ಸೌದಿ: ಡ್ರಗ್ಸ್ ಮಾರಾಟ ನಿರತ 16 ಮಂದಿಯ ತಂಡ ಸೆರೆ

0
473

ಸನ್ಮಾರ್ಗ ವಾರ್ತೆ

ರಿಯಾದ್: ಜಿದ್ದ ಮತ್ತು ರಿಯಾದ್‍ನಲ್ಲಿ  ಹದಿನಾರು ಮಂದಿಯಿದ್ದ ತಂಡವನ್ನು ಡ್ರಗ್ ಸಾಗಾಟ, ವಿತರಣೆಗೆ ಯತ್ನಿಸುವ ವೇಳೆ ಸೌದಿ ಅರೇಬಿಯದ ನಾರ್ಕೊಟಿಕ್ಸ್ ಕಂಟ್ರೋಲ್ ಡೈರಕ್ಟರೇಟ್ ಬಂಧಿಸಿದೆ. ತಂಡದಲ್ಲಿದ್ದವರಲ್ಲಿ ಕೊಕೈಯಿನ್‍ನ 1,89,33,823 ಮಾತ್ರೆಗಳು ಇದ್ದವು. ಆರೋಪಿಗಳಲ್ಲಿ ಹತ್ತು ಮಂದಿ ಸೌದಿ ಅರೇಬಿಯದ ಪ್ರಜೆಗಳು ಹಾಗೂ ಆರು ಮಂದಿ ವಿದೇಶಿಯರೆಂದು ಡೈರಕ್ಟರೇಟ್ ವಕ್ತಾರ ಕ್ಯಾಪ್ಟನ್ ಮುಹಮ್ಮದ್ ಅಲ್‍ಜನ್ದಿ ತಿಳಿಸಿದರು.

ಆರೋಪಿಗಳನ್ನು ಬೆನ್ನಟ್ಟಿ ತಂಡದ ಶೃಂಖಲೆಯನ್ನೇ ಸೆರೆಹಿಡಿಯಲಾಯಿತು. ಡ್ರಗ್ಸ್ ಸಾಗಾಟ ಮತ್ತು ಮಾರಾಟಕ್ಕೆ ಉಪಯೋಗಿಸಿದ ದಾರಿಗಳನ್ನು ಕೂಡ ಪತ್ತೆ ಹಚ್ಚಲಾಗಿದೆ. ರಿಯಾದಿನಲ್ಲಿ ಡ್ರಗ್ಸ್ ತಂಡದ ಐದು ಮಂದಿ ಸೌದಿ ಪ್ರಜೆಗಳು ಸಿಕ್ಕಿಬಿದ್ದಿದ್ದರು. ಇವರಿಂದ 98,78,500 ಉತ್ತೇಜಕ ಮಾತ್ರೆಗಳು ಸಿಕ್ಕಿವೆ.

ಇತರ ಹತ್ತು ಮಂದಿಯನ್ನು ಜಿದ್ದದಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ಬಟ್ಟೆಗಳ ಒಂದು ಶಿಪ್‍ಮೆಂಟಿನಲ್ಲಿ ಅಡಗಿಸಿಟ್ಟಿದ್ದ 58,27,000 ಮಾದಕ ಮಾತ್ರೆಗಳು ವಶವಾಗಿವೆ. ಇನ್ನೊಂದು ದಾಳಿಯಲ್ಲಿ ಓರ್ವ ವಿದೇಶಿ ಸೆರೆಸಿಕ್ಕಿದ್ದಾನೆ. ಈತ ಜೋರ್ಡಾನ್ ಗಡಿಯಲ್ಲಿರುವ ಅಲ್‍ ಹದೀದ ಮರಗೆಣಸಿನ ಶಿಪ್‍ಮೆಂಟಿನೊಳಗೆ 32,28,323 ಮಾತ್ರೆಗಳನ್ನು ಅಡಗಿಸಿಟ್ಟಿದ್ದ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ವ್ಯಕ್ತಿ ವಿದೇಶಿ ಪ್ರಜೆಯಾಗಿದ್ದಾನೆ.