ಬ್ಯಾರಿ ಅಕಾಡಮಿ, ಬ್ಯಾರಿ ಅಧ್ಯಯನ ಪೀಠದ ಸ್ಥಾಪನೆಗೆ ದಿ. ರಹೀಮ್‌ ಟೀಕೆಯವರ ಶ್ರಮ ಅಪಾರವಾದುದು- ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಸಂತಾಪ ಸೂಚಕ ಸಭೆ

0
1306

ಮಂಗಳೂರು ಫೆ.16: ಕವಿ, ಸಾಹಿತಿ, ಬ್ಯಾರಿ ಆಂದೋಲನದ ರೂವಾರಿ ದಿವಂಗತ ರಹೀಮ್ ಟೀಕೆಯವರಿಗೆ ಮಂಗಳೂರಿನ ಬಿ ಎಚ್ ಬಂಗೇರ ಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಸಂತಾಪಕ ಸೂಚಕ ಸಭೆಯು ಇಂದು ನಡೆಯಿತು. ಸಭೆಯಲ್ಲಿ ಮಜೀದ್ ಸೂರಲ್ಪಾಡಿ, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಕರಂಬಾರು ಮುಹಮ್ಮದ್, ಜಿ ಎ ಬಾವ, ಮುಹಮ್ಮದಲಿ ಉಚ್ಚಿಲ್, ಅಬ್ದುಲ್ಲ ಮದುಮೂಲೆ, ಶರೀಫ್ ಟೀಕೆಯವರು ದಿವಂಗತ ರಹೀಮ್ ಟೀಕೆಯವರನ್ನು ಸ್ಮರಿಸಿದರು.

ಅಹ್ಮದ್ ಬಾವರವರು ರಹೀಮ್ ಟೀಕೆಯವರ ಕುರಿತು ಮಾತನಾಡುತ್ತಾ “ಅವರನ್ನು ಈ ಸಮಾಜಕ್ಕೆ ಪರಿಚಯಿಸುವ ಪುಸ್ತಕ ಬರಬೇಕಿದೆ. ಬ್ಯಾರಿ ಅಕಾಡಮಿ, ಬ್ಯಾರಿ ಅಧ್ಯಯನ ಪೀಠದ ಸ್ಥಾಪನೆಗೆ ಅವರ ಶ್ರಮ ಅಪಾರವಾದುದು” ಎಂದರು. ಉಮರ್ ಟೀಕೆ ತನ್ನ ಅಣ್ಣನನ್ನು ಸ್ಮರಿಸುತ್ತಾ, ನಾನು ಯಾವುದೇ ಸಭೆಗೆ ಹೋಗುವ ಮೊದಲು ರಹೀಮ್ ನೊಂದಿಗೆ ವಿಚಾರ ವಿನಿಮಯ ಮಾಡುತ್ತಿದ್ದೆ. ಸಭೆ ಮುಗಿದ ಬಳಿಕ ನಾನು ಅಣ್ಣನೊಂದಿಗೆ ಸಮಾಲೋಚಿಸುತ್ತಿದ್ದೆ ಆದರೆ ಇನ್ನು ಮುಂದೆ ನಾನು ಯಾರೊಂದಿಗೆ ವಿಚಾರ ವಿನಿಮಯ ಮಾಡಲಿ ಎಂದು ದುಃಖಿಸಿದರು.

ಸಲ್ಮಾ ಬಾವ ಫೌಂಡೇಶನ್ ನ ಮೂಲಕ ಅವರು ಮಾಡಿರುವ ಸೇವೆಯನ್ನು ಸ್ಮರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಸ್ಮರಿಸುತ್ತಾ, ಅವರು ದೊಡ್ಡ ವಿಷನ್ ಇದ್ದ ವ್ಯಕ್ತಿಯಾಗಿದ್ದರು. ಮುಸ್ಲಿಂ ಸಮುದಾಯದ ಬಗ್ಗೆ, ಮುಸ್ಲಿಮರ ಸಬಲೀಕರಣದ ಬಗ್ಗೆ ತನ್ನದೇ ಆದ ಆಲೋಚನೆಯನ್ನು ಹೊಂದಿದ್ದರು. ಎಲ್ಲ ಧರ್ಮೀಯರನ್ನು ಜೊತೆ ಸೇರಿಸಿಕೊಂಡು ಹೋಗುವ ವ್ಯಕ್ತಿತ್ವ ಅವರದು. ಅವರ ಮೌಲ್ಯವನ್ನು ನಾವೆಲ್ಲ ಅಳವಡಿಸಿಕೊಳ್ಳೋಣ ಎಂದರು. ಹುಸೈನ್ ಕಾಟಿಪಳ್ಳ ನಿರೂಪಿಸಿದರು. ಮಕ್ಕಳಾದ ರಾಹಿಲ್ ಮತ್ತು ಹಸೀಬ್ ಉಪಸ್ಥಿತರಿದ್ದರು .