ ಅರ್ಬನ್ ಬೋರ್ಡ್ ಬಿಡುಗಡೆಗೊಳಿಸಿದ ಲೆಕ್ಕವಾಗಿದೆ, ಕ್ಯಾಲಿಫೋರ್ನಿಯ, ಒರೆಗಾನ್, ವಾಷಿಂಗ್ಟನ್ ಸಹಿತ ಮೂವತ್ತು ರಾಜ್ಯಗಳ ಸ್ಥಿತಿ ಅತ್ಯಂತ ದಯನೀಯವಾಗಿದೆ. ಅಮೆರಿಕನ್ನರಿಗೂ ಒಂದು ಮನೆ ಈಡೇರದ ಕನಸಾಗಿ ಮುಂದುವರಿಯುತ್ತಿದೆ.

ಮನೆ ಮಠ ಇಲ್ಲದವರು ಎಲ್ಲ ಕಡೆ ಇರುತ್ತಾರೆ. ಅವರನ್ನು ಬಡವರು ನಿರ್ಗತಿಕರು, ಅಲೆಮಾರಿಗಳು ಹೀಗೆಲ್ಲ ಹೇಳುತ್ತೇವೆ. ಆದರೆ ಅಮೆರಿಕದ ಬಡವರನ್ನು ಈ ಕೆಟಗರಿಯಲ್ಲಿ ಅಳೆಯಲು ಸಾಧ್ಯವಿಲ್ಲ. ಅಂದರೆ ಹೈಲಿ ಎಜುಕೇಟೆಡ್, ಕಂಪೆನಿ ಗಳಲ್ಲಿ ಉನ್ನತ ಉದ್ಯೋಗ ಇರುವವರು ಅಮೆರಿಕದಲ್ಲಿ ವಸತಿ ರಹಿತರ ಸಾಲಿಗೆ ಸೇರುತ್ತಾರೆ.

ಟ್ರಂಪ್ ಅವರು ವಿದೇಶಿಗಳಿಗೆ ಸ್ಥಳವಿಲ್ಲ ಎನ್ನುವ ದಿನಕ್ಕೊಂದು ರೀತಿಯ ವಲಸಿಗರ ಕುರಿತ ನೀತಿ ಪ್ರಕಟಿಸುವುದು ಸುಮ್ಮನಲ್ಲ. ಅಷ್ಟು ಅಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಆದರೆ ವಲಸಿಗ ರಿಂದ ಅಮೆರಿಕದ ಆರ್ಥಿಕತೆ ಹಾಳಾಗುತ್ತದೆ ಎನ್ನುವ ಮಾತನ್ನು ಕೇವಲ ಡೊನಾಲ್ಡ್ ಟ್ರಂಪ್ ರಂತಹವರಿಂದ ಮಾತ್ರ ಊಹಿಸಲು ಸಾಧ್ಯ.

ಟ್ರಂಪ್ ನೀತಿಗಳು ಅಮೆರಿಕದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ. ಚೀನದೊಂದಿಗೆ, ಇರಾನ್ ನೊಂದಿಗೆ ಮುನಿಸಿಕೊಂಡರೆ ಅಮೆರಿಕದಲಿ ್ಲಯೂ ಆರ್ಥಿಕತೆ ಬುಡಮೇಲಾಗುವುದಿಲ್ಲ ಅಂತೇನಾದರೂ ಇದೆಯೇ? ಇರಾನ್‍ಗೆ ದಿಗ್ಬಂಧನ ಹಾಕಿ ಅಲ್ಲಿನ ಆರ್ಥಿಕತೆ, ಟರ್ಕಿಯ ಮೇಲೆ ಪರೋಕ್ಷ ದಿಗ್ಬಂಧ ನದ ಮೂಲಕ ಅರ್ಥಾತ್ ಟರ್ಕಿಯ ಲಿರದ ಮೌಲ್ಯ ಇಳಿಯುವಂತೆ ಮಾಡಿ ಟರ್ಕಿಯ ಆರ್ಥಿಕತೆ ಕೆಡವಲು ಟ್ರಂಪ್ ನೋಡಿದ್ದಾರೆ. ಆದರೆ ಅವರಿಗೆ ಇಷ್ಟೆಲ್ಲ ಮಾಡಿಯೂ ತಮ್ಮ ದೇಶದ ಆರ್ಥಿಕತೆಯನ್ನು ಸುಧಾರಿಸಲು ಸಾಧ್ಯ ವಾಗಿಲ್ಲ ಎನ್ನುವುದಕ್ಕೆ ಬೀದಿಯ ಬದಿ, ಹಳೆ ವಾಹನಗಳನ್ನು ಮನೆಮಾಡಿಕೊಂಡು ಬದುಕುತ್ತಿ ರುವ ವಸತಿರಹಿತರ ಚಿತ್ರಣ ಎತ್ತಿಹಿಡಿಯುತ್ತಿದೆ.

ಒಂದೆಡೆ ಅದ್ದೂರಿ ಬದುಕು, ಮಜಾ ಜೀವನ ನಡೆಸುವವರು ಇರುವಾಗಲೇ ಇನ್ನೊಂದು ಕಡೆ ಕನಸಿನ ಒಂದು ಮನೆ ನನಸಾಗದೆ ಬಳುಲುತ್ತಿರುವ ಜನರು ಇದ್ದಾರೆ.

ಅಮೆರಿಕದ ವೆಸ್ಟ್ ಕೋಸ್ಟ್ ನಗರ ಪೋರ್ಟ್ ಲೆಂಡಿನ ಉನ್ನತ ಜೀವನ ಶೈಲಿಯು ಅಲ್ಲಿ ಕೆಲವ ರನ್ನು ಇತ್ತೀಚೆಗೆ ಬೀದಿಗೆ ತಳ್ಳಿದೆ ಎನ್ನಬ ಹುದು. ಆದ್ದರಿಂದ ಅಮೆರಿಕದ ಪೋರ್ಟ್‍ಲೆಂಡ್ ವೆಸ್ಟ್ ಕೋಸ್ಟ್ ನಗರದಲ್ಲಿ ಕಂಡು ಬರುವ ಇಂದಿನ ಚಿತ್ರ ಅಭಿವೃದ್ಧಿಯ ಬುಡ ಮೇಲಿನ ಬಲಿಪಶುಗಳದ್ದು, ವಸತಿ ರಹಿತರು ಇಲ್ಲಿ ಹೆಚ್ಚುತ್ತಿದ್ದಾರೆ. ಅವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ತಜ್ಞರ ಪ್ರಕಾರ, ಈ ಸಮಸ್ಯೆಗೆ ಸದ್ಯದ ಮಟ್ಟಿಗೆ ಪರಿಹಾರವಿಲ್ಲ. ಪರಿಸ್ಥಿತ ಬಿಗಡಾ ಯಿಸುತ್ತಲೇ ಹೋಗಬಹುದು. ಇವೆಲ್ಲಕ್ಕೂ ಜನರ ಜೀವನ ಶೈಲಿಯೇ ಕಾರಣ, ಒಂದು ಸಾರಿ ಯಾವುದೇ ವಿಷಯವಾಗಿ ಗ್ರಹಿಸಿದರೆ ಮತ್ತೆಂದೂ ಅದು ಉನ್ನತವೇ ಆಗಿಬಿಡುತ್ತದೆ. ದುಬಾರಿಯಾಗಿ ಬದುಕಿದವರಿಗೆ ಸರಳವಾಗಿ ಬೋಧಿಸಿದರೆ ಬದಲಾ ವಣೆ ಆಗುವುದಿಲ್ಲ. ಹೇಗಾದರೂ ಸಾಲಮಾಡಿ ಯಾದರೂ ಅವರು ದುಬಾರಿ ಶೈಲಿ ಯನ್ನು ಮುಂದುವರಿಸುತ್ತಾರೆ. ಅಮೆರಿಕದ ಸಮಸ್ಯೆ ಇದು.

ಫೂಟ್‍ಫಾತ್ ಟೆಂಟ್ ರಾತ್ರೆ ಕಳೆಯುವ ತಾಣವೇ ಆದರೂ ಪಬ್ ಬಿಯರ್ ಬಾರ್ ಇತ್ಯಾದಿಗಳಲ್ಲಿ ಶೋಕಿಯ ಜೀವನವನ್ನು ನಡೆಸುತ್ತಾರೆ. ತಮ್ಮ ಪರಿಸ್ಥಿತಿ ಹದಗೆಟ್ಟಿದೆ ಎಂದು ಒಪ್ಪಿಕೊಳ್ಳಲು ಸಿದ್ಧ ರಿಲ್ಲದ ಹಟಮಾರಿ ಜನವಿಭಾಗವಿದು ಎಂದರೂ ತಪ್ಪಿಲ್ಲ. ಒಟ್ಟಾರೆ ಆರ್ಥಿಕ ಮಾಂದ್ಯ ಇಲ್ಲಿನ ಜನರನ್ನು ಬೀದಿಗಿಳಿಯುವಂತೆ ಮಾಡಿದೆ. ದುಬಾರಿ ಬದುಕಿನ ಶೈಲಿ ಒಂದು ಸೂರನ್ನು ಹೊಂದಲು ಕೂಡ ಆಗದಷ್ಟು ಕಾಡುತ್ತಿದೆ. ವಸತಿ ರಹಿತರ ಸಮಸ್ಯೆಯನ್ನು ತಡೆಯಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಆದ್ದರಿಂದ ಅಮೆರಿಕದಲ್ಲಿ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ ಎಂದು ತಜ್ಞರು ಹೇಳುತ್ತಾರೆ..

ವಸತಿ ರಾಹಿತ್ಯ ದೊಡ್ಡ ಸಮಸ್ಯೆಯಾಗಿ ಅಮೆರಿಕದ ಸುಂದರ ನಗರ ಪೋರ್ಟ್‍ಲೆಂಡ್‍ನ್ನು ಬಹಳಷ್ಟು ಹೆಚ್ಚು ಕಾಡಿದೆ. ಗುಲಾಬಿ ನಗರ ಅಂತ ಹೆಸರುವಾಸಿಯಾಗಿರುವ ಈ ನಗರದ್ದು ಪ್ರಶಾಂತ ಹವಮಾನವಾಗಿದೆ. ಉನ್ನತ ಚಿಂತನಾ ಗತಿಯ ಜನರು. ಶ್ರೀಮಂತ ಸಂಸ್ಕøತಿ ಇವೆಲ್ಲವೂ ಇರುವ ನಗರ ಪೋರ್ಟ್‍ಲೆಂಡ್ ಆಗಿದೆ.

ಆದರೆ ಇವರನ್ನು ಆರ್ಥಿಕ ಮಾಂದ್ಯದ ಬಲಿಪಶುಗಳಾಗಿ ಕಾಣಲು ಸಾಧ್ಯವಾಗಿದೆ. ಹೈಟೆಕ್ ಕಂಪೆನಿಗಳಲ್ಲಿ ಉನ್ನತಮಟ್ಟದ ಸಂಬಳ ಪಡೆಯುವ ಜನರೇ ಇಂದು ಬೀದಿಗೆ ಬಿದ್ದಿದ್ದಾರೆ. ಆರ್ಥಿಕ ಮಾಂದ್ಯ ದಿಂದಾಗಿ ನಗರ ಜೀವನ ಕಷ್ಟವಾಗಿದೆ. ಜೀವನ ವೆಚ್ಚ ಹೆಚ್ಚಿದಂತೆ ನಗರದಲ್ಲಿ ಆರ್ಥಿಕವಾಗಿ ಹಿಂದು ಳಿದ ಜನರಿಗೆ ಇಲ್ಲಿ ಬದುಕಲು ಸಾಧ್ಯವಾಗಲಿಲ್ಲ.

ಇಂತಹವರಲ್ಲಿ ಹಲವು ಮಂದಿ ಗೆಳೆಯರು, ಸಂಬಂಧಿಕರಲ್ಲಿಗೆ ಹೊರಟು ಹೋದರು. ಇನ್ನು ಕೆಲವರನ್ನು ಸರಕಾರ ಮಾನವೀಯ ಸಂಘಟನೆಗಳು ಪಾರುಮಾಡಿದವು. ಆದರೆ ಕೊನೆಗೆ ಕೆಲವರು ಮನೆಯಿಲ್ಲದೆ ಬೀದಿಗೆ ಬಿದ್ದರು. ಕೆಲವರಿಗೆ ಬೀದಿಯ ಸಾರ್ವಜನಿಕ ಶೆಲ್ಟರ್‍ಗಳು ಲಭಿಸಿದವು. ಇನ್ನು ಕೆಲವರು ಈಗ ಬೀದಿಯ ಬದಿಯ ಟೆಂಟ್‍ಗಳಲ್ಲಿ ವಾಹನಗಳಲ್ಲಿ ಬದುಕುತ್ತಿದ್ದಾರೆ. ಇಡೀ ಅಮೆರಿಕದು ದ್ದಕ್ಕೂ ಅಸಮಾನತೆಯಲ್ಲಿ ಹೆಚ್ಚಳವಾಗುತ್ತಿದೆ. ಇದು ಜನರನ್ನು ಬಹಳ ಹೆಚ್ಚು ಬಾಧಿಸುತ್ತಿದೆ. ಅರ್ಥ ವ್ಯವಸ್ಥೆ ಯಾವತ್ತೂ ಗಟ್ಟಿಗೊಳ್ಳುವುದಿಲ್ಲ ಎಂದು ಮೇಯರ್ ಟೆಟ್‍ವೀಲರ್ ಹೇಳುತ್ತಾರೆ. ವೆಸ್ಟ್ ಕೋಸ್ಟ್ ನಗರದಲ್ಲಿ ಇಂದು ವಸತಿ ರಹಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದರಲ್ಲಿ ಯುವಕರಿದ್ದಾರೆ. ಉನ್ನತ ಶಿಕ್ಷಣವೇತ್ತರೂ ಇದ್ದಾರೆ.

ಇಂದು ವಸತಿ ರಾಹಿತ್ಯ ಕೇವಲ ಅಮೆರಿಕ ವೊಂದರ ಸಮಸ್ಯೆಯಾಗಿ ಉಳಿದಿಲ್ಲ. ಇಡೀ ಪ್ರಪಂಚದ ಸಮಸ್ಯೆ ಇದು. ಯುರೋಪಿನಲ್ಲಿ ಅಮೆರಿಕದಂತೆ ಮನೆಯಿಲ್ಲದೆ ಫುಟ್‍ಪಾತಿನಲ್ಲಿ ನೆಲೆಸಿ ದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇಂಗ್ಲೆಂಡಿನ ಪ್ರತಿಷ್ಠಿತ ಲಂಡನ್ ನಗರದಲ್ಲಿ ವಸತಿ ರಾಹಿತ್ಯ ಅಲ್ಲಿನ ಆಡಳಿತವನ್ನು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಇಂಗ್ಲೆಂಡಿನಲ್ಲಿ ಸುಮಾರು 250,000 ಜನರು ಮನೆಯಿಲ್ಲದೆ ಬೀದಿಪಾಲಾಗಿದ್ದಾರೆ. ಅಂದರೆ ಮನೆಯಿಲ್ಲದ ಜನರು ಕೂಡ ಪ್ರತಿಯೊಂದು ದೇಶಕ್ಕೂ ಸವಾಲಾಗಿ ಕಾಡುತ್ತಿದ್ದಾರೆ ಎನ್ನಬಹುದು. ಅಂದರೆ ಭಾರತದಲ್ಲಿ ಮಾತ್ರವಲ್ಲ ಹಿರಿಯಣ್ಣ ಅಮೆರಿಕ ಕೂಡ ವಸತಿರಹಿತರ ಸಮಸ್ಯೆಯಿಂದ ಬಳಲುತ್ತಿದೆ.. ರಕ್ಷಣಾ ವೆಚ್ಚವಾಗಿ ಕೋಟ್ಯಂತರ ಅಥವಾ ಬಿಲಿಯನ್ ಗಟ್ಟಲೆ ಹಣವನ್ನು ಪ್ರತಿಯೊಂದು ದೇಶಗಳು ಸುರಿಯುತ್ತವೆ. ಆದರೆ ತಮ್ಮ ಪ್ರಜೆಗಳಿಗೊಂದು ಸರಿಯಾದ ಸೂರಿಗೆ ಅಷ್ಟೇನೂ ಪರಿಣಾಮಕಾರಿ ಯೋಜನೆಗಳಿರುವುದಿಲ್ಲ. ಅದು ಇಡೀ ವಿಶ್ವದಲ್ಲಿ ಸಮಸ್ಯೆಯಾಗಿದ್ದು ಹೀಗೆ.