2018 ಫುಟ್ಬಾಲ್ : ಮುಹಮ್ಮದ್ ಶೆನಾವಿಯಿಂದ ಆಸ್ಟ್ರೇಲಿಯಾದ ಅಜೇಜ್ ಬೇಹಿಚ್ ವರೆಗೆ; ಇದು ನೀವು ಎಲ್ಲೂ ಓದಿರದ ಸುದ್ದಿ

0
1224

ಇರ್ಷಾದ್ ಬೆಂಗಳೂರು

ಜೂನ್ 15 ರಂದು ನಡೆದ ಉರುಗ್ವೆ ವಿರುದ್ಧದ ಫುಟ್ಬಾಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಈಜಿಪ್ಟಿನ ಗೋಲ್ ಕೀಪರ್ ಮುಹಮ್ಮದ್ ಎಲ್ ಶೆನಾವಿ ಮದ್ಯ ತಯಾರಿಕೆ ಕಂಪನಿ ಪ್ರಾಯೋಜಿಸಿದ್ದ ಪಂದ್ಯ ಪ್ರಶಸ್ತಿಯನ್ನು ನಿರಾಕರಿಸಿ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ.ಇದರಿಂದ ರಷ್ಯಾದಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವಕಪ್ ನಲ್ಲಿ ಭಾಗವಹಿಸುತ್ತಿರುವ ಮುಸ್ಲಿಮ್ ಆಟಗಾರರೆಷ್ಟು ಎಂಬ ಕುತೂಹಲ ಮೂಡಿತು.
ಹಿಂದೆ ಫ್ರಾನ್ಸ್ ನ ಮಾಜಿ ನಾಯಕ ಜಿನೆದಿನ್ ಜಿದಾನ್ ಎಲ್ಲರಿಗೂ ಚಿರಪರಿಚಿತರಾಗಿದ್ದರು ಇತ್ತೀಚೆಗೆ ಈಜಿಪ್ಟ್‌ನ ಮೊಹಮ್ಮದ್ ಸಲಾಹ್ ಮತ್ತು ಸೆನೆಗಲ್ ತಂಡದ ಸಾದಿಓ ಮಾನೆ ಫುಟ್ಬಾಲ್ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ.
ವಿಶ್ವಕಪ್ ನಲ್ಲಿ ಭಾಗವಹಿಸುತ್ತಿರುವ 32 ತಂಡಗಳ ಪೈಕಿ 12 ತಂಡಗಳಲ್ಲಿ ಒಟ್ಟು 155 ಮುಸ್ಲಿಮ್ ಆಟಗಾರರು 2018 ರ ಫುಟ್ಬಾಲ್ ವಿಶ್ವಕಪ್ ನಲ್ಲಿ ಆಡುತ್ತಿದ್ದಾರೆ. ಈಜಿಪ್ಟ್ , ಸೌದಿ ಅರೇಬಿಯಾ , ಮೊರಕ್ಕೊ , ಇರಾನ್ , ನೈಜೇರಿಯಾ , ಟುನಿಷಿಯಾ ಮತ್ತು ಸೆನೆಗಲ್ ತಂಡಗಳಲ್ಲಿ ಸಹಜವಾಗಿ ಬಹುತೇಕ ಆಟಗಾರರು ಮುಸ್ಲಿಮರಾಗಿದ್ದಾರೆ.
ಆದರೆ ಯೂರೋಪಿಯನ್ ತಂಡಗಳಲ್ಲಿಯೂ ಮುಸ್ಲಿಮ್ ಆಟಗಾರರ ಸಂಖ್ಯೆ ಕಡಿಮೆ ಏನಿಲ್ಲ.

ಬೆಲ್ಜಿಯಮ್
ಮೂಸಾ ಡೆಮ್ಬೆಲೆ , ಮರೌನೆ ಫೆಲ್ಲಾನಿ ಮತ್ತು ಅದ್ನಾನ್ ಎಂಬ ಮಿಡ್ ಫೀಲ್ಡ್ ಆಟಗಾರರಿದ್ದಾರೆ.

ಫ್ರಾನ್ಸ್
ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಫ್ರಾನ್ಸ್ ತಂಡದಲ್ಲಿ ಬೆಂಜಮಿನ್ ಮೆಂಡಿ , ಆದಿಲ್ ರಮಿ , ಡಿಜಿಬ್ರೀಲ್ , ಔಸ್ಮಾನೆ ಡೆಂಬೆಲೆ ಸೇರಿದಂತೆ ಕಾಂಟೆ ಮತ್ತು ಪೋಗ್ಬಾದಂಥ ಪ್ರಸಿದ್ಧ ಆಟಗಾರರಿದ್ದಾರೆ.

ಜರ್ಮನಿ
ಹಾಲಿ ಚಾಂಪಿಯನ್ ಜರ್ಮನಿಯಲ್ಲಿ ಆಂಟೊನಿಯೊ , ಸಮಿ ಖೆದ್ರಿಯಾ ಮತ್ತು ಓಜಿಲ್ ಪ್ರಮುಖ ಆಟಗಾರರಾಗಿದ್ದಾರೆ.

ಸ್ವಿಟ್ಜರ್ಲೆಂಡ್
ಶಾಕಿರಿ ಮತ್ತು ಹಾರಿಸ್ ಸೇರಿದಂತೆ ಒಟ್ಟು 5 ಮುಸ್ಲಿಮ್ ಆಟಗಾರರಿದ್ದಾರೆ.

ಇದಲ್ಲದೆ ರಷ್ಯಾ ತಂಡದಲ್ಲಿ
ದಲೆರ್ ಕುಜ್ ಯಾವ್ ಮತ್ತು ಆಸ್ಟ್ರೇಲಿಯಾ ತಂಡದಲ್ಲಿ ಅಜೀಜ್ ಬೇಹಿಚ್ ಆಡುತ್ತಿದ್ದಾರೆ.

ಹೀಗೆ ರಷ್ಯಾದಲ್ಲಿ ನಡೆಯತ್ತಿರುವ ಫುಟ್ಬಾಲ್ ವಿಶ್ವ ಕಪ್ ನಲ್ಲಿ ಭಾಗವಹಿಸಿರುವ ಒಟ್ಟು 736 ಆಟಗಾರರಲ್ಲಿ ಸುಮಾರು 155 ಮುಸ್ಲಿಮ್ ಆಟಗಾರರಿರುವುದು ಫುಟ್ಬಾಲ್ ಮುಸ್ಲಿಮ್ ದೇಶಗಳಲ್ಲಿ ಅತ್ಯಂತ ಜನಪ್ರಿಯ ಆಟವೆಂದು ತಿಳಿಯುತ್ತದೆ.