2ಜಿ ಖುಲಾಸೆ: ಬಿಜೆಪಿಯ ಪಾತ್ರವೇನು?

0
465

@ ಸಲೀಮ್ ಬೋಳಂಗಡಿ
ಭಾರತವು ಸ್ವತಂತ್ರಗೊಂಡ ಬಳಿಕದ ಅತೀದೊಡ್ಡ ಹಗರಣ ಎಂದೇ ವಿಶ್ಲೇಷಿಸಲಾದ 2ಜಿ ತರಂಗಾಂತರ ಹಂಚಿಕೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಸಿಬಿಐಯ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ. ದೇಶದ ಇತಿಹಾಸದಲ್ಲಿಅಲ್ಲೋಲಕಲ್ಲೋಲ ಸೃಷ್ಟಿಸಿದ ಈ ಪ್ರಕರಣದ ತೀರ್ಪು ಕಾಂಗ್ರೆಸ್ ಮತ್ತು ಡಿಎಂಕೆಗೆ ತಾತ್ಕಾಲಿಕ ನೆಮ್ಮದಿ ನೀಡಿದೆ. ಈ ಹಗರಣವು ಮನ್‍ಮೋಹನ್ ಸಿಂಗ್‍ರ ನೇತೃತ್ವದ ಯುಪಿಎ ಸರಕಾರದ ಉರುಳಿವಿಕೆಗೆ ಪ್ರಧಾನ ಆಯುಧವಾಗಿ ಬಿಜೆಪಿ ಬಳಸಿಕೊಂಡಿತ್ತು. ಈ ಬ್ರಹ್ಮಾಂಡ ಭ್ರಷ್ಟಾ ಚಾರದ ವಿರುದ್ಧ ಅಂದು ಅಣ್ಣಾ ಹಜಾರೆ ನೇತೃತ್ವದಲ್ಲಿ ಜನ ಬೀದಿಗಿಳಿದಿದ್ದನ್ನು ಸ್ಮರಿಸಬಹುದು. ಅದು ಎಂತಹ ಪ್ರಭಾವ ಬೀರಿ ತೆಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 44 ಸ್ಥಾನ ಮಾತ್ರ ಗಳಿಸಿ ಪಾತಾಳಕ್ಕಿಳಿಯಿತು. ಹೀಗೆ ನರೇಂದ್ರ ಮೋದಿಯವರು ಭ್ರಷ್ಟಾಚಾರ ಮುಕ್ತ ಭಾರತ ಮಾಡುವುದಾಗಿ ಘೋಷಿಸಿ ಅಧಿಕಾರಕ್ಕೇರಿದರು. ಜಾಗತಿಕವಾಗಿ ಭಾರತದ ಪ್ರತಿಷ್ಠೆಗೂ ಈ ಹಗರಣ ದಕ್ಕೆ ತಂದಿತ್ತು.
ಬಿಜೆಪಿಯು ಅಧಿಕಾರಕ್ಕೇರುವ ಮುನ್ನ ಈ ಹಗರಣದ ರೂವಾರಿಗಳನ್ನು ಶಿಕ್ಷೆಗೊಳಪಡಿಸಲು ಇದ್ದ ರಣೋತ್ಸಾಹ ಈಗಿಲ್ಲ. ಅಂದರೆ ಅದಿಕಾರಕ್ಕೇರಿದ ಬಳಿಕ ಈ ಹಗರಣದ ಕುರಿತು ಅದು ತಾತ್ಸಾರ ಮನೋಭಾವವನ್ನು ಪ್ರದರ್ಶಿಸಿತು. ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಈ ಆರೋಪದಿಂದ ಮುಕ್ತವಾಗಲು ಸಹಾಯಕವಾಯಿತು ಎಂಬುದು ವಾಸ್ತವವಾಗಿದೆ. ತರಂಗಾಂತರಗಳನ್ನು ಹರಾಜು ಹಾಕಿದ ಪರಿಣಾಮವಾಗಿ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ನಷ್ಟವಾಗಿದೆ ಎಂದು ಹೇಳಲಾಗಿತ್ತು. ಆದ್ದರಿಂದ ಇಂತಹ ಬೃಹತ್ ಹಗರಣದ ಆರೋಪಿಗಳು ಇಷ್ಟು ಸಲೀಸಾಗಿ ಹೊರಬಂದಿರುವ ಕಾರಣವನ್ನು ನಾವು ಅವಲೋಕಿಸಬೇಕಾಗಿ ಬಂದಿದೆ. ಯಾಕೆಂದರೆ ಈ ಹಗರಣದಲ್ಲಿ ರಾಜಾ ಹಾಗೂ ಕನಿಮೋಳಿಯ ಹೆಸರು ಪ್ರಸ್ತಾಪವಾಗುತ್ತಿದ್ದರೂ ಟಾಟಾ, ರಿಲಯನ್ಸ್, ಎಸ್.ಆರ್. ಮುಂತಾದ ಕಾರ್ಪರೇಟ್ ದಿಗ್ಗಜರು ಆರೋಪಿ ಸ್ಥಾನದಲ್ಲಿದ್ದರು. ಇದು ಕಾರ್ಪರೇಟ್ ದಿಗ್ಗಜರು ಆರೋಪಿ ಸ್ಥಾನದಲ್ಲಿದ್ದ ಪ್ರಕರಣವಾಗಿತ್ತು. ಆದ್ದರಿಂದ ಅಧಿಕಾರರೂಢರಾದ ಬಳಿಕ ಕಾರ್ಪರೇಟ್ ಹಿತಾಸಕ್ತಿ ಕಾಪಾಡುತ್ತಿರುವ ನರೇಂದ್ರ ಮೋದಿ ಸರಕಾರ ಅವರ ವಿರುದ್ಧ ತಿರುಗಿ ಬೀಳುವುದು ನಂಬಲು ಸಾಧ್ಯವೇ?
ಈ ಪ್ರಕರಣದಲ್ಲಿ ಸಿಬಿಐಯ ದೌರ್ಬಲ್ಯ ಬಹಿರಂಗವಾಗಿದೆ. ಈ ಹಗರಣದ ತನಿಖೆಯ ಪ್ರಾರಂಭದಲ್ಲಿ ಅತ್ಯುತ್ಸಾಹದಿಂದ ಕಾರ್ಯಾಚರಿ¸ ಸುತ್ತಿದ್ದ ಸಿಬಿಐ ದಿನಗಳೆದಂತೆ ಅದರ ಉತ್ಸಾಹಕ್ಕೆ ಮಬ್ಬು ಕವಿಯತೊಡಗಿ ಕೊನೆಗೆ ಸಂಪೂರ್ಣ ಮಸುಕಾಯಿತು ಎಂದು ನ್ಯಾಯಪೀಠವೇ ಹೇಳಿದೆ. 2014ರ ಲೋಕಸಭಾ ಚುನಾ ವಣೆಗಿಂತ ಮುಂಚೆ ಈ ಹಗರಣದಲ್ಲಿ ಪ್ರಧಾನಿ ಮನ್‍ಮೋಹನ್ ಸಿಂಗ್ ಮತ್ತು ಪಿ. ಚಿದಂಬರಮ್‍ರನ್ನು ಎಳೆದು ತರಲು ಬಿಜೆಪಿ ಪ್ರಯತ್ನಿಸಿತ್ತು. ಚುನಾವಣೆಯ ಬಳಿಕ ಆ ಪ್ರಯತ್ನದಿಂದ ಹಿಂದೆ ಸರಿಯಿತು. ತನ್ನ ಉದ್ದೇಶ ಈಡೇರಿದ ಬಳಿಕ ಅದು ಈ ರೀತಿ ಸುಮ್ಮನಾಯಿತು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಅನಿರೀಕ್ಷಿತವಾಗಿ ತಮಿಳುನಾಡಿಗೆ ಭೇಟಿಯಿತ್ತು ಕರುಣಾನಿಧಿಯನ್ನು ಭೇಟಿ ಮಾಡಿದರು. ವಿದೇಶದಲ್ಲಿದ್ದ ಸ್ಟಾಲಿನ್ ಕೂಡಾ ತನ್ನ ಪ್ರವಾಸ ಮೊಟಕುಗೊಳಿಸಿ ಅಲ್ಲಿಗೆ ತಲುಪಿದರು. ಮೂವರು ಪ್ರತ್ಯೇಕವಾದ ಸಭೆ ನಡೆಸಿದರು. ತಮಿಳುನಾಡಿನಲ್ಲಿ ಮುಂದಿನ ಚುನಾವಣೆಯಲ್ಲಿ ಡಿ.ಎಂ.ಕೆ. ಅಧಿಕಾರಕ್ಕೇರುವ ಸೂಚನೆಯಿದೆ. ಈ ಲಾಬಾವನ್ನು ಗಳಿಸಿ ಕೊಳ್ಳಲು ಬಿಜೆಪಿಯು ಇಂತಹ ಪ್ರಯತ್ನದಲ್ಲಿ ತೊಡಗಿರಬಹುದು ಎಂಬುದನ್ನು ತಳ್ಳಿಹಾಕುವಂತಿಲ್ಲ. ಯಾಕೆಂದರೆ, 2019ರ ಚುನಾವಣೆ ಯಲ್ಲಿ ಬಿಜೆಪಿ ಸರಳ ಬಹುಮತ ಪಡೆಯುವ ಬಗ್ಗೆ ಬಿಜೆಪಿಗೆ ಆತಂಕವಿದೆ. ಡಿಎಂಕೆ ಹೆಚ್ಚು ಸ್ಥಾನ ಗಳಿಸಿದರೆ ಅದನ್ನು ಸದುಪಯೋಗಪಡಿಸ ಬಹುದೆಂಬ ಲೆಕ್ಕಾಚಾರ ಅದರ ಹಿಂದಿರಬಹುದು. ವಸ್ತು ಸ್ಥಿತಿ ಹೀಗಿರುವಾಗ ಕನಿಮೋಳಿಗೋ ಅಥವಾ ರಾಜಾಗೋ ನೋವುಂಟು ಮಾಡಲು ಬಿಜೆಪಿ ಬಯಸಲಿಲ್ಲ. ಆದ್ದರಿಂದ ಪ್ರಾಸಿಕ್ಯೂಶನ್ ವಾದವೂ ದುರ್ಬಲವಾಯಿತು. ಸಿಬಿಐ ಕೂಡಾ ಹೆಸರಿಗೆ ಮಾತ್ರವಿತ್ತು. ತಮಗೆ ಆಪ್ತರಾದ ಕಾರ್ಪರೇಟ್ ದಿಗ್ಗಜರ ಹಿತವನ್ನು ಕಾಪಾಡ ಬೇಕಾದ ಅನಿವಾರ್ಯತೆ ಬಿಜೆಪಿಗಿತ್ತು.
2007ರಲ್ಲಿ ಈ ಪ್ರಕರಣ ಹೊರ ಬರುತ್ತಿದ್ದಂತೆ ಇದರ ಹಿಂದೆ ಕಾರ್ಪರೇಟ್ ದಿಗ್ಗಜರು ಶಾಮೀಲಾಗಿದ್ದಾ ರೆಂದು ಸಿಪಿಐ ನೇತಾರ ಧೀಪಾಂಕರ್ ಮುಖರ್ಜಿ ಪ್ರಧಾನಮಂತ್ರಿ ಕಾರ್ಯಾ ಲಯಕ್ಕೆ ನಿರಂತರ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಹಗರಣ ಗಸಿತ್ತಿತ್ತು. ಈ ಕಾರಣದಿಂದ ಕೇಂದ್ರ ವಿಜಿಲೆನ್ಸ್ ಕಮೀಶನ್ ಸಿಬಿಐ ತನಿಖೆಗೆ ನಡೆಸುವಂತೆ ಆದೇಶಿಸಿತ್ತು. ಇದೆಲ್ಲಾ ಆದ ಬಳಿಕ 2010ರಲ್ಲಿ ಸಿಐಜೆ ವರದಿ ಸಲ್ಲಿಸುತ್ತದೆ. ಆ ವರದಿಯಲ್ಲಿ 1.76 ಲಕ್ಷ ಕೋಟಿ ನಷ್ಟವು ಬೊಕ್ಕಸಕ್ಕೆ ಆಗಿದೆ ಎಂದು ತಿಳಿಸಲಾಗಿತ್ತು. ಇದನ್ನು ಪ್ರತಿಪಕ್ಷವು ಕೈಗೆತ್ತಿಕೊಂಡು ಬಿರುಗಾಳಿ ಯನ್ನೇ ಎಬ್ಬಿಸಿತ್ತು. ಆ ಬಳಿಕ ಸುಪ್ರೀಮ್ ಕೋರ್ಟು ಮಧ್ಯೆ ಪ್ರವೇಶಿಸಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ತನಿಖೆ ನಡೆಸಲಾಯಿತು. ಹೀಗೆ ಸಾಗುತ್ತಿದ್ದ ಈ ಪ್ರಕರಣವು ಬುಡಮೇಲು ಗೊಳಿಸಲ್ಪಡುವುದು ಆನಂತರವಾಗಿದೆ. ಈ ಪ್ರಕರಣಕ್ಕೆ ಸಾಕ್ಷಿಗಳಾಗಿ ಭಾಗ ವಹಿಸಿದವರು ಟೆಲಿಕಾಮ್ ಉದ್ಯೋ ಗಸ್ಥರು ಮತ್ತು ಆರೋಪಿ ಸ್ಥಾನ ದಲ್ಲಿರುವ ಕಂಪೆನಿಗಳ ಉದ್ಯೋಗಸ್ಥ ರಾಗಿದ್ದಾರೆ. ಅವರು ಸಿಬಿಐಗೆ ವಿರುದ್ಧ ವಾಗಿ ಸಾಕ್ಷಿ ಹೇಳಿದರು. ಏಳು ವರ್ಷಗಳ ಕಾಲ ನಿರಂತರ ವಾದ ಆಲಿಸಿದ ನ್ಯಾಯಾಧೀಶರು ಅಸಹಾಯಕ ರಾದರು. ಸಿಬಿಐ ತ ನಿಖೆಯ ಪ್ರಾರಂಭ ದಲ್ಲಿ ಪ್ರಮುಖ ಸಾಕ್ಷಿದಾರರಾಗಿ ಹೆಸರಿಸಲ್ಪಟ್ಟವರು ವಿಚಾರಣೆಯ ಸಂದರ್ಭ ನ್ಯಾಯಾಲಯಕ್ಕೆ ಆಗಮಿಸ ಲಿಲ್ಲ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಅವರನ್ನು ಕರೆತರಲು ಪ್ರಾಸಿಕ್ಯೂಶನ್ ಕೂಡಾ ಆಸಕ್ತಿ ತೋರಲಿಲ್ಲ. ಆದ್ದರಿಂದ 2014ರಲ್ಲಿ ಬಿಜೆಪಿ ಇದನ್ನೇ ಚುನಾ ವಣಾ ವಿಷಯವನ್ನಾಗಿಸಿ ಅಧಿಕಾರಕ್ಕೇರಿ ಮೂರು ವರ್ಷಗಳ ಕಾಲ ತನಿಖೆ, ವಿಚಾರಣೆಗಳು ನಡೆದಿದ್ದರೂ ಅದಕ್ಕೆ ವಿಶೇಷ ಪ್ರಾಧಾನ್ಯತೆ ಕಲ್ಪಿಸಿಲ್ಲ ಎಂಬುದು ವೇದ್ಯವಾಗುತ್ತದೆ. ಕಾರ್ಪರೇಟ್ ದಿಗ್ಗಜರಿಗೆ ಕಾಂಗ್ರೆಸ್ ಅಧಿಕಾರಕ್ಕೇರಿ ದರೂ ಸರಿ. ಬಿಜೆಪಿ ಅಧಿಕಾರಕ್ಕೇರಿ ದರೂ ಸರಿ ಅವರು ತಮ್ಮ ಕಾರ್ಯ ವನ್ನು ಸಾಧಿಸುತ್ತಾರೆ ಎಂಬುದನ್ನು ಈ ಪ್ರಕರಣ ಸೂಚಿಸುತ್ತದೆ.