ಸಿರಿಯದಲ್ಲಿ ಟರ್ಕಿಯ ಬಾಂಬ್ ದಾಳಿ; 15 ಮಂದಿ ಮೃತ್ಯು

0
663

ಸನ್ಮಾರ್ಗ ವಾರ್ತೆ

ರಾಸ್‌ಅಲ್ ಐನ್,ಅ.9: ಸಿರಿಯದ ಕುರ್ದಿಶ್ ಪ್ರದೇಶದಲ್ಲಿ ಟರ್ಕಿಯು ಬಾಂಬ್ ದಾಳಿ ನಡೆಸಿದ್ದು ಹದಿನೈದು ಮೃತಪಟ್ಟಿದ್ದಾರೆ. ನಲ್ವತ್ತರಷ್ಟು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಎಂಟು ಮಂದಿ ಈಶಾನ್ಯ ಸಿರಿಯದ ಕುರ್ದಿಗಳ ನಿಯಂತ್ರಣದಲ್ಲಿರುವ ಪ್ರದೇಶದ ಪ್ರಜೆಗಳು. ಪಿರಂಗಿ ದಾಳಿಯಲ್ಲಿ ಕ್ವಾಮಿಶ್ಲಿ ನಗರದಲ್ಲಿ ಇಬ್ಬರು ನಾಗರಿಕರು ಕೊಲೆಯಾಗಿದ್ದಾರೆ ಎಂದು ಸಿರಿಯದ ಆ ಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ತಿಳಿಸಿದೆ ಎಂದು ಎಎಫ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟರ್ಕಿ-ಸಿರಿಯದ ಗಡಿ ಪ್ರದೇಶದಲ್ಲಿ ಯುದ್ಧ ವಿಮಾನ ಪಿರಂಗಿಗಳಿಂದ ಟರ್ಕಿ ದಾಳಿ ನಡೆಸಿದೆ. ಸಾವಿರಾರು ಮಂದಿ ಸಿರಿಯದ ಡೆಮಕ್ರಾಟಿಕ್ ಸೈನ್ಯದ ಅಧೀನದಲ್ಲಿರುವ ಸಿರಿಯದ ನಗರ ರಾಸ್ ಅಲ್ ಐನ್‍ನಿಂದ ಪಲಾಯನ ಮಾಡಿದ್ದಾರೆ. ಟರ್ಕಿಯ ದಕ್ಷಿಣ ಗಡಿಯ ಪ್ರದೇಶಗಳು ಕುರ್ದ್ ಪ್ರಭಾವಿ ಪ್ರದೇಶವಾಗಿದ್ದು ಭಯೋತ್ಪಾದಕರ ರಹದಾರಿ ಎಂದು ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಹೇಳುತ್ತಿದ್ದರು. ಈ ಪ್ರದೇಶವನ್ನು ಸಂಪೂರ್ಣ ನಿರ್ಮೂಲಿಸುವ ಗುರಿಯನ್ನು ಅವರು ಈಗಾಗಲೇ ಘೋಷಿಸಿದ್ದಾರೆ.