ಐಸಿಸ್ ತೆಕ್ಕೆಯಲ್ಲಿದ್ದ 14 ಅನಾಥ ಮಕ್ಕಳನ್ನು ಬಿಡುಗಡೆಗೊಳಿಸಿದ ಕುರ್ದ್ ಸೈನ್ಯ

0
178

ಡಮಸ್ಕಸ್, ಜೂ.12: ಈಶಾನ್ಯ ಸಿರಿಯದಿಂದ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹಿಡಿದಿಟ್ಟಿದ್ದ ಹದಿನಾಲ್ಕು ಅನಾಥ ಮಕ್ಕಳನ್ನು ಸಿರಿಯದ ಕುರ್ದ್ ಸೈನಿಕರು ಬಿಡುಗಡೆಗೊಳಿಸಿದ್ದಾರೆ. 12 ಫ್ರಾನ್ಸ್ ಮತ್ತು 2 ಡಚ್ ತಂದೆ ತಾಯಿಗಳಿಗೆ ಸೇರಿದ ಅನಾಥ ಮಕ್ಕಳನ್ನು ಸರಕಾರಿ ಪ್ರತಿನಿಧಿಗಳಿಗೆ ಕುರ್ದ್ ಹೋರಾಟಗಾರರು ಹಸ್ತಾಂತರಿಸಿದರು.

ಐಸಿಎಸ್ ವಿರುದ್ಧ ಯುದ್ಧ ತೀವ್ರಗೊಂಡ ಬಳಿಕ ಈ ಮಕ್ಕಳು ಮತ್ತು ಸಾವಿರಾರು ಐಸಿಎಸ್ ಕುಟುಂಬಗಳ ಜೊತೆ ಇವರು ಶಿಬಿರದಲ್ಲಿ ಉಳಿದುಕೊಂಡಿದ್ದರು. ಇಲ್ಲಿಂದ ಕುರ್ದ್ ಸೈನ್ಯ ಇವರನ್ನು ಬಿಡಗಡೆಗೊಳಿಸಿ ಫ್ರೆಂಚ್ ಸಚಿವಾಲಯದ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು. ಸೋಮವಾರ ಕುರ್ದ್ ಮುಖ್ಯಸ್ಥರು ಈ ಕುರಿತು ವಿವರವನ್ನು ಬಹಿರಂಗಪಡಿಸಿದರು. ಇಬ್ಬರು ಡಚ್ ಅನಾಥ ಮಕ್ಕಳನ್ನು ರವಿವಾರ ನೆದರ್‍ಲೆಂಡ್ ಸರಕಾರದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ವರದಿಗಳು ತಿಳಿಸಿವೆ.