ತಂದೆಯನ್ನು ಕೊಂದು ಟಿವಿ ಸೀರಿಯಲ್‍ನಂತೆ ಸಾಕ್ಷ್ಯ ನಾಶಕ್ಕೆ ಯತ್ನಿಸಿದ 17ರ ಬಾಲಕ

0
510

ಸನ್ಮಾರ್ಗ ವಾರ್ತೆ

ಮಥುರ,ಅ.30: ತಂದೆಯನ್ನು ಕೊಂದು ಹದಿನೇಳು ವರ್ಷದ ಹುಡುಗ ಟಿವಿ ಸೀರಿಯಲ್‍ನಲ್ಲಿ ಮಾಡಿದಂತೆ ಸಾಕ್ಷ್ಯ ನಾಶಕ್ಕೆ ಶ್ರಮಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಬಂಧಿಸಲಾದ 12 ನೇ ತರಗತಿಯ ವಿದ್ಯಾರ್ಥಿಯ ಮೊಬೈಲ್ ನೋಡಿದಾಗ ಅದರಲ್ಲಿ ಬೆಚ್ಚುಬೀಳಿಸುವ ಮಾಹಿತ ಪೊಲೀಸರಿಗೆ ಸಿಕ್ಕಿದೆ ಮತ್ತು ಟಿವಿ ಸೀರಿಯಲ್ ಒಂದನ್ನು ವಿದ್ಯಾರ್ಥಿ 100 ಬಾರಿ ನೋಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮೇ 2ರಂದು ಉತ್ತರ ಪ್ರದೇಶದ ಮಥುರದಲ್ಲಿ ಮನೋಜ್ ಮಿಶ್ರ(42)ರನ್ನು ಅವರ ಮಗ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಕೊಂದಿದ್ದ. ಪೆಟ್ಟಿನ ಆಘಾತದಿಂದ ಪ್ರಜ್ಞೆ ಕಳಕೊಂಡ ಮಿಶ್ರರ ಕೊರಳಿಗೆ ಬಟ್ಟೆಬಿಗಿದು ಸತ್ತಿರುವುದನ್ನು ಖಚಿತಪಡಿಸಿಕೊಂಡ ಮೇಲೆ ಅಂದು ರಾತ್ರೆಯೇ ತಾಯಿಯ ಸಹಕಾರದಿಂದ ಮೃತದೇಹವವನ್ನು ಐದು ಕಿಲೊ ಮೀಟರ್ ದೂರದ ಕಾಡಿಗೆ ಕೊಂಡು ಹೋಗಿ ಅಲ್ಲಿ ಟಾಯ್ಲೆಟ್ ಕ್ಲೀನರ್ ಮತ್ತು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ಭಾಗಶಃ ಸುಟ್ಟ ಗಾಯಗಳಿದ್ದ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದರು.
ಮೃತದೇಹ ಪತ್ತೆಯಾಗಿ ಮೂರು ವಾರ ಆಗಿಯೂ ಯಾವುದೇ ದೂರು ಪೊಲೀಸರಿಗೆ ಸಿಕ್ಕಿರಲಿಲ್ಲ. ಆದರೆ, ಮನೋಜ್ ಮಿಶ್ರರ ಹಣ ಸಂಗ್ರಹ ಕೆಲಸ ಮಾಡುತ್ತಿದ್ದ ಇಸ್ಕೋನ್ ಎಂಬ ಸಂಸ್ಥೆಯ ಸಹೋದ್ಯೋಗಿಗಳ ಒತ್ತಡಕ್ಕೆ ಮೇ27ಕ್ಕೆ ಪೊಲೀಸರಿಗೆ ದೂರು ನೀಡಿದರು.

ಮಿಶ್ರರ ಕನ್ನಡಕವನ್ನು ಪರಿಶೀಲಿಸಿದ ಸಹೋದ್ಯೋಗಿಗಳು ಮೃತದೇಹ ಅವರದೇ ಎಂದು ಗುರುತಿಸಿದರು. ಭಗವದ್ಗೀತೆ ಪ್ರವಚನಕ್ಕೆ ಹೋಗುವ ಮಿಶ್ರಾ ಇಲ್ಲದ್ದರಿಂದ ಸಂದೇಹ ಉಂಟಾಗಲಿಲ್ಲ ಎಂದು ಸಹೋದ್ಯೋಗಿಗಳು ಹೇಳಿಕೆ ನೀಡಿದ್ದರು.

ಸಂದೇಹದ ಆಧಾರದಲ್ಲಿ ಮಿಶ್ರರ ಮಗನನ್ನು ಪ್ರಶ್ನಿಸಿದಾಗ ಕೊಲೆಯ ಉರುಳು ಬಿಚ್ಚಿಕೊಂಡಿತು. ವಿದ್ಯಾರ್ಥಿ ಮತ್ತು ತಾಯಿ ಸಂಗೀತಾ ಮಿಶ್ರರನ್ನು(39) ಕೊಲೆ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮನೋಜ್ ಸಂಗೀತ ದಂಪತಿಯ ಹನ್ನೊಂದು ವರ್ಷದ ಪುತ್ರಿಯನ್ನು ಅಜ್ಜ-ಅಜ್ಜಿಯ ಬಳಿ ಕಳುಹಿಸಿಕೊಡಲಾಗಿದೆ.