ಕೋಮುಗಲಭೆ: ; ಉ. ಪ್ರದೇಶ ಪ್ರಥಮ

0
735

ನವದೆಹಲಿ: ಕಳೆದ ಒಂದು ವರ್ಷದಲ್ಲಿ (2017) ದೇಶಾದ್ಯಂತ 822 ಕೋಮುಗಲಭೆಗಳು ನಡೆದಿವೆಯೆಂದು ಸರ್ಕಾರವು ಲೋಕಸಭೆಗೆ ತಿಳಿಸಿದೆ. ಕೋಮು ಗಲಭೆಗಳ ಸಂಖ್ಯೆಯಲ್ಲಿ ಉತ್ತರ ಪ್ರದೇಶವು ಮೊದಲನೇ ಸ್ಥಾನದಲ್ಲಿದ್ದರೆ, ಕರ್ನಾಟಕವು 2ನೇ ಸ್ಥಾನದಲ್ಲಿದೆ.
2017ರಲ್ಲಿ ನಡೆದ 822 ಕೋಮುಗಲಭೆಗಳಲ್ಲಿ 111 ಮಂದಿ ಸಾವನಪ್ಪಿದ್ದಾರೆ ಹಾಗೂ 2384 ಮಂದಿ ಗಾಯಗೊಂಡಿದ್ದಾರೆ ಎಂದು , ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಹಂಸರಾಜ್ ಆಹಿರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಸರ್ಕಾರವು ನೀಡಿದ ಅಂಕಿಅಂಶಗಳನ್ನು ಗಮನಿಸಿದಾಗ ಕಳೆದ ಮೂರು ವರ್ಷಗಳಲ್ಲಿ ಕೋಮು ಗಲಭೆಗಳ ಸಂಖ್ಯೆ ಹೆಚ್ಚಾಗಿರುವುದನ್ನು ಗಮನಿಸಬಹುದು. 2016ರಲ್ಲಿ 703 ಕೋಮುಗಲಭೆಗಳು ನಡೆದಿದ್ದು, 86 ಮಂದಿ ಸಾವನಪ್ಪಿದ್ದರೆ, 2321 ಮಂದಿ ಗಾಯಗೊಂಡಿದ್ದರು. 2015ರಲ್ಲಿ, 751 ಕೋಮು ಗಲಭೆಗಳಲ್ಲಿ 97 ಮಂದಿ ಮೃತಪಟ್ಟಿದ್ದು, 2264 ಮಂದಿ ಗಾಯಗೊಂಡಿದ್ದರು.

ಉತ್ತರ ಪ್ರದೇಶದಲ್ಲಿ ಕಳೆದ ವರ್ಷ ಅತೀ ಹೆಚ್ಚು ಕೋಮುಗಲಭೆಗಳು ನಡೆದಿವೆ. 195 ಕೋಮುಗಲಭೆಗಳಲ್ಲಿ 44 ಮಂದಿ ಮೃತಪಟ್ಟಿದ್ದು, 542 ಮಂದಿ ಗಾಯಗೊಂಡಿದ್ದಾರೆಂದು ಸಚಿವರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಬಳಿಕ ಕರ್ನಾಟಕದಲ್ಲಿ 100 ಕೋಮುಗಲಭೆಗಳು ನಡೆದಿವೆ. ಅವುಗಳಲ್ಲಿ 9 ಮಂದಿ ಸಾವನಪ್ಪಿದ್ದು, 229 ಮಂದಿ ಗಾಯಗೊಂಡಿದ್ದಾರೆ.

ರಾಜಸ್ಥಾನದಲ್ಲಿ 91, ಬಿಹಾರದಲ್ಲಿ 85, ಮಧ್ಯ ಪ್ರದೇಶದಲ್ಲಿ 60, ಪಶ್ಚಿಮ ಬಂಗಾಳದಲ್ಲಿ 58 ಹಾಗೂ ಗುಜರಾತಿನಲ್ಲಿ 50 ಗಲಭೆಗಳು ನಡೆದಿವೆ ಎಂದು ಹಂಸರಾಜ್ ಆಹಿರ್ ತಿಳಿಸಿದ್ದಾರೆ. ಅವುಗಳಲ್ಲಿ ಸಂಭವಿಸಿದ ಸಾವುನೋವುಗಳ ಸಂಖ್ಯೆ ಇಂತಿದೆ.
2017ರಲ್ಲಿ ನಡೆದ ಕೋಮುಗಲಭೆಗಳು:

LEAVE A REPLY

Please enter your comment!
Please enter your name here