2011 ರಿಂದ 634 ಪತ್ರಕರ್ತರು ಕೊಲ್ಲಲ್ಪಟ್ಟರು- ಮಾನವ ಹಕ್ಕು ವರದಿ

0
1710


ಸಿರಿಯ:2011 ರಿಂದ ಸಿರಿಯದಲ್ಲಿ 634 ಪತ್ರಕರ್ತರು ಕೊಲ್ಲಲ್ಪಟ್ಟಿರುವುದಾಗಿ ಸಿರಿಯಾದ ಮಾನವ ಹಕ್ಕುಗಳ ಗುಂಪು ತಿಳಿಸಿದೆ.
ಪತ್ರಕರ್ತರ ವಿರುದ್ಧದ ದಬ್ಬಾಳಿಕೆಗಳ ವಿರೋಧಿ ಅಂತಾರಾಷ್ಟ್ರೀಯ ದಿನದ ಪ್ರಯುಕ್ತ “ಹತರಾದ 634 ಪತ್ರಕರ್ತರಿಗೆ ನ್ಯಾಯವನ್ನೊದಗಿಸಬೇಕೆಂದು ನಾವು ಆಗ್ರಹಿಸುತ್ತೇವೆ” ಎಂದು ಮಾನವ ಹಕ್ಕುಗಳ ಗುಂಪು ಬೇಡಿಕೆಯನ್ನಿರಿಸಿದೆ.
2011 ರಿಂದ ಆರಂಭವಾದ ಸ್ವಾತಂತ್ರ್ಯ ಚಳುವಳಿಯ ತದ ನಂತರದ 7 ವರ್ಷಗಳಲ್ಲಿ 634 ಪತ್ರಕರ್ತರು ಸೇರಿದಂತೆ ಸಾವಿರಾರು ಸಿರಿಯನ್ ಪ್ರಜೆಗಳು ಹತರಾಗಿರುವುದನ್ನು ಮಾನವ ಹಕ್ಕುಗಳ ಗುಂಪು ಸ್ಮರಿಸಿದೆ. ಸಿರಿಯಾದ ಆಡಳಿತಾವಧಿಯಲ್ಲಿ ಪತ್ರರ್ತರ ಮೇಲೆ 83% ದಬ್ಬಾಳಿಕೆ ನಡೆದಿದೆ. ಆಡಳಿತ ಪಡೆಗಳು 526 ಜನರನ್ನು ಹತ್ಯೆಗೈದಿದ್ದರೆ ರಷ್ಯಾ ಪಡೆಯು 16, ಸೈನಿಕ ಪಡೆಗಳು 52, ಐಸಿಸ್‍ನಿಂದ 46, ಅಲ್ ನುಸ್ರಾ ಫ್ರಂಟ್‍ನಿಂದ 6, ವಿರೋಧಿ ಪಡೆಗಳು 21 ಹಾಗೂ ಖುರ್ದಿಶ್ ಡೆಮಾಕ್ರೆಟಿಕ್ ಯೂನಿಯನ್ ಪಾರ್ಟಿಯು 16 ಪತ್ರಕರ್ತರನ್ನು ಕೊಂದಿದೆ. ಎಲ್ಲ ಪಕ್ಷಗಳಿಂದ ನಡೆಸಲಾದ ಪತ್ರಕರ್ತರ ಬಂಧನ ಅಪಹರಣಗಳ ಕುರಿತಾದ 1,124 ಪ್ರಕರಣಗಳ ಕುರಿತು ಹಕ್ಕುಗಳ ಗುಂಪು ಉಲ್ಲೇಖಿಸಿದೆ. ಅವುಗಳಲ್ಲಿ 408 ಪ್ರಕರಣಗಳು ಪತ್ರಕರ್ತರು ಕಾಣೆಯಾಗಿರುವ ಕುರಿತು ಹಾಗೂ ನಾಪತ್ತೆಯಾಗಿರುವ ಕುರಿತು ದಾಖಲಾಗಿವೆ ಎಂದು ಮಾನವಹಕ್ಕುಗಳ ಗುಂಪು ತಿಳಿಸಿದೆ.