ರಫೇಲ್: ಕಳ್ಳ ದಾಖಲೆಗಳನ್ನು ಮರಳಿಸಿರಬಹುದು- ಪಿ.ಚಿದಂಬರಂ

0
1457

ಹೊಸದಿಲ್ಲಿ: ರಫೇಲ್ ಒಪ್ಪಂದದ ದಾಖಲೆಗಳು ಕಳವಾಗಿದೆ ಎಂದು ಅಟಾರ್ನಿ ಜನರಲ್ ಕೆ.ವೇಣುಗೋಪಾಲ್‍ರ ಸುಪ್ರೀಂಕೋರ್ಟಿನಲ್ಲಿ ತಿಳಿಸಿದ್ದನ್ನು ಉದ್ಧರಿಸಿ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಸರಕಾರವನ್ನು ಟೀಕಿಸಿದ್ದಾರೆ. ಬಹುಶಃ ಕಳ್ಳ ದಾಖಲೆಗಳನ್ನು ಮರಳಿಸಿರಬಹುದು ಎಂದು ಚಿದಂಬರಂ ಶನಿವಾರ ಟ್ವೀಟ್ ಮಾಡಿದ್ದಾರೆ.

ಸರಕಾರ ಬುಧವಾರ ದಾಖಲೆ ಕಳ್ಳತನವಾಗಿದೆ ಎಂದು ಹೇಳಿತು. ಶುಕ್ರವಾರ ದಾಖಲೆಗಳ ಝೆರಾಕ್ಸ್ ಪ್ರತಿ ಕಳವಾಗಿದೆ ಎಂದು ಹೇಳಿದೆ. ನನಗೆ ಗುರುವಾರ ಕಳ್ಳ ದಾಖಲೆಗಳನ್ನು ಮರಳಿ ತಂದು ಕೊಟ್ಟಿರಬಹುದು ಎಂದು ನನಗೆ ಅನಿಸುತ್ತದೆ. ಸರಕಾರದ ತಿಳುವಳಿಕೆಗೆ ತಾನು ನಮಸ್ಕಾರ ಮಾಡುವೆ ಎಂದು ಚಿದಂಬರಂ ವ್ಯಂಗ್ಯವಾಡಿದರು.

ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಶುಕ್ರವಾರ ರಫೇಲ್ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳ್ಳತನವಾಗಿಲ್ಲ ಎಂದು ಹೇಳಿದ್ದರು. ಮತ್ತು ಅರ್ಜಿದಾರರು ರಫೇಲ್ ದಾಖಲೆಗಳ ಪ್ರತಿಯನ್ನು ಬಳಸಿದ್ದಾರೆ ಎಂದು ಅವರು ಸುಪ್ರೀಂ ಕೋರ್ಟಿನಲ್ಲಿ ಹೇಳ ಬಯಸಿದ್ದರು ಎಂದು ತಿಳಿಸಿದ್ದರು.

ಇದಕ್ಕಿಂತ ಮೊದಲು ಬುಧವಾರ ಸುಪ್ರೀಂ ಕೋರ್ಟಿನಲ್ಲಿ ರಕ್ಷಣಾ ಸಚಿವಾಲಯದಿಂದ ರಫೇಲ್ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ಕಳ್ಳತನವಾಗಿದೆ ಮತ್ತು ಈ ದಾಖಲೆಗಳ ಆಧಾರದಲ್ಲಿ ಅರ್ಜಿದಾರರು ವಿಮಾನ ಖರೀದಿಯ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಅರ್ಜಿ ರದ್ದುಗೊಳಿಸುವ ಕುರಿತು ಮರು ಚಿಂತನೆ ನಡೆಸಬೇಕೆಂದು ಹೇಳಿದ್ದರು. ನಿರುದ್ಯೋಗದ ಕುರಿತು ಸರಕಾರವನ್ನು ಟೀಕಿಸಿದೆ ಮಾಜಿ ವಿತ್ತ ಸಚಿವ ಚಿದಂಬರಂ ಮುಂದಿನ ಲೋಕಸಭಾಯಲ್ಲಿ ಮುಖ್ಯ ಮೂರು ಚುನಾವಣಾ ವಿಷಯ ಚರ್ಚೆಗೆ ಬರಲಿದ್ದು,ಅದು ಉದ್ಯೋಗ, ಉದ್ಯೋಗ, ಉದ್ಯೋಗ ಎಂದು ಹೇಳಿದರು.