ಮೇಕಪ್ ಹಿಂದಿನ ನೈಜ ಮುಖ

0
1770

`ದಿ ಟೈಮ್ಸ್ ಆಫ್ ಇಂಡಿಯಾ’ದ 2013 ಡಿಸೆಂಬರ್ 24ರ ಒಂದು ವರದಿಯ ಪ್ರಕಾರ ಭಾರತದ ಸೌಂದರ್ಯ ಮತ್ತು ಸೌಂದರ್ಯ ವರ್ಧಕಗಳ ಉದ್ಯಮವು ಪ್ರಚಲಿತವಾಗಿ 950 ಡಾಲರ್ ಆಗಿದ್ದು. 2020ರಲ್ಲಿ ಮೂರು ಪಟ್ಟು ಹೆಚ್ಚಾಗಲಿದ್ದು ಸುಮಾರು 2.68 ಶತಕೋಟಿ ಡಾಲರ್‍ಗಳಿಗೆ ತಲುಪಲಿದೆ ಎಂದು ಅಂದಾಜಿಸ ಲಾಗಿದೆ. ಮುಂದಿನ ವರ್ಷದ ಮಾರುಕಟ್ಟೆ ಬೆಳವಣಿಗೆಯ ಪ್ರಮಾಣವು 15% ದಿಂದ 20%ದ ವರೆಗೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದ್ದು ಅಮೇರಿಕ ಮತ್ತು ಯುರೋಪಿಯನ್ ಮಾರುಕಟ್ಟೆ ಗಳಿಗಿಂತಲೂ ಎರಡು ಪಟ್ಟು ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಚರ್ಮವನ್ನು ಬಿಳುಪಾಗಿಸುವ ಸೌಂದರ್ಯ ವರ್ಧಕಗಳ ಬೇಡಿಕೆಯು ಸ್ತ್ರೀ ಪುರುಷರಿಬ್ಬರಲ್ಲಿಯೂ ಹೆಚ್ಚಾಗುತ್ತಿದ್ದು ಶೃಂಗಾರ ಉತ್ಪನ್ನಗಳು ಇದರಲ್ಲಿ ಹಿಂದುಳಿದಿಲ್ಲ. ಕಳೆದ 5 ವರ್ಷಗಳಲ್ಲಿ ಶೃಂಗಾರ ಉತ್ಪನ್ನಗಳು 60%ದಷ್ಟು ಬೆಳವಣಿಗೆಯನ್ನು ಕಂಡಿವೆ. ಪಾಂಡ್ಸ್ ಮತ್ತು ಫೇರ್ & ಲವ್ಲಿಯಂತಹ ಉತ್ಪನ್ನಗಳು ಈ ಪಟ್ಟಿ ಯಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿವೆ.

ಇನ್ನು ಕಂಪೆನಿಗಳಾದ ಲ್ಯಾಕ್ಮೆ, ರೆವ್ಲಾನ್, ಪ್ರಾಕ್ಟರ್ & ಗ್ಯಾಂಬಲ್, ಲೋರಿಯಲ್, ಯೂನಿಲಿ ವರ್, ಜಾನ್ಸನ್ & ಜಾನ್ಸನ್, ಓರಿಪ್ಲೇಮ್ ಇತ್ಯಾದಿಗಳು ತಮ್ಮ ಉತ್ಪನ್ನಗಳ ತೋರಿಕೆ ಮತ್ತು ಪ್ರಚಾರಗಳಲ್ಲಿ ಮ್ಯಾಜಿಕಲ್ ಲೈಟ್‍ನಿಂಗ್ (ಮಾಂತ್ರಿಕ ಹೊಳಪು) ಎಂಬ ಜಾಹೀರಾತುಗಳ ಮೂಲಕ ಚಿತ್ತಾಕರ್ಷಿಸುತ್ತಿದ್ದು, ತಮ್ಮದೇ ಆದ ಪ್ರತ್ಯೇಕ ಸೆಲೂನ್‍ಗಳನ್ನು ಸ್ಥಾಪಿಸುವುದರಲ್ಲಿ ಭರದಿಂದ ಸಾಗುತ್ತಿವೆ. ಇದರ ಬೆಳವಣಿಗೆ ಸರಿ ಸುಮಾರು 35% ಎಂದು ಅಂದಾಜಿಸಲಾಗಿವೆ.

ಸೌಂದರ್ಯವರ್ಧಕ ಚಿಕಿತ್ಸೆಗಳು ಸರಿ ಸುಮಾರು 5%ದಷ್ಟು ಏರಿಕೆಯನ್ನು ಕಂಡಿದೆ. ಕೂದಲು ಆರೈಕೆಗಳ ಸೌಂದರ್ಯ ಉತ್ಪನ್ನಗಳ ವಾರ್ಷಿಕ ಆದಾಯವು 1.2 ಮಿಲಿಯನ್ ಡಾಲರ್ ಆಗಿದ್ದು 2015ರಲ್ಲಿ ಇದರ ಪ್ರಮಾಣವು 6.2 ಮಿಲಿಯನ್ ಡಾಲರ್ ಆಗುವುದೆಂದು ಅಂದಾಜಿಸಿತ್ತು.Spa & Body treatment ಗಳ ಬೆಳವಣಿಗೆಯು ಬರುವ 5 ಅಥವಾ 8 ವರ್ಷಗಳಲ್ಲಿ 772 ಮಿಲಿಯನ್ ಡಾಲರ್ ಆದಾ ಯಕ್ಕೆ ತಲುಪುವುದೆಂದು ಅಂದಾಜಿಸಲಾಗಿತ್ತು. ಈ ಸೌಂದರ್ಯ ಉತ್ಪನ್ನಗಳ ಮಾರುಕಟ್ಟೆಯು ಭಾರತದಲ್ಲಿ ಬೆಳೆಯುತ್ತಿರುವುದನ್ನು ಕಂಡು International Beauty Mart (IBM) ಅನ್ನು ಭಾರತ ದಲ್ಲಿ ಸಂಸ್ಥಾಪಿಸಲು ತೀರ್ಮಾನಿಸಲಾಯಿತು. ಇದರಲ್ಲಿ ಎಲ್ಲಾ ರೀತಿಯ ಬ್ರ್ಯಾಂಡ್‍ಗಳನ್ನು, ಕಂಪೆನಿಗಳನ್ನು ಮತ್ತು ಬ್ರ್ಯಾಂಡ್‍ಗಳ ನುರಿತ ತಜ್ಞರನ್ನು ಹೊಸ ಶೈಲಿ ಮತ್ತು ಸೇವೆಗಳನ್ನು ಒಂದು ವೃತ್ತಿಪರ ಪ್ರೇಕ್ಷಕ ವರ್ಗದ ಮುಂದೆ ಸೇರಿಸಲಾಯಿತು. ಇವುಗಳನ್ನು ಜನಪ್ರಿಯಗೊಳಿ ಸಲು ಹಲವಾರು ಕಂಪೆನಿಗಳ ಪ್ರಾಯೋಜಕತ್ವದಲ್ಲಿ ಹಲವಾರು ಫ್ಯಾಶನ್ ಶೋಗಳನ್ನು ಕಾರ್ಯಕ್ರಮ ಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.

ಇತಿಹಾಸಕ್ಕೊಮ್ಮೆ ಮರಳೋಣ: ಐಶ್ವರ್ಯ ರೈ ಮತ್ತು ಸುಶ್ಮಿತಾ ಸೇನ್ ಮಿಸ್ ವಲ್ರ್ಡ್ ಮತ್ತು ಮಿಸ್ ಯುನಿವರ್ಸ್ ಸ್ಪರ್ಧೆಗಳನ್ನು 1994ರಲ್ಲಿ ಜಯಿಸಿದರು. ಇದು ಭಾರತದಾದ್ಯಂತ ಸೌಂದರ್ಯೋಪಾಸನೆಗಳ ಮಾರಾಟಕ್ಕೆ ದಾರಿ ಮಾಡಿಕೊಟ್ಟಿತು. ಈ ಸೌಂದರ್ಯ ವರ್ಧಕ ಕಂಪೆನಿ ಗಳು ನಮ್ಮ ಬಲವಾದ ಹಿಡಿತವನ್ನು ಭಾರತದ ಮೇಲೆ ಸ್ಥಾಪಿಸಲು 1996ರಲ್ಲಿ ಗೋದ್ರೇಜ್ ಎಂಬ ಕಂಪೆನಿಯ ಪ್ರಾಯೋಜಕತ್ವ ದಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಿತು. ಅಮಿತಾಭ್ ಬಚ್ಚನ್‍ರವರ ಪ್ರಕಾರ ಮಿಸ್‍ವಲ್ರ್ಡ್ ಎಂಬುದು ಒಂದು ಬ್ರಿಟೀಷ್ ಕಂಪೆನಿಯಾಗಿದ್ದು ನಾಲ್ಕು ವರ್ಷಗಳ ಕಾಲ ಸನ್‍ಸಿಟಿಯಲ್ಲಿ ಕಾರ್ಯ ನಿರ್ವಹಿಸಿ ಭಾರತ ಮತ್ತು ಅಮಿತಾಭ್ ಬಚ್ಚನ್ ಕಾರ್ಪೋರೇಶನ್ ಲಿಮಿಟೆಡ್ (ABCL) ಅನ್ನು ಗುರುತಿಸಿತು. ಇದಾದ ಕೆಲವೇ ಕೆಲವು ತಿಂಗಳುಗಳಲ್ಲಿ ಜಗತ್ತಿನಾದ್ಯಂತ ನಡೆದ ಸೌಂದರ್ಯ ಸ್ಪರ್ಧೆಗಳಲ್ಲಿ 1994ರಲ್ಲಿ ಒಂದರ ಹಿಂದೆ ಒಂದು ಬಹುಮಾನಗಳು ಭಾರತಕ್ಕೆ ಲಭಿಸಿದವು. ನಂತರ 1996ರಲ್ಲಿ ಮಿಸ್ ವಲ್ರ್ಡ್ ಸ್ಪರ್ಧೆಗಳನ್ನು ಸ್ವಾಗತಿಸಿ ದವು. ತದ ನಂತರ ಸೌಂದರ್ಯ ಉತ್ಪನ್ನಗಳ ಉದ್ಯಮವು ಭಾರತದಲ್ಲಿ ಕಾಲಿರಿಸಲು ಜಾಗ ಲಭಿಸಿದಂತಾಯಿತಲ್ಲವೇ? ನಾವು ವಿವೇಚಿಸಬೇಕಿದೆ.

ಒಂದೇ ವರ್ಷದಲ್ಲಿ ಲಭಿಸಿದ ಎರಡು ಬಹುಮಾನಗಳು ಭಾರತೀಯ ಜನತೆಯ ಮೇಲೆ ವಿಶೇಷವಾಗಿ ಯುವತಿಯರು ಮತ್ತು ಮಹಿಳೆಯರ ಮಾನಸಿಕ ಮನಸ್ಥಿತಿಯ ಮೇಲೆ ಅಪಾರ ಪರಿ ಣಾಮವನ್ನು ಬೀರಿತು. ಭಾರತೀಯ ಮಹಿಳೆ ಯರನ್ನು ಕೂಡಾ ಜಗತ್ತಿನಲ್ಲಿ ಸುಂದರಿಯರೆಂದು ಪರಿಗಣಿಸಲಾಗುತ್ತದೆ. ಜಗತ್ತಿನಾದ್ಯಂತ ಭಾರತವನ್ನು ಪರಿಗಣಿಸಲಾಗುತ್ತದೆ ಎಂಬ ಮಾನಸಿಕ ಒತ್ತಡವು ಈ ಸೌಂದರ್ಯೋಪಾಸನೆಗಳ ಬೇಡಿಕೆ ಮತ್ತು ಮಾರಾಟಕ್ಕೆ ಮಾರುಕಟ್ಟೆಯನ್ನು ಒದಗಿಸಿತು.

ಇದಾದ 17 ವರ್ಷಗಳ ನಂತರ 2013ರಲ್ಲಿ ಇಂಡೋನೇಷ್ಯಾದಲ್ಲಿ ಇದೇ ರೀತಿಯ ಡೊಂಬ ರಾಟವು ನಡೆಯಿತು. ಇಂಡೋನೇಷ್ಯಾ ದೇಶ ವಾಗಿದ್ದು 249.9 ಮಿಲಿಯನ್ ಜನತೆಯನ್ನು ಹೊಂದಿದೆ. ಅದರಲ್ಲಿ 87.18% ಜನರು ಮುಸ್ಲಿಮ ರಾಗಿದ್ದಾರೆ. ಇಸ್ಲಾಮೀ ಕಾನೂನುಗಳು ಇಂತಹ ಸ್ಪರ್ಧೆಗಳನ್ನು ಪೋಷಿಸುವುದಿಲ್ಲವಾದ್ದರಿಂದ ಅಲ್ಲಿನ ಮಹಿಳೆಯರು ಮಿಸ್ ವಲ್ರ್ಡ್ ಎಂಬ ಕಾರ್ಯಕ್ರಮ ವನ್ನು ಇಂಡೋನೇಷ್ಯಾದಲ್ಲಿ ನಡೆಸದಿರಲು ತೀವ್ರವಾದ ವಿರೋಧವನ್ನು ಸರಕಾರದ ಮೇಲೆ ಹೇರಿದರು. ಇದರಿಂದಾಗಿ ಇಂಡೋನೇಷ್ಯಾ ಸರಕಾರವು ಬಾಲಿಗೆ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿತಲ್ಲದೇ ಸಾಮಾನ್ಯ `ಸ್ವಿಮ್‍ವೇರ್’ ಸ್ಪರ್ಧೆಯನ್ನು ಆಯೋಜಿಸಿತು. ಆದರೆ `ಸ್ವಿಮ್ ವೇರ್’ ಎಂಬ ಈಜು ಉಡುಪುಗಳ ಸ್ಪರ್ಧೆಯಲ್ಲಿ ಚಿಂದಿ ಉಡುಪುಗಳ ಬದಲಾಗಿ ದೇಹದ ಅಂಗಾಂಗಗಳ ಕಡಿಮೆ ಪ್ರದರ್ಶನದ ಉಡುಗೆಗಳ ಸ್ಪರ್ಧೆಗೆ ತನ್ನ ನಿಯಮಗಳನ್ನು ಬದಲಾಯಿಸಿತು. ಈಗ ಈ ಸೌಂದರ್ಯ ವರ್ಧಕ ಉದ್ಯಮಗಳಿಗೆ ಮತ್ತು ಪಾಶ್ಚಾತ್ಯರಿಗೆ ಇಂಡೋನೇಷ್ಯಾದಲ್ಲಿ ಶೃಂಗಾರ ಉತ್ಪನ್ನಗಳನ್ನು ಯಾವ ರೀತಿ ಪ್ರಚುರ ಪಡಿಸ ಬೇಕೆಂಬುದೇ ಒಂದು ಸಮಸ್ಯೆಯಾಗಿ ಉಳಿದು ಬಿಟ್ಟಿದೆ.

ಈ ಉದ್ಯಮವು ಹಲವಾರು ದುಷ್ಪರಿಣಾಮ ಗಳನ್ನು ಕೂಡಾ ಒಳಗೊಂಡಿದೆ. ಈ ಉದ್ಯಮಗಳ ಹೆಚ್ಚಳಕ್ಕೆ ಪ್ರಮುಖವಾಗಿ ಬಾಲಿವುಡ್ ಚಿತ್ರ ನಟ ರನ್ನು ಜಾಹೀರಾತು ಮತ್ತು ವೀಡಿಯೊ ಚಿತ್ರೀಕರಣ ಗಳಲ್ಲಿ ಬಳಸಲಾಗುತ್ತಿದ್ದು ಈ ಉತ್ಪನ್ನಗಳ ಹೆಚ್ಚ ಳಕ್ಕೆ ಪ್ರಚಲಿತತೆಗೆ ದಾರಿಯಾಗಿವೆ. ಸಾಧಾರಣವಾಗಿ ಮಹಿಳೆಯರು ಮ್ಯಾಗಝಿನ್‍ಗಳನ್ನು ಮತ್ತು ಜಾಹೀರಾತುಗಳನ್ನು ಕಂಡು ಮೈಮರೆತು ಅವರಂತೆ ಸೌಂದರ್ಯ ಹೊಂದಲು ಮತ್ತು ಚೆನ್ನಾಗಿ ಕಾಣಲು ಪ್ರಯತ್ನಿಸುತ್ತಾರೆ. ಆದರೆ ಈ ಉತ್ಪನ್ನ ಗಳು ಯಾವುದೇ ರೀತಿಯ ಪ್ರಭಾವ ವನ್ನು ಬೀರದಿರುವುದನ್ನು ಮನವರಿಕೆ ಮಾಡಿಕೊಂಡಾಗ ಫೋಟೋ ಶಾಪ್ ಎಂಬ ವಿಚಿತ್ರ ಲೋಕದ ಚಿತ್ರಣದಿಂದ ತಲ್ಲಣರಾಗಿ ಬಿಡುತ್ತಾರೆ. ಈ ವಿಧಾನದಿಂದಾಗಿ “ನಾವಿಂತಹ ಮೇಕಪ್ ಮಾಡಿ ಕೊಂಡರೇನೇ ಚೆನ್ನಾಗಿ ಕಾಣುತ್ತೇವೆ.” ಎಂಬ ಮಾನಸಿಕ ಒತ್ತಡವನ್ನು ಮಹಿಳೆಯರು ತಮ್ಮ ಮನಸ್ಸಿನ ಮೇಲೆ ಹೇರಿ ಬಿಡುತ್ತಾರೆ.

ಆದರೆ ಇಂತಹ ಜಾಹೀರಾತುಗಳನ್ನು ನೋಡುವ ಅವಿವಾಹಿತ ಪುರುಷರು ತಮ್ಮ ಕನಸಿನ ಕನ್ಯೆಯನ್ನು ಅದರಂತೆಯೇ ಊಹಿಸಿಕೊಳ್ಳು ತ್ತಾರೆ. ಇಲ್ಲದಿರುವ ರೂಪ ಲಾವಣ್ಯವನ್ನು ವ್ಯಾಮೋಹಿಸಿ ಅಂತಹ ಯುವತಿ ತಮಗೆ ಲಭಿಸುವುದಿಲ್ಲವೆಂದರಿತಾಗ ನಿರಾಶೆಗೊಳಗಾಗುತ್ತಾರೆ. ಆದರೆ ಕಹಿ ಸತ್ಯವೇನೆಂದರೆ ಹಲವಾರು ಸಾಫ್ಟ್ ವೇರ್‍ಗಳ, ವಿನ್ಯಾಸಗಾರರ ಕೈಚಳಕದಿಂದ ಸ್ತ್ರೀ ಯರನ್ನು ಆ ರೀತಿ ಜಾಹೀರಾತುಗಳಲ್ಲಿ ಪ್ರದರ್ಶಿಸ ಲಾಗುತ್ತಿದ್ದು ಅಂತಹ ಸುಂದರಿಯು ಇಲ್ಲವೆಂಬುದೇ ವಾಸ್ತವ. ಉತ್ಪನ್ನಗಳ ಮಾರಾಟಕ್ಕಾಗಿ ನೈಜ ಸೌಂದರ್ಯವನ್ನು ಮರೆ ಮಾಚಿ ಮೇಕಪ್‍ನ ಮುಖವಾಡವನ್ನು ಹಚ್ಚಲಾಗುತ್ತದೆ. ಕೇವಲ ಅವುಗಳ ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಈ ರೀತಿ ಮಾಡಲಾಗುತ್ತದೆಂಬುದು ವಾಸ್ತವ.

ಶೃಂಗಾರ ಸಾಧನಗಳು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದವು. ಆದರೆ ಭಾರತೀಯ ಶೃಂಗಾರ ಉತ್ಪಾದನಾ ಉದ್ಯಮವಾದ ಇಮಾಮಿ (Emami) 2005ರಲ್ಲಿ ಮೊದಲ ಬಾರಿಗೆ ಪುರುಷರಿಗೆ ಚರ್ಮ ಬಿಳುಪಾಗಿಸುವ ಸೌಂದರ್ಯ ವರ್ಧಕ ಕ್ರೀಮ್ ಅನ್ನು ಬಾಲಿ ವುಡ್ ಚಿತ್ರನಟನಾದ ಶಾರೂಕ್ ಖಾನ್‍ರವರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡುವ ಮೂಲಕ `Fair & Handsome’` ಎಂಬ ಜಾಹೀರಾತಿನ ಮೂಲಕ ಮಳಿಗೆ ತೆರೆಯಿತು. ಮಹಿಳೆಯರ ಸೌಂದರ್ಯ ವರ್ಧಕ ಕ್ರೀಮ್ ಬಂದು 27 ವರ್ಷಗಳ ನಂತರ ಮಾರು ಕಟ್ಟೆಗೆ ತಲುಪಿದ ಮೊದಲ ಪುರುಷರ ಸೌಂದರ್ಯ ವರ್ಧಕವೆಂಬ ಹೆಗ್ಗಳಿಕೆಯನ್ನು ಇದು ಪಡೆಯಿತು. ಇಮಾಮಿ ಕ್ರೀಮ್ ಮಾತ್ರವಲ್ಲ ಶೇವಿಂಗ್ ಕ್ರೀಮ್ ಮತ್ತು ಫೇಸ್ ಕ್ರೀಮ್‍ಗಳನ್ನು ಕೂಡಾ ಅದು ಬಿಡುಗಡೆ ಗೊಳಿಸಿತು. ಇದಾದ ಐದೇ ಐದು ವರ್ಷಗಳಲ್ಲಿ ‘Fair & Handsome’` 100 ಕೋಟಿಯ ಬ್ರ್ಯಾಂಡ್ ಮತ್ತು 45% ಬೆಳವಣಿಗೆಯೊಂದಿಗೆ ವಾರ್ಷಿಕ 15% ಆದಾಯವನ್ನು ನೀಡಿತು. ಇದಾದ ನಂತರ ಪುರುಷರಿಗೆ ಹಲವಾರು ಸೌಂದರ್ಯವರ್ಧಕ ಕ್ರೀಮ್‍ಗಳನ್ನು ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಮೂಲಕ ಪುರುಷರ ಸೌಂದರ್ಯ ಕಲ್ಪನೆಯನ್ನು ಜನರ ಮನಸ್ಸಿನಲ್ಲಿ ಬಿತ್ತರಿಸಿತು. ಇದರ ಫಲಿತಾಂಶದಂತೆ ಪುರುಷರ ಸೌಂದರ್ಯ ವರ್ಧಕ ಉತ್ಪನ್ನಗಳ ಪ್ರಮಾಣವು 2006 ಮತ್ತು 2011 ನಡುವೆ 18% ಜಾಗತಿಕ ಬೆಳವಣಿಗೆ ಹೊಂದುತ್ತದೆಂದು ಅಂದಾಜಿಸಲಾಯಿತು. ಮೊದಲು ಸ್ತ್ರೀಯರಿಗೆ ಮಾತ್ರವಿದ್ದ ಈ ಸೌಂದರ್ಯ ಕಲ್ಪನೆಯು ನಂತರ ಪುರುಷರ ಮನ ಮಸ್ತಿಷ್ಕಗಳನ್ನು ವಕ್ಕರಿಸಿಕೊಂಡು ಬಿಟ್ಟಿತು.

ಈ ಸೌಂದರ್ಯಸಾಧ್ಯಗಳಿಂದ ಗಳಿಸುವ ಆದಾಯವನ್ನು ಹೆಚ್ಚಿಸಲು ಅತೀ ಸಣ್ಣ ಉತ್ಪನ್ನ ಗಳನ್ನು ಕೂಡಾ ಉತ್ಪಾದಿಸಲು ಅವು ಟೊಂಕಕಟ್ಟಿ ಕೊಂಡವು. ಇದರಂತೆಯೇ ದೇಹದ ವಿವಿಧ ಭಾಗಗಳಿಗೆ ಹಲವಾರು ಪೂರಕವಾದ ಉತ್ಪನ್ನ ಗಳನ್ನು ಮಾರುಕಟ್ಟೆಗೆ ತರಲಾಯಿತು.
Skincare Cream, lotions, powders, perfumes, lipsticks, lip gloss, lip liner, lip plumper, lip balm, lip conditioner, nail polish, toe nail polish, hair colour, hair gel, hair sprays, deodorants, hand, sanitizes, eye liner, eye brow pencil, waxes, settling spray, false eyelashes, contact lensesಗಳನ್ನು ತಯಾರಿ ಸುತ್ತಿರುವ ಕಂಪೆನಿಗಳು ಕೂಡಾ ಇದರಿಂದ ಹೊರತಾಗಿಲ್ಲ.

ಆದರೆ Advertising Standards Council of India (ASCI)ಪ್ರಕಾರ ಯಾವುದೇ ಜಾಹೀರಾತುಗಳು ಜನಾಂಗ, ಜಾತಿ, ಬಣ್ಣ ಅಥವಾ ರಾಷ್ಟ್ರೀಯತೆಯನ್ನು ತಾರತಮ್ಯ ನೀತಿಗೆ ಒಳಪಡಿಸುವಂತಿಲ್ಲ” ಎಂದಾಗಿದೆ. ಆದರೆ ಒಂದು ರೀತಿ ನೋಡಲಾಗದಂತಹ ಅಸಹ್ಯಕರ ರೀತಿಯಲ್ಲಿ ಕಪ್ಪು ಬಣ್ಣದ ಚರ್ಮವನ್ನು ಚಿತ್ರಿಸ ಲಾಗುತ್ತಿದ್ದು ಫೇರ್‍ನೆಸ್ ಕ್ರೀಮ್‍ಗಳ ವ್ಯಾಪಕತೆ ಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ.

ಫೇರ್‍ನೆಸ್ ಕ್ರೀಮ್ ಮತ್ತು ಚರ್ಮ ಬಿಳುಪಾಗಿಸುವ ಉತ್ಪನ್ನಗಳನ್ನು ಉತ್ಪಾದಿಸಲು ಬಯಸುವ ಕಂಪೆನಿಗಳು, ಉದ್ಯಮಗಳು ಈ ನಾಲ್ಕು (4) ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಂಸ್ಥೆಯು 2014ರ ಜೂನ್‍ನಲ್ಲಿ ಆದೇಶಿಸಿತು. ಅವುಗಳೆಂದರೆ,

1) ಜಾಹೀರಾತುಗಳು ಚರ್ಮದ ಬಣ್ಣದ ತಾರ ತಮ್ಯವನ್ನು ಪ್ರದರ್ಶಿಸುವಂತಹುಗಳಾಗಿರಬಾರದು.

2) ಜಾಹೀರಾತುಗಳಲ್ಲಿ ತಮ್ಮ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ಉತ್ಪ್ರೇಕ್ಷಿತವಾದ ಮತ್ತು ಪರಿಣಾಮಕಾರಿಯಾಗಿಸಲು ಮಾದರಿಗಳ ಮೇಲೆ ದೃಶ್ಯ ಪರಿಣಾಮವನ್ನು ಬಳಸಬಾರದು.

3) ಜಾಹೀರಾತುಗಳು ಕಪ್ಪು ಬಿಳುಪು ಅಥವಾ ಯಾವುದೇ ಸಾಮಾಜಿಕ ಆರ್ಥಿಕ ಅಂತಸ್ತು, ಜಾತಿ, ಸಮುದಾಯ, ಧರ್ಮ, ವೃತ್ತಿ ಅಥವಾ ಪ್ರವೃತ್ತಿಗಳಲ್ಲಿ ಭೇದವನ್ನುಂಟು ಮಾಡುವಂತಹದ್ದಾಗಿರಬಾರದು.

4) ಜಾಹೀರಾತುಗಳು ಚರ್ಮದ ಬಣ್ಣದ ಆಧಾರದ ಮೇಲೆ ಲಿಂಗ ತಾರತಮ್ಯವನ್ನು ವ್ಯಾಪಕ ಪಡಿಸುವಂತಹದ್ದಾಗಿರಬಾರದು. ಆದರೆ ಇವುಗಳನ್ನು ಸರಿಯಾಗಿ ಪಾಲಿಸಲು ಅಥವಾ ಕಠಿಣವಾಗಿ ಜಾರಿಗೆ ತರಲು ಯಾವುದೇ ನಿಯಮಗಳಿಲ್ಲ.
ಹಾಗಾಗಿ ಇವುಗಳನ್ನು ಕಡೆ ಗಣಿಸಿಯೇ ಇಂದು ಉತ್ಪನ್ನಗಳು ನಡೆಯುತ್ತಿರುವುದು ಕಟು ಸತ್ಯ.

ತಾಂತ್ರಿಕ ಪ್ರಗತಿಯ ಹೆಸರಲ್ಲಿ ಇಂದು ಈ ಸೌಂದರ್ಯ ವರ್ಧಕಗಳ ಪ್ರಭಾವವಿರಬಹುದು. ಆದರೆ ಇವುಗಳಿಗೂ ಕೂಡಾ ವೈಜ್ಞಾನಿಕವಾದ ನೀತಿ ನಿಯಮಾವಳಿಗೆ ಬದ್ಧವಾಗಿರಬೇಕು. ಆದರೆ ಇವತ್ತು ಇವುಗಳಿಂದಾಗುತ್ತಿರುವ ಶೋಷಣೆಯೇ ಅಧಿಕವಾಗಿದೆ.

ಈ ಸೌಂದರ್ಯವರ್ಧಕ ಕಂಪೆನಿಗಳು ಸರಕಾರಕ್ಕೆ ಆದಾಯವನ್ನು, ನಿರುದ್ಯೋಗಿಗಳಿಗೆ ಉದ್ಯೋಗವನ್ನು ನೀಡುತ್ತಿರಬಹುದು. ಆದರೆ ರಾಷ್ಟ್ರದ ಜನರ ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಿದ್ದು ಕೌಟುಂಬಿಕವಾಗಿಯೂ ಇವುಗಳ ಮೇಲಿನ ಸಮಯಾವಲಂಬನೆಯು ಹೆಚ್ಚುತ್ತಲೇ ಇದೆ. ಇಂದು ಹುಡುಗಿಯರು ಸೌಂದರ್ಯ ಉತ್ಪನ್ನಗಳ ಒಂದು ಭಾಗವಾಗಿಯೇ ಮಾರ್ಪಟ್ಟಿದ್ದು ಮೇಕಪ್ ಇಲ್ಲದೇ ಮನೆಯಿಂದ ಹೊರಗಿಳಿಯಲು ಒಂದೆರಡು ಬಾರಿಯಾದರೂ ಯೋಚಿಸಬೇಕಾಗು ತ್ತದೆ. ಗಂಟೆಗಟ್ಟಲೆ ಸಮಯವನ್ನು ಇವುಗಳ ನಿರ್ವಹಣೆಗೆ, ಲೇಪನಕ್ಕೆ ಅಳವಡಿಸಬೇಕಾಗುತ್ತಿದೆ. ಆದರೆ ಮುಖವನ್ನೊಮ್ಮೆ ತೊಳೆದಾಗ ಮಾಯವಾಗಿ ಬಿಡುವ ಈ ಅಲ್ಪಕಾಲಿಕ ಸೌಂದರ್ಯವನ್ನು ಬದಿಗಿರಿಸಿ ನೈಜ ಸೌಂದರ್ಯವನ್ನು ಆನಂದಿಸಿ ಶಾಂತಿಯುತ ಜೀವನ ನಡೆಸಬೇಕಾದ ಅಗತ್ಯತೆ ಇದೆ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ.

 ಸೈಯದ್ ಕಾಝಿಮ್