ಇಬ್ಬರು ಭಾರತೀಯ ಅಧಿಕಾರಿಗಳು ಪಾಕಿಸ್ತಾನದಲ್ಲಿ ನಾಪತ್ತೆ!

0
146

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.15: ಭಾರತ ಹೈ ಕಮಿಷನ್ ಕಚೇರಿಯ ಇಬ್ಬರು ಅಧಿಕಾರಿಗಳು ಪಾಕಿಸ್ತಾನದಲ್ಲಿ ಕಾಣೆಯಾಗಿದ್ದಾರೆ. ಎಎನ್‍ಐ ಈ ಕುರಿತು ವರದಿ ಮಾಡಿದ್ದು, ಸೋಮವಾರ ಬೆಳಗ್ಗೆ ಎಂಟು ಗಂಟೆಯಿಂದ ಇಬ್ಬರು ಕಂಡು ಬಂದಿಲ್ಲ. ಈ ವಿಷಯದಲ್ಲಿ ಕೂಡಲೇ ಕ್ರಮ ಜರಗಿಸಬೇಕೆಂದು ಭಾರತ ಪಾಕಿಸ್ತಾನವನ್ನು ಆಗ್ರಹಿಸಿದೆ.

ಈ ಹಿಂದೆ ಗೂಢಚಾರಿಕೆ ಆರೋಪದಲ್ಲಿ ಇಬ್ಬರು ಪಾಕಿಸ್ತಾನಿ ಅಧಿಕಾರಿಗಳನ್ನು ಭಾರತ ಗಡೀಪಾರು ಮಾಡಿತ್ತು. ಇದಾದ ನಂತರ ಭಾರತ ಹೈ ಕಮಿಷನ್ ಅಧಿಕಾರಿಗಳನ್ನು ಪಾಕಿಸ್ತಾನದ ಗುಪ್ತಚಾರ ಏಜೆನ್ಸಿ ದೊಡ್ಡ ರೀತಿಯಲ್ಲಿ ತೊಂದರೆಗೊಳಪಡಿಸುತ್ತಿದೆ ಎಂದು ವರದಿಗಳು ಬಂದಿದ್ದವು. ಭಾರತದ ಕ್ರಮಕ್ಕೆ ಪ್ರತಿಕ್ರಿಯೆ ಎಂಬಂತೆ ಇಬ್ಬರು ಅಧಿಕಾರಿಗಳನ್ನು ಪಾಕಿಸ್ತಾನವೂ ಭಾರತಕ್ಕೆ ಕಳುಹಿಸಲಿದೆ ಎಂದು ವರದಿಯಾಗಿದ್ದು, ಈಗ ಔದ್ಯೋಗಿಕ ಅಗತ್ಯತೆಗಳಿಗಾಗಿ ತೆರಳಿದ ಹೈ ಕಮಿಷನ್‌ ನ ಅಧಿಕಾರಿಗಳು ಕಾಣೆಯಾಗಿದ್ದಾರೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here